|
| ಐಸಿಸಿ ಟೆಸ್ಟ್ ರ‌್ಯಾಂಕಿಂಗ್: ಸಚಿನ್ 14ನೇ ಸ್ಥಾನಕ್ಕೆ ಕುಸಿತ |
| ದುಬೈ, ಬುಧವಾರ, 23 ಜುಲೈ 2008 ( 09:34 IST ) | |
ಹೊಸದಾಗಿ ಬಿಡುಗಡೆಗೊಂಡ ಐಸಿಸಿ ಟೆಸ್ಟ್ ರ‌್ಯಾಂಕಿಂಗ್ ಪಟ್ಟಿಯಲ್ಲಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ 14ನೇ ಸ್ಥಾನಕ್ಕೆ ಕುಸಿದಿದ್ದರೂ, ಭಾರತದ ಅಗ್ರ ಶ್ರೇಯಾಂಕಿತ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದರೆ, ಇತ್ತ ನಾಯಕ ಅನಿಲ್ ಕುಂಬ್ಳೆ ಭಾರತದ ಮುಂಚೂಣಿಯ ಬೌಲರ್ ಆಗಿಯೇ ಮುಂದುವರಿದಿದ್ದಾರೆ.
ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಮತ್ತು ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಕ್ರಮವಾಗಿ 15 ಮತ್ತು 18ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸೌರವ್ ಗಂಗೂಲಿ 20ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ.
ಬೌಲಿಂಗ್ ಪಟ್ಟಿಯಲ್ಲಿ, ಕುಂಬ್ಳೆ ನಂತರ ಭಾರತದ ಉತ್ತಮ ಶ್ರೇಯಾಂಕಿತ ಸ್ಥಾನ ಜಹೀರ್ ಖಾನ್‌ಗೆ ಬಂದಿದೆ. ಜಹೀರ್ 14ನೇ ಸ್ಥಾನದಲ್ಲಿದ್ದು, ಇದನ್ನು ಪಾಕಿಸ್ತಾನದ ವಿವಾದಿತ ಬೌಲರ್ ಮೊಹಮ್ಮದ್ ಆಸಿಫ್ ಜತೆ ಹಂಚಿ ಕೊಂಡಿದ್ದಾರೆ. ಹರ್ಭಜನ್ ಸಿಂಗ್ 17ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ಇದೇ ವೇಳೆ ದಕ್ಷಿಣ ಆಫ್ರಿಕಾದ ಅಶ್ವೆಲ್ ಪ್ರಿನ್ಸ್ ಮತ್ತು ಎಬಿ ಡೆ ವಿಲ್ಲಿಯರ್ಸ್, ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿನ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ಅಗ್ರ 20ರೊಳಗಿನ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪ್ರಿನ್ಸ್ 8 ಸ್ಥಾನಗಳೊಂದಿಗೆ 13ನೇ ಸ್ಥಾನಕ್ಕೆ ಜಿಗಿತ ಕಂಡಿದ್ದರೆ, ವಿಲ್ಲಿಯರ್ಸ್ 19ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ. ನಾಯಕ ಗ್ರೇಮ್ ಸ್ಮಿತ್ ತಮ್ಮ 12ನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.
ಶ್ರೀಲಂಕಾದ ಕುಮಾರ ಸಂಗಾಕರ ಬ್ಯಾಟಿಂಗ್ ಪಟ್ಟಿಯಲ್ಲಿ ಅಗ್ರಗಣ್ಯನಾಗಿದ್ದರೆ, ವಿಂಡೀಸ್‌ನ ಶಿವನಾರಾಯಣ್ ಚಂದ್ರಪಾಲ್, ಆಸಿಸ್‌ನ ಮೈಕ್ ಹಸ್ಸೀ ಮತ್ತು ಅವರ ನಾಯಕ ರಿಕಿ ಪಾಂಟಿಂಗ್, ಪಾಕ್‌ನ ಮೊಹಮ್ಮದ್ ಯೂಸುಫ್ ಜತೆಗೂಡಿ ನಂತರದ ಸ್ಥಾನಗಳಲ್ಲಿದ್ದಾರೆ. ರಿಕಿ ಪಾಂಟಿಂಗ್ ಮತ್ತು ಮೊಹಮ್ಮದ್ ಯೂಸುಪ್ ಜಂಟಿ 4ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|