|
| ಬೀಜಿಂಗ್ಸ್‌ನಲ್ಲಿ ಪವಾಡದ ನಿರೀಕ್ಷೆ ಬೇಡ: ಕಲ್ಮಾಡಿ |
| ನವದೆಹಲಿ, ಮಂಗಳವಾರ, 22 ಜುಲೈ 2008 ( 16:39 IST ) | |
ದೇಶದ ಕ್ರೀಡಾ ಪ್ರಿಯರು ಚೀನಾದಲ್ಲಿ ಯಾವುದೇ ಪವಾಡವಾಗುವುದನ್ನು ನಿರೀಕ್ಷಿಸಬಾರದು ಎಂದು ಭಾರತೀಯ ಒಲಿಂಪಿಕ್ಸ್ ಸಂಘಟನೆಯ ಅಧ್ಯಕ್ಷ ಸುರೇಶ್ ಕಲ್ಮಾಡಿ ಮನವಿ ಮಾಡಿದ್ದಾರೆ.
ತಮ್ಮ ಹಿರಿಯ ತಂಡ ಸುಲ್ತಾನ್ ಅಜ್ಲಾನ್ ಶಾ ಕಪ್‌ನಲ್ಲಿ ರನ್ನರ್ಸ್ ಅಫ್ ಆಗಿ ಹೊರ ಹೊಮ್ಮಿದ್ದಾರೆ ಮತ್ತು ಕೆಲ ದಿನಗಳ ಹಿಂದೆ ತಮ್ಮ ಜೂನಿಯರುಗಳು ಏಷಿಯಾ ಕಪ್ ಗೆದ್ದುಕೊಂಡಿದ್ದಾರೆ. ಈಗ ನಾವು ಒಂದು ಕಡೆ ಕೂತು ಹಾಕಿಗಾಗಿ ರೂಪುರೇಶೆಯನ್ನು ರೂಪಿಸಬೇಕು ಎಂದು ತಿಳಿಸಿದ್ದಾರೆ.
ಭಾರತೀಯ ಕ್ರೀಡೆಯಲ್ಲಿ ಎಲ್ಲವೂ ಉತ್ತಮವಾಗಿ ನಡೆಯುತ್ತಿದ್ದು, ಆದರೆ ಚೀನಾ ಒಲಿಂಪಿಕ್ಸ್‌ನಲ್ಲಿ ಹೆಚ್ಚಿನದ್ದೇನೂ ನಿರೀಕ್ಷಿಸಬೇಡಿ ಎಂದು ಕಲ್ಮಾಡಿ ಒಲಿಂಪಿಕ್ಸ್: ದಿ ಇಂಡಿಯಾ ಸ್ಟೋರಿ ಎಂಬ ಪುಸ್ತಕ ಬಿಡುಗಡೆ ಮಾಡುತ್ತಾ ಹೇಳಿದರು. ಬಿಲ್ಲುಗಾರರು ಮತ್ತು ಶೂಟರುಗಳು ಉತ್ತಮ ಪಾರ್ಮ್‌ನಲ್ಲಿದ್ದರೂ ಈ ನಿಟ್ಟಿನಲ್ಲಿ ಹೆಚ್ಚಿನ ನಿರೀಕ್ಷೆ ಅಸಾಧ್ಯ ಎಂದು ತಿಳಿಸಿದ್ದಾರೆ.
2010 ದಿಲ್ಲಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ ಬಗ್ಗೆ ಐಒಎ ಗಮನ ಕೇಂದ್ರೀಕರಿಸಿದ್ದು, ನಂತರ 2012ರ ಲಂಡನ್ ಒಲಿಂಪಿಕ್ಸ್ ಭಾರತದ ಗುರಿಯಾಗಲಿದೆ ಎಂದು ಕಲ್ಮಾಡಿ ತಿಳಿಸಿದ್ದಾರೆ.
2010ರ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಸರಕಾರ 700 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು, ಇದನ್ನು ಅಥ್ಲೆಟ್‌ಗಳ 310 ದಿನಗಳ ತರಬೇತಿಗೆ ವಿನಿಯೋಗಿಸಲಾಗುವುದು. ತಾವು ಒಂದು ಉತ್ತಮ ಕಾಮನ್‌ವೆಲ್ತ್ ಗೇಮ್ಸ್‌ನ್ನು ಖಚಿತಪಡಿಸಬೇಕು. ಇದು ಲಂಡನ್ ಒಲಿಂಪಿಕ್ಸ್‌ಗಾಗಿನ ತಮ್ಮ ಪ್ರದರ್ಶನಕ್ಕೆ ಒಂದು ಅಡಿಪಾಯವನ್ನು ಒದಗಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
2010 ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 2ನೇ ಸ್ಥಾನವನ್ನು ಗಳಿಸುವ ಅಗತ್ಯವಿದ್ದು, ನಂತರ ತಾವು ಲಂಡನ್ ಒಲಿಂಪಿಕ್ಸ್‌ಗೆ ಸಿದ್ಧರಾಗಲಿದ್ದೇವೆ ಎಂದು ಹೇಳಿದ ಕಲ್ಮಾಡಿ, ಒಲಿಂಪಿಕ್ಸ್ ಕ್ರೀಡೆಗೆ ಬೆಂಬಲ ನೀಡುವಂತೆ ದೇಶದ ಕಾರ್ಪೊರೇಟರುಗಳಿಗೆ ಕರೆ ನೀಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|