|
| ಈಸ್ಟ್ ವೆಸ್ಟ್ ಬ್ಯಾಂಕ್ ಕ್ಲಾಸಿಕ್: ಸಾನಿಯಾಗೆ ಮುನ್ನಡೆ |
| ಲಾಸ್ ಏಂಜೆಲ್ಸ್, ಮಂಗಳವಾರ, 22 ಜುಲೈ 2008 ( 12:36 IST ) | |
ಈಸ್ಟ್ ವೆಸ್ಟ್ ಬ್ಯಾಂಕ್ ಕ್ಲಾಸಿಕ್ ಟೂರ್ನಮೆಂಟಿನಲ್ಲಿನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಇವಾ ಹ್ರಡಿನೋವರನ್ನು ಸೋಲಿಸಿ ಎರಡನೇ ಸುತ್ತಿಗೆ ಮುನ್ನಡೆ ಪಡೆದಿದ್ದಾರೆ.
16ನೇ ಶ್ರೇಯಾಂಕಿತೆ ಸಾನಿಯಾ ಜೆಕ್ ಎದುರಾಳಿಯನ್ನು 6-3, 6-4ದಲ್ಲಿ ಕೇವಲ ಒಂದು ಗಂಟೆ ಏಳು ನಿಮಿಷಗಳಲ್ಲಿ ಸೋಲಿಸಿ, ಮುನ್ನಡೆ ಸಾಧಿಸಿದರು.
ಮಣಿಕಟ್ಟು ಗಾಯ ಮತ್ತು ಕೆಟ್ಟ ಪಾರ್ಮ್‌ನಿಂದ ಹೆಣಗಾಡುತ್ತಿರುವ ಸಾನಿಯಾ ಮಿರ್ಜಾ, ಕಳೆದ ವಾರದ ಸ್ಟ್ಯಾಂಡ್‌ಫೋರ್ಡ್ ವೆಸ್ಟ್ ಬ್ಯಾಂಕ್ ಕ್ಲಾಸಿಕ್‌ನಲ್ಲಿ ಮೊದಲ ಸುತ್ತಿನ ನಿರ್ಗಮನ ಕಂಡಿದ್ದರು. ವಿಂಬಲ್ಡನಿನಲ್ಲೂ ಸಾನಿಯಾ ನಿರಾಶಾದಾಯಕ ಪ್ರದರ್ಶನ ತೋರಿದ್ದರು.
ಮೊದಲ ಸೆಟ್ಟನ್ನು ಕೇವಲ 30 ನಿಮಿಷಗಳಲ್ಲಿ ಮುಗಿಸಿದ ಸಾನಿಯಾ, ಎದುರಾಳಿ ಹ್ರಡಿನೋವರ ಸರ್ವ್‌ನ್ನು ಎರಡು ಬಾರಿ ಮುರಿದು, ತಮ್ಮದೇ ಸರ್ವ್‌ನಲ್ಲಿ ಬ್ರೇಕ್ ಪಾಯಿಂಟುಗಳನ್ನು ಉಳಿಸಿಕೊಂಡರು.
ಎರಡನೇ ಸೆಟ್ಟಿನಲ್ಲಿ ಹ್ರಡಿನೋವ ವಾಪಸಾತಿ ಕಂಡು ಸಾನಿಯಾ 1-3ರ ಹಿನ್ನಡೆ ಕಂಡರು, ಆದರೆ ನಂತರ ತನ್ನ ಎಲ್ಲಾ ಬಲವನ್ನು ಒಂದುಗೂಡಿಸಿದ ಸಾನಿಯಾ, ನಾಲ್ಕು ಬ್ರೇಕ್ ಪಾಯಿಂಟುಗಳನ್ನು ಉಳಿಸಿದರೆ, ಎರಡನ್ನು ತಮ್ಮದಾಗಿ ಪರಿವರ್ತಿಸಿ, ಎದುರಾಳಿಯನ್ನು ಮಣಿಸಿದರು.
ಮುಂದಿನ ಪಂದ್ಯದಲ್ಲಿ ಸಾನಿಯಾ, ಉಕ್ರೇನಿನ ಕೆಟರೀನಾ ಮತ್ತು ಚೀನಾದ ಮೆಂಗ್ ಯೌನ್ ನಡುವಿನ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ. ಒಂದು ವೇಳೆ ಸಾನಿಯಾ ಎರಡನೇ ಸುತ್ತನ್ನು ಗೆಲ್ಲುವಲ್ಲಿ ಸಫಲರಾದರೆ, ಕ್ವಾಟರ್ ಫೈನಲ್ ಪೂರ್ವ ಸುತ್ತಿನಲ್ಲಿ ಅಮೆರಿಕದ 2ನೇ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್‌ರನ್ನು ಎದುರಿಸಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಹಣಕಾಸಿನ ವೆಚ್ಚ ಮತ್ತು ಸಾಲ ಸಂಬಂಧಿತ ಸಮಸ್ಯೆಗಳಿಗೆ ಕುಟುಂಬದ ಸದಸ್ಯರ ಸಲಹೆ ಅಗತ್ಯ. ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|