|
| ಮೊದಲ ಟೆಸ್ಟ್: ಮಂದ ಬೆಳಕಿನ ಕಾಟ; ಲಂಕಾದ 2 ವಿಕೆಟ್ ಪತನ |
| ಕೊಲೊಂಬೊ, ಬುಧವಾರ, 23 ಜುಲೈ 2008 ( 17:56 IST ) | |
ಮಂದ ಬೆಳಕಿನ ಕಾರಣ ತಡವಾಗಿ ಪ್ರಾರಂಭವಾದ ಶ್ರೀಲಂಕಾ ಮತ್ತು ಭಾರತ ನಡುವಿನ ಮೊದಲ ಟೆಸ್ಟ್‌ನ ಮೊದಲ ದಿನ ಕೇವಲ 22 ಓವರುಗಳ ಆಟ ಕಂಡಿದ್ದು, ಈ ಅಲ್ಪಾವಧಿಯ ಆಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಶ್ರೀಲಂಕಾದ ಎರಡು ವಿಕೆಟನ್ನು ಕಬಳಿಸುವಲ್ಲಿ ಭಾರತ ಯಶಸ್ವಿಯಾಗಿದೆ. ಮಂದ ಬೆಳಕಿನ ಕಾರಣ ದಿನದ ಆಟವನ್ನು ಮುಗಿಸಿದಾಗ ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 85 ರನ್ನು ಕಲೆಹಾಕಿತ್ತು.
ಆಟ ಮುಗಿದಾಗ ಶ್ರೀಲಂಕಾ ಪರ ಕ್ರೀಸಿನಲ್ಲಿ ಅರ್ಧಶತಕದಾರಿ ವರ್ನಾಪುರ (50) ಮತ್ತು ನಾಯಕ ಜಯವರ್ಧನೆ (16) ಆಡುತ್ತಿದ್ದರು.
ಯುವ ವೇಗಿ ಇಶಾಂತ್ ಶರ್ಮಾ ಲಂಕಾದ ಆರಂಭಿಕ ಆಟಗಾರ ಎಂಜಿ ವೆನ್ಡೋರ್ಡ್ ವಿಕೆಟನ್ನು ಕಬಳಿಸುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದು ಕೊಟ್ಟರು. ವೆನ್ಡೋರ್ ಕೇವಲ 3 ರನ್ನು ಮಾಡಿ ಶರ್ಮಾರ ಎಲ್ಬಿ ಬಲೆಗೆ ಸಿಕ್ಕಿ ಬಿದ್ದರು.
ನಂತರ ಬಂದ ಸಂಗಾಕ್ಕರ ಈ ಕಡೆ ಉತ್ತಮ ಟಚ್‌ನಲ್ಲಿರುವ ಆರಂಭಿಕ ಆಟಗಾರ ವರ್ನಾಪುರ್ ಜತೆ ಗೂಡಿ ತಂಡವನ್ನು ಆರಂಭಿಕ ಕುಸಿತದಿಂದ ಉಳಿಸಲು ಪ್ರಯತ್ನಿಸಿದರು. ಇವರಿಬ್ಬರ ಜತೆಯಾಟ ಅಪಾಯಕಾರಿಯಾಗುತ್ತಿರುವಂತೆಯೇ ಜಹೀರ್ ಖಾನ್ ಸಂಗಾಕ್ಕರರ ಬಹು ಮುಖ್ಯ ವಿಕೆಟನ್ನು ಕಬಳಿಸಿದರು.
ಸಂಗಾಕ್ಕರ (12) ಜಹೀರ್ ಖಾನ್‌ರ ಬೌಲನ್ನು ಸರಿಯಾಗಿ ಓದುವಲ್ಲಿ ವಿಫಲರಾಗಿ ಸ್ಲಿಪ್‌ನಲ್ಲಿದ್ದ ರಾಹುಲ್ ದ್ರಾವಿಡ್ ಕೈಗೆ ಕ್ಯಾಚ್ ನೀಡದರು. ಅದಾಗ ತಂಡದ ಮೊತ್ತ 57 ಆಗಿತ್ತು.
ಈ ಕಡೆ ಆರಂಭಿಕ ಆಟಗಾರ ವರ್ನಾಪುರ ಉತ್ತಮವಾಗಿ ಆಡಿ ತಮ್ಮ ಮೂರನೇ ಟೆಸ್ಟ್ ಅರ್ಧ ಶತಕ ಭಾರಿಸಿದರು. ಇವರಿಗೆ ನಾಯಕ ಜಯವರ್ಧನೆ ಉತ್ತಮ ಸಾತ್ ನೀಡಿ ಶ್ರೀಲಂಕಾ ಮತ್ತಷ್ಟು ಆಘಾತ ಕಾಣದಂತೆ ನೋಡಿಕೊಂಡರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|