|
| ಮಳೆ ಕಾಟ: ಮೊದಲ ಟೆಸ್ಟ್‌ನ ಆರಂಭದಲ್ಲಿ ವಿಳಂಬ |
| ಕೊಲೊಂಬೊ, 23 ಜುಲೈ 2008 ( 13:26 IST ) | |
ರಾತ್ರಿ ಸುರಿದ ಭಾರಿ ಮಳೆಯಿಂದ ಮೈದಾನ ಒದ್ದೆಯಾಗಿರುವ ಕಾರಣ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯ ವಿಳಂಬವಾಗಿ ಪ್ರಾರಂಭವಾಗಲಿದೆ.
ಬೆಳಗಿನ ವೇಳೆ ಲಘುವಾಗಿ ಮಳೆ ಸುರಿಯುತ್ತಿದ್ದು, ಮೈದಾನದ 90ಶೇ. ಗಿಂತಲೂ ಅಧಿಕ ಭಾಗವನ್ನು ಮುಚ್ಚಲಾಗಿತ್ತು. ಸದ್ಯ ಪರಿಸ್ಥಿತಿಯಲ್ಲಿ ಸ್ಲಲ್ಪ ಸುಧಾರಣೆ ಕಂಡಿದ್ದು, ಹೊದಿಕೆಗಳನ್ನು ಮೈದಾನದಿಂದ ತೆಗೆಯಲಾಗಿದೆ.
ಯಾವುದೇ ಬೌಲಿಂಗ್ ಕಾಣದೆಯೇ ಊಟದ ವಿರಾಮವನ್ನು ತೆಗೆದುಕೊಳ್ಳಲಾಗಿದೆ. 1 ಗಂಟೆಗೆ ಅಂಪಾಯರುಗಳು ಮೈದಾನವನ್ನು ಪರಿಶೀಲಿಸಲಿದ್ದು, ಒಂದು ವೇಳೆ ಪರಿಸ್ಥಿತಿ ಆಡಲು ಯೋಗ್ಯವಾಗಿದ್ದರೆ, 1.40 ಗಂಟೆಗೆ ಆಟ ಪ್ರಾರಂಭವಾಗಲಿದೆ.
ಏಷಿಯಾ ಖಂಡದ ಎರಡು ದೈತ್ಯ ತಂಡಗಳು ಪರಸ್ಪರ ಸೆಣಸಲಿದ್ದು, ಈ ಸರಣಿ ಅನೇಕ ವಿಷಯಗಳಿಗೆ ಸಾಕ್ಷಿಯಾಗಲಿದೆ. ಮೊದಲನೆಯದಾಗಿ ಸಚಿನ್ ತೆಂಡುಲ್ಕರ್‌ರ ಅಧಿಕ ಟೆಸ್ಟ್ ರನ್ ಕಲೆ ಹಾಕುವ ದಾಖಲೆ, ಎರಡನೆಯದಾಗಿ ಹೊಸ ಸ್ಪಿನ್ ಘಾತಕ ಅಜಂತಾ ಮೆಂಡೀಸ್‌ರಿಗೆ ಇದು ಚೊಚ್ಚಲ ಟೆಸ್ಟ್ ಪಂದ್ಯವಾಗಲಿದೆ.
ಕಳೆದ ಬಾರಿಯ 2001ರಲ್ಲಿನ ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ 2-1ರಲ್ಲಿ ಸೋಲು ಕಂಡಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ತವರು ತಂಡ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟಿಂಡೀಸ್ ಮತ್ತು ಬಾಂಗ್ಲಾದೇಶವನ್ನು ಸೋಲಿಸಿತ್ತು. 2004 ರಿಂದೀಚಿಗಿನ ತಮ್ಮ 16 ತವರು ಟೆಸ್ಟ್‌ಗಳಲ್ಲಿ ಲಂಕಾ ಕೇವಲ ಒಂದು ಪಂದ್ಯವನ್ನು ಮಾತ್ರ ಸೋತಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|