ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
2011 ವಿಶ್ವಕಪ್ ಮುನ್ನ ಹೇಡನ್ ನಿವೃತ್ತಿ
ಮೆಲ್ಬೋರ್ನ್, ಬುಧವಾರ, 23 ಜುಲೈ 2008   ( 10:48 IST )
ಮ್ಯಾಥ್ಯೂ ಹೇಡನ್ ಕೈಯಿಂದ ಚಚ್ಚಿಸಿಕೊಂಡ ಬೌಲರುಗಳು ಮುಂದೆ ಕೊಂಚ ನೆಮ್ಮದಿಯ ಉಸಿರು ಬಿಡಬಹುದಾಗಿದೆ. ಕಾರಣ ಆಸಿಸ್‌ನ ಈ ಆಕ್ರಮಣಕಾರಿ ದಾಂಡಿಗ ಭಾರತೀಯ ಉಪಖಂಡದಲ್ಲಿ ನಡೆಯಲಿರುವ 2011ರ ವಿಶ್ವಕಪ್ ಮುನ್ನ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.

ಮಾರ್ಕ್ ವಾ ತಮಗೆ ಅವಕಾಶ ಮಾಡಿದಂತೆ, ತಾನೂ ಮುಂದಿನ ಪೀಳಿಗೆಯ ಆಸಿಸ್ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ 36 ವರ್ಷದ ಹೇಡನ್ ಮುಂದಿನ ದಿನಗಳನ್ನು ಸಂಧಿಕಾಲವಾಗಿ ಮೀಸಲಿಟ್ಟಿದ್ದು, ನಂತರ ಏಕದಿನ ಕ್ರಿಕೆಟ್‌ಗೆ ಗುಡ್ ಬಾಯ್ ಹೇಳಲಿದ್ದಾರೆ.

2003ರ ವಿಶ್ವಕಪ್ ಮುನ್ನ ತನಗೆ ಅವಕಾಶ ನೀಡಲು ಸ್ಟೇವ್ ವಾ ಮಾಡಿದ ರೀತಿಯನ್ನು ತಾನು ಶ್ಲಾಘಿಸುತ್ತೇನೆ. ಅದರಿಂದಾಗಿ ವಿಶ್ವಕಪ್ ಮುನ್ನ ತಾನು ಸುಮಾರು 50 ಪಂದ್ಯಗಳನ್ನು ಆಡಿ, ಸರಿಯಾಗಿ ಸಿದ್ಧಗೊಳ್ಳಲು ಸಾದ್ಯವಾಯಿತು ಎಂದು ಹೇಡನ್ ತಿಳಿಸಿದ್ದಾರೆ.

ಮುಂದಿನ ವಿಶ್ವಕಪ್‌ನಲ್ಲಿ ಆಡುವ ಯಾವುದೇ ಉದ್ದೇಶ ತಾನು ಹೊಂದಿಲ್ಲ. ಈಗ ಮತ್ತು ಆ ವಿಶ್ವಕಪ್ ನಡುವೆ ಸಂಧಿಕಾಲವಾಗಿರಲಿದ್ದು, ಅಲ್ಲಿಂದ ತಾನು ಮುಂದಿನ ವಿಶ್ವಕಪ್‌ಗಾಗಿ ಯುವ ಆಟಗಾರರಿಗೆ ಅವಕಾಶ ನೀಡಲು ಬಯಸುತ್ತೇನೆ ಎಂಬ ಅವರ ಉಲ್ಲೇಖ ಪತ್ರಿಕೆಯಲ್ಲಿ ವರದಿಯಾಗಿದೆ.

ಕಳೆದ 12 ತಿಂಗಳಿಂದ ತಮ್ಮ ಸ್ನಾಯು ರಜ್ಜು ನೋವಿನಿಂದ ಬಳಲುತ್ತಿರುವ ಹೇಡನ್‌ಗೆ ಎಲ್ಲಾ ಕಡೆಯಿಂದಲೂ ಏಕದಿನ ಕ್ರಿಕೆಟ್‌ನಿಂದ ಕೆಳಕ್ಕಿಳಿದು, ಟೆಸ್ಟ್ ಕ್ರಿಕೆಟ್‌ಗೆ ಹೆಚ್ಚು ಗಮನ ಹರಿಸುವಂತೆ ಸಲಹೆಗಳು ಕೇಳಿ ಬರುತ್ತಿವೆ. ಆದರೆ ಹೇಡನ್ ತಮ್ಮ ಏಕದಿನ ವೃತ್ತಿಜೀವನವನ್ನು ಆದಷ್ಟು ಬೇಗ ಬಿಡಲು ತಯಾರಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಚಾಂ.ಟ್ರೋಫಿ ಹಣೆಬರಹ ನಾಳೆ ನಿರ್ಧಾರ
ಒತ್ತಡ ಮೆಂಡೀಸ್ ಮೇಲಿರುವುದು: ಕುಂಬ್ಳೆ
ಐಸಿಸಿ ಟೆಸ್ಟ್ ರ‌್ಯಾಂಕಿಂಗ್: ಸಚಿನ್ 14ನೇ ಸ್ಥಾನಕ್ಕೆ ಕುಸಿತ
ಐಎಂಒ: ಭಾರತದ ತೆಕ್ಕೆಗೆ 5 ಕಂಚು
ಬೀಜಿಂಗ್ಸ್‌ನಲ್ಲಿ ಪವಾಡದ ನಿರೀಕ್ಷೆ ಬೇಡ: ಕಲ್ಮಾಡಿ
ಟೆನ್ನಿಸ್ ಬೆಟ್ಟಿಂಗ್: ಸೆರ್ಮೇಕ್, ಮೆರ್ಟಿನಕ್‌‌ಗೆ ನಿಷೇಧ
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...