|
| ಭಾರತದ ಮಡಿಲಿಗೆ ಜೂನಿಯರ್ ಹಾಕಿ ಏಷಿಯಾ ಕಪ್ |
| ಹೈದರಾಬಾದ್, ಶನಿವಾರ, 19 ಜುಲೈ 2008 ( 09:19 IST ) | |
ದಕ್ಷಿಣ ಕೊರಿಯಾವನ್ನು 3-2ರಲ್ಲಿ ಸೋಲಿಸುವ ಮೂಲಕ ಭಾರತದ ಚೈತನ್ಯಯುತ ಹಾಕಿ ತಂಡ ಜೂನಿಯರ್ ಏಷಿಯಾ ಕಪ್ ಹಾಕಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಗೆಲುವುನೊಂದಿಗೆ ಭಾರತ ಸತತ ಎರಡನೇ ಬಾರಿಗೆ ಈ ಕಿರೀಟವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು.
52 ನಿಮಿಷಗಳ ವರೆಗೆ 0-2ರ ಹಿನ್ನಡೆಯಲ್ಲಿದ್ದ ಭಾರತ ನಂತರ ಅಚ್ಚರಿದಾಯಕ ವಾಪಸಾತಿ ಕಂಡು ಶರವೇಗದಲ್ಲಿ ಮೂರು ಗೋಲ್ ಭಾರಿಸಿ ಕೊರಿಯಾವನ್ನು ಮೂಖವಿಸ್ಮಿತರನ್ನಾಗಿಸಿತು. ನಿಬಂಧನಾ ಅವಧಿಯ ಅಂತ್ಯದಲ್ಲಿ ಅಂಕವನ್ನು 2-2ಕ್ಕೆ ಸಮಗೊಳಿಸಿದ ನಂತರ, ಭಾರತದ ಪಾರ್ಮ್‌ನಲ್ಲಿರುವ ದಿವಾಕರ್ ರಾಮ್ ಪೆನಾಲ್ಟಿ ಕಾರ್ನರನ್ನು ಗೋಲ್ ಆಗಿ ಪರಿವರ್ತಿಸಿ ಪಂದ್ಯ ತಮ್ಮ ಕಡೆ ವಾಲುವಂತೆ ಮಾಡಿದರು. ಅತಿಮ ಹಂತದವರೆಗೂ ಕುತೂಹಲಕಾರಿಯಾಗಿದ್ದ ಪಂದ್ಯದಲ್ಲಿ ವಿಜಯ ಲಕ್ಷ್ಮೀ ಎರಡೂ ತಂಡದ ಪರ ವಾಲುತ್ತಿತ್ತು.
ದಿವಾಕರ್ ರಾಮ್ ಗೋಲ್ಡನ್ ಗೋಲ್ ಭಾರಿಸುತ್ತಿದ್ದಂತೆಯೇ ಗ್ಯಾಲರಿಯಲ್ಲಿದ್ದವರು ಹುಚ್ಚೆದ್ದು ಸಂಭ್ರಮಿಸಲು ಪ್ರಾರಂಭಿಸಿದರೆ, ಭಾರತೀಯ ಆಟಗಾರರು ಒಬ್ಬರನ್ನೊಬ್ಬರು ತಬ್ಬಿ ಧನ್ಯವಾದ ಹಸ್ತಾಂತರಿಸಿದರು.
ಬಿರುಸಿನ ಪ್ರತಿಸ್ಪರ್ಧಿ ಕೊರಿಯಾ ಮೊದಲ ಎರಡು ಗೋಲ್ ಭಾರಿಸಿ ಪಂದ್ಯ ಭಾರತದ ಕೈಯಿಂದ ಜಾರುವಂತೆ ಮಾಡುತ್ತಿದ್ದ ಈ ಸಂದರ್ಭದಲ್ಲಿ ದಿವಾಕರ್ ಎರಡು ಗೋಲ್ ಬಾರಿಸುವುದರೊಂದಿಗೆ ಭಾರತವನ್ನು ಮತ್ತೊಮ್ಮೆ ಅಪಾಯದಿಂದ ರಕ್ಷಿಸಿದರು. ದಿವಾಕರ್ ಜತೆಗೆ ಕಠಿಣ ಪರಿಶ್ರಮ ಪಟ್ಟ ಸುನಿಲ್ ಎಸ್‌ಪಿ ಒಂದು ಗೋಲ್ ಭಾರಿಸುವ ಮೂಲಕ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು.
ನಾಮ್ ಹ್ಯಾನ್ ವೂ ಎರಡು ಗೋಲ್ ಭಾರಿಸುವುದರೊಂದಿಗೆ ಕೊರಿಯಾ ಪರ ಮೊದಲ ಮುನ್ನಡೆ ತಂದುಕೊಟ್ಟರು. ಮೊದಲಿಗೆ ಆಕ್ರಮಣಕಾರಿ ಆಡಿದ್ದ ಕೊರಿಯನ್ನರು ಅಂತಿಮ ಹಂತದಲ್ಲಿ ತಮ್ಮ ಆಕ್ರಣಶೀಲತೆಯನ್ನು ಕಳೆದುಕೊಂಡರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|