|
| ಲಾಸ್ ಏಂಜೆಲ್ಸ್ ಕ್ಲಾಸಿಕ್‌ನಿಂದ ಹಿಂದೆ ಸರಿದ ಸೆರೆನಾ |
| ಲಾಸ್ ಏಂಜೆಲ್ಸ್, ಬುಧವಾರ, 23 ಜುಲೈ 2008 ( 12:03 IST ) | |
ಮೊಣಕಾಲು ನೋವಿನ ಕಾರಣ ಎರಡನೇ ಶ್ರೇಯಾಂಕಿತೆ ಅಮೆರಿಕದ ಸೆರೆನಾ ವಿಲಿಯಮ್ಸ್ ಲಾಸ್ ಏಂಜೆಲ್ಸ್ ಕ್ಲಾಸಿಕ್‌ನಿಂದ ಹಿಂದೆ ಸರಿದಿದ್ದಾರೆ ಎಂದು ಟೂರ್ನಮೆಂಟ್ ವೆಬ್‌ಸೈಟಿನಲ್ಲಿ ಘೋಷಿಸಲಾಗಿದೆ.
ಇಂದು ಬೆಳಗ್ಗೆ ನೋವಿನ ಅನುಭವವಾದ ಕಾರಣ, ತನಗೆ ಈ ವಾರದ ಟೂರ್ನಮೆಂಟಿನಲ್ಲಿ ಆಡಲು ಸಾಧ್ಯವಿಲ್ಲ ಎಂಬುದು ಅರಿವಾಯಿತು ಎಂದು ವಿಲಿಯಮ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮ್ಮ ಎಡ ಮೊಣಕಾಲು ಗಾಯದಿಂದ ಸ್ಟ್ಯಾಂಡ್‌ಫೋರ್ಡ್ ಕ್ಲಾಸಿಕ್‌ನ ಸೆಮಿಫೈನಲ್‌ನಿಂದ ಹಿಂದೆಸರಿದ ಬಳಿಕ ವಿಶ್ವ ನಂಬರ್ 5 ಸೆರೆನಾ ಈ ಟೂರ್ನಮೆಂಟಿನಲ್ಲಿ ಆಡುವುದು ಅನುಮಾನಕರವಾಗಿತ್ತು.
ಸೆರೆನಾರ ಸಹೋದರಿ ವಿಂಬಲ್ಡನ್ ಚಾಂಪಿಯನ್ ವೀನಸ್, ರಷ್ಯಾದ ಸ್ವೆಟ್ಲಾನಾ ಕುಜ್ನೆಟ್ಸೋವ, ಅಮೆರಿಕದ ಲಿಂಡ್ಸೆ ಡಾವೆನ್ಪೋರ್ಟ್ ಕೂಡ ಗಾಯದ ಕಾರಣ ಟೂರ್ನಮೆಂಟಿನಿಂದ ಹೊರ ನಡೆದಿದ್ದಾರೆ. ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿಯಬೇಕಾದುದರ ಬಗ್ಗೆ ಸೆರೆನಾ ಭಾರಿ ನಿರಾಶೆ ವ್ಯಕ್ತಪಡಿಸಿದ್ದಾರೆ.
ತಾನು ತೀವ್ರ ತರದ ಚಿಕಿತ್ಸೆಗೊಳಗಾಗಿದ್ದು, ಈ ವಾರದ ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಶಕ್ತಿಮೀರಿ ಪ್ರಯತ್ನಿಸಿದೆ ಮತ್ತು ಈ ಟೂರ್ನಿಯಲ್ಲಿ ಆಡಲು ಸಾಧ್ಯವೋ ಎಂಬುದಾಗಿ ಕೊನೆಯ ಕ್ಷಣದವರೆಗೆ ಕಾದೆ ಎಂದು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|