ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಒತ್ತಡ ಮೆಂಡೀಸ್ ಮೇಲಿರುವುದು: ಕುಂಬ್ಳೆ
ಕೊಲೊಂಬೊ, ಬುಧವಾರ, 23 ಜುಲೈ 2008   ( 09:52 IST )
ಭಾರತೀಯ ಬ್ಯಾಟ್ಸ್‌ಮನ್‌ಗಳು ಶ್ರೀಲಂಕಾವನ್ನು ಎದುರಿಸಲು ಎಲ್ಲಾ ತರದಲ್ಲೂ ಸಿದ್ಧರಾಗಿದ್ದು, ಇತ್ತ ತವರು ತಂಡದ ಹೊಸ ಘಾತಕ ಸ್ಪಿನ್ನರ್ ಅಜಂತಾ ಮೆಂಡಿಸ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಅಗಾಧ ಅನುಭವ ಹೊಂದಿರುವ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡುವ ಬಿಸಿಯನ್ನು ಅನುಭವಿಸುತ್ತಿದ್ದಾರೆ ಎಂದು ನಾಯಕ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ಕರಾಚಿಯಲ್ಲಿ ನಡೆದ ಏಷಿಯಾ ಕಪ್ ಫೈನಲಿನಲ್ಲಿ ಭಾರತದ ಏಕದಿನ ಕ್ರಮಾಂಕವನ್ನು ಧೂಳಿಪಟ ಮಾಡಿದ್ದ ಮೆಂಡೀಸ್ ಚರ್ಚೆಯ ಕೇಂದ್ರ ಬಿಂದುವಾಗಿದ್ದು, ಅವರು ಅಂತಹುದೇ ಪ್ರದರ್ಶನವನ್ನು ಟೆಸ್ಟ್ ಸರಣಿಯಲ್ಲೂ ಪುನರಾವರ್ತಿಸುವುದು ಶ್ರೀಲಂಕಾ ಪಾಳಯದ ಅಶಾಭಾವನೆಯಾಗಿದೆ.

ಈ ಕಡೆ ಭಾರತದ ನಾಯಕ ಅನಿಲ್ ಕುಂಬ್ಳೆ ಯುವ ಮೆಂಡೀಸ್ ಮೇಲೆ ಒತ್ತಡ ಹಾಕುವ ತಂತ್ರ ಎಂಬಂತೆ, ಭಾರತದ ಅನುಭವಿ ದಿಗ್ಗಜ ಬ್ಯಾಟ್ಸ್‌ಮನ್‌‌ಗಳ ಸಾಲಿನ ವಿರುದ್ಧ ಬೌಲಿಂಗ್ ಮಾಡಲು ಅವರಿಗೆ ಕಠಿಣವಾಗಲಿದೆ ಎಂದು ಹೇಳಿದ್ದಾರೆ.

ಮೆಂಡೀಸ್ ಮಾತ್ರವಲ್ಲ ಲಂಕಾದ ಪ್ರತಿ ಬೌಲರ್ ಬಗ್ಗೆಯೂ ಚರ್ಚಿಸಲಾಗಿದೆ. ಮೆಂಡೀಸ್‌ಗೆ ಇದು ಮೊದಲ ಟೆಸ್ಟ್ ಆಗಿದ್ದು, ಒತ್ತಡ ಅವರ ಮೇಲಿರುವುದು ಎಂದು ಹೇಳಿದ ಕುಂಬ್ಳೆ, ಭಾರತೀಯ ಬ್ಯಾಟ್ಸ್‌ಮನ್‌ಗಳು ಶ್ರೀಲಂಕಾ ದಾಳಿಯನ್ನು ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

ಓರ್ವ ಯುವ ಬೌಲರ್ ಆಗಿ ನೀವು ಖಂಡಿತವಾಗಿಯೂ ಉದ್ರೇಕದಲ್ಲಿರುವಿರಿ. ಒಮ್ಮೆ ತಮ್ಮ ಬ್ಯಾಟಿಂಗ್ ಬಲಬಲಾದ ಮೇಲೆ ಕಣ್ಣು ಹಾಯಿಸಿದರೆ, ಸುಮಾರು 100 ಗಿಂತಲೂ ಅಧಿಕ ಟೆಸ್ಟ್ ಆಡಿದ ಬ್ಯಾಟ್ಸ್‌ಮನ್‌ಗಳು ಕಾಣಸಿಗುತ್ತಾರೆ ಎಂದು ಕುಂಬ್ಳೆ ವಿವರಿಸಿದರು.

ಬಹು ವರ್ಷಗಳಿಂದ ಲಂಕಾ ಪರ ಮುರಳೀಧರನ್ ಮತ್ತು ಚಾಮಿಂದಾ ವಾಸ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ಕುಂಬ್ಳೆ ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಐಸಿಸಿ ಟೆಸ್ಟ್ ರ‌್ಯಾಂಕಿಂಗ್: ಸಚಿನ್ 14ನೇ ಸ್ಥಾನಕ್ಕೆ ಕುಸಿತ
ಐಎಂಒ: ಭಾರತದ ತೆಕ್ಕೆಗೆ 5 ಕಂಚು
ಬೀಜಿಂಗ್ಸ್‌ನಲ್ಲಿ ಪವಾಡದ ನಿರೀಕ್ಷೆ ಬೇಡ: ಕಲ್ಮಾಡಿ
ಟೆನ್ನಿಸ್ ಬೆಟ್ಟಿಂಗ್: ಸೆರ್ಮೇಕ್, ಮೆರ್ಟಿನಕ್‌‌ಗೆ ನಿಷೇಧ
ಈಸ್ಟ್ ವೆಸ್ಟ್ ಬ್ಯಾಂಕ್ ಕ್ಲಾಸಿಕ್: ಸಾನಿಯಾಗೆ ಮುನ್ನಡೆ
ಒಲಿಂಪಿಕ್ ಪದಕ ಕಠಿಣ, ಆದರೆ ಅಸಾಧ್ಯವಲ್ಲ: ಪ್ರಕಾಶ್
ಗ್ರಹ ಗತಿ
ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ರಾಜ್ಯ ರಾಜಕಾರಣಕ್ಕೆ ಎಸ್.ಎಂ.ಕೃಷ್ಣ ವಿದಾಯ?
ರಾಜ್ಯ ರಾಜಕಾರಣಕ್ಕೆ ವಿದಾಯ ಹೇಳುವ ಇಂಗಿತವನ್ನು ಎಂ.ಎಂ.ಕೃಷ್ಣ ....
ಛತ್ತೀಸ್‌ಗಢದಿಂದ ವಿದ್ಯುತ್ ಖರೀದಿ: ಸಿಎಂ
ಮೆಜೆಸ್ಟಿಕ್‌ನಲ್ಲಿ 48 ಮಹಡಿಗಳ ಬೃಹತ್ ಕಟ್ಟಡ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...