ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಅಪ್ಟೋಸ್ ಚಾಲೆಂಜರ್ ಟೆನಿಸ್: ಪ್ರಕಾಶ್ ಕ್ವಾಟರ್ಸ್‌ಗೆ
ನವದೆಹಲಿ, ಶುಕ್ರವಾರ, 18 ಜುಲೈ 2008   ( 16:03 IST )
ತಮ್ಮ ಉತ್ತಮ ಪಾರ್ಮನ್ನು ಮುಂದುವರಿಸಿರುವ ಭಾರತದ ಪ್ರಕಾಶ್ ಅಮೃತ್‌ರಾಜ್ ಅಪ್ಟೋಸ್‌ನಲ್ಲಿನ ಎಟಿಪಿ ಚಾಲೆಂಜರ್ ಟೂರ್ನಮೆಂಟಿನಲ್ಲಿ ಎದುರಾಳಿ ವಿರುದ್ಧ ನೇರ ಸೆಟ್ಟುಗಳ ಗೆಲುವು ಸಾಧಿಸಿ ಕ್ವಾಟರ್ ಫೈನಲ್ ಪ್ರವೇಶಿಸಿದ್ದಾರೆ.

ಮೊದಲ ಸುತ್ತಿನಲ್ಲಿ ಅಗ್ರ ಶ್ರೇಯಾಂಕಿತ ಅಮೆರ್ ಡೆಲಿಕ್‌ರನ್ನು ಮಣಿಸಿದ ಪ್ರಕಾಶ್ ಎರಡನೇ ಸುತ್ತಿನಲ್ಲಿ ಅಮೆರಿಕದ ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಫಿಲ್ಲಿಪ್ ಸಿಮ್ಮಾಂಡ್‌ರನ್ನು 6-4 6-2ರನ್ನು ಸೋಲಿಸಿದರು.

ಆದರೆ ಡಬಲ್ಸ್ ವಿಭಾಗದಲ್ಲಿ, ಪ್ರಕಾಶ್ ಮತ್ತು ತಮ್ಮ ಅಮೆರಿಕ ಪಾಲುದಾರ ಲೆಸ್ಟರ್ ಕೂಕ್ ಕ್ವಾಟರ್ ಫೈನಲಿನಲ್ಲಿ ಸೋಲು ಅನುಭವಿಸಿದರು. ಭಾರತ-ಅಮೆರಿಕ ಜೋಡಿ 7-6 (3) 4-6 4-10ದಲ್ಲಿ ಇಸ್ರೇಲ್ ಜೋಡಿಯಾದ ನೊವಾಮ್ ಒಕುನ್ ಮತ್ತು ಅಮಿರ್ ವೀಂಟ್ರೌಬ್‌ ಎದುರು ಸೋಲು ಕಂಡರು.

ಇದೇ ವೇಳೆ, ಭಾರತೀಯ ಜೋಡಿಗಳಾದ ರಾಷ್ಟ್ರೀಯ ಚಾಂಪಿಯನ್‌ ಆಶುತೋಷ್ ಸಿಂಗ್ ಮತ್ತು ಡೇವಿಸ್ ಕಪ್ ವಿಜೇತ ಹರ್ಷ್ ಮಾನ್ಕಂಡ್ ಎದುರಾಳಿಗಳನ್ನು ನೇರ ಸೆಟ್ಟುಗಳಿಂದ ಸೋಲಿಸಿ, ಯುರೋ 30,000 ಎಟಿಪಿ ಚಾಲೆಂಜರ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ನಾಲ್ಕನೇ ಶ್ರೇಯಾಂಕಿತ ಭಾರತೀಯ ಜೋಡಿ ಜೆಕ್ ಜೋಡಿಯಾದ ಪಾವೆಲ್ ಸ್ನೊಬಲ್ ಮತ್ತು ಜಾನ್ ವಸೆಕ್‌ರನ್ನು 6-1 6-1ದಲ್ಲಿ ಸೋಲಿಸಿದರು.

ಈ ಕಡೆ ಮಾನ್ಕಂಡ್ ಮತ್ತು ಪುರವ್ ರಾಜಾ ಮೊದಲ ಸುತ್ತಿನ ಸೋಲು ಕಾಣುವುದರೊಂದಿಗೆ ಭಾರತದ ಸಿಂಗಲ್ಸ್ ಸವಾಲು ಅಂತ್ಯಗೊಂಡಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಭಾರತದಲ್ಲಿ 2010 ಹಾಕಿ ವಿಶ್ವಕಪ್
ಹಾಕಿ: ಮಲೇಷ್ಯಾ 5ನೇ, ಬಾಂಗ್ಲಾ 6ನೇ ಸ್ಥಾನಕ್ಕೆ ತೃಪ್ತಿ
ಸ್ಟ್ಯಾನ್‌ಫೋರ್ಡ್ ಕ್ಲಾಸಿಕ್‌: ಸ್ಟೊಸುರ್‌ ಕ್ವಾಟರ್ಸ್‌ಗೆ
ನಂಡ್ರೊಲೋನ್ ಹೌದೇ ಅಲ್ಲವೇ ಎಂಬುದು ತಿಳಿದಿಲ್ಲ: ಪಿಸಿಬಿ
ಇಂಡಿಯಾನಪೊಲಿಸ್: ಬೋಪಣ್ಣ-ಕುರೇಶಿ ಜೋಡಿ ಔಟ್
6ನೇ ಶೈಲಿ ಬೌಲಿಂಗ್‌ನತ್ತ ಮೆಂಡೀಸ್ ಕಾರ್ಯೋನ್ಮುಖ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...