|
| ಚಾಂ.ಟ್ರೋಫಿ ಹಣೆಬರಹ ನಾಳೆ ನಿರ್ಧಾರ |
| ಕರಾಚಿ, ಬುಧವಾರ, 23 ಜುಲೈ 2008 ( 10:07 IST ) | |
ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಗುರುವಾರದಂದು ಪಾಕಿಸ್ತಾನ ಸೆಪ್ಟೆಂಬರಿನಲ್ಲಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಬಹುದೇ ಬೇಡವೇ ಎಂಬುದರ ಬಗ್ಗೆ ಅಂತಿಮ ನಿರ್ಧಾರವನ್ನು ಕೈಗೊಳ್ಳಲಿದೆ.
ಐಸಿಸಿಯ ಕಾರ್ಯಕಾರಿ ಮಂಡಳಿಯ ಟೆಲಿಕಾನ್ಪರೆನ್ಸ್ ಗುರುವಾರದಂದು ನಡೆಯಲಿದ್ದು, ಇದರಲ್ಲಿ ಚಾಂಪಿಯನ್ಸ್ ಟ್ರೋಫಿ ಮೇಲಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ಐಸಿಸಿ ವಕ್ತಾರರೊಬ್ಬರು ತಿಳಿಸಿದ್ದಾರೆ.
ಆಸ್ಟ್ರೇಲಿಯಾ, ದ.ಆಫ್ರಿಕಾ, ಇಂಗ್ಲೆಂಡ್, ಭಾರತ, ಪಾಕಿಸ್ತಾನ, ಶ್ರೀಲಂಕಾ, ನ್ಯೂಜಿಲ್ಯಾಂಡ್ ಮತ್ತು ವೆಸ್ಟಿಂಡೀಸ್ ಒಳಗೊಂಡ 8 ಟೆಸ್ಟ್ ಆಡುವ ರಾಷ್ಟ್ರಗಳು ಪಾಲ್ಗೊಳ್ಳಿರುವ ವರ್ಷದ ಅತಿ ದೊಡ್ಡ ಏಕ ದಿನ ಟೂರ್ನಮೆಂಟ್ ಇದಾಗಿದ್ದು, ಸೆಪ್ಟೆಂಬರ್ 11-28ರಂದು ಪಾಕಿಸ್ತಾನದಲ್ಲಿ ನಡೆಯಬೇಕಾಗಿದೆ.
ಆದರೆ ಆಸಿಸ್, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ಪಾಕಿಸ್ತಾನದಲ್ಲಿನ ಭದ್ರತೆಯ ಕುರಿತು ಆತಂಕ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಐಸಿಸಿ, ಚಾಂಪಿಯನ್ಸ್ ಟ್ರೋಫಿಗಾಗಿನ ಭದ್ರತೆ ಮತ್ತು ಇತ್ತೀಚೆಗೆ ಪಾಕ್ನಲ್ಲಿ ಮುಗಿದ ಏಷಿಯಾ ಕಪ್ನಲ್ಲಿನ ಭದ್ರತಾ ವ್ಯವಸ್ಥೆಗಳ ಕುರಿತು ತಂಡಗಳಿಗೆ ಮಾಹಿತಿ ನೀಡಲು ತನ್ನ ದುಬೈ ಮುಖ್ಯ ಕಛೇರಿಯಲ್ಲಿ ಸಭೆ ನಡೆಸಿತ್ತು.
ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಚಾಂಪಿಯನ್ಸ್ ಟ್ರೋಫಿ ನಡೆಯುವಾಗಿನ ಮೂರು ಸ್ಥಳಗಳಾಗಿದೆ. ಶ್ರೀಲಂಕಾವನ್ನು ಟೂರ್ನಮೆಂಟ್ಗಾಗಿನ ಪರ್ಯಾಯ ಸ್ಥಳವಾಗಿ ನಿಗದಿ ಪಡಿಸಲಾಗಿದೆ.
| | (ಮೂಲ - ವೆಬ್ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|