ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಭಾರತದಲ್ಲಿ 2010 ಹಾಕಿ ವಿಶ್ವಕಪ್
ಹೈದರಾಬಾದ್, 18 ಜುಲೈ 2008   ( 15:18 IST )
ಎಲ್ಲಾ ಕೆಟ್ಟ ಕಾರಣಗಳಿಗಾಗಿ ಸುದ್ದಿಯಲ್ಲಿದ್ದ ಭಾರತ ಹಾಕಿ ಈಗ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಐಎಚ್ಎಫ್)ದಿಂದ ಬಹು ನಿರೀಕ್ಷಿತ ಸುದ್ಧಿಯೊಂದನ್ನು ಪೆಡೆದಿದೆ. ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದ ಭಾರತ 2010ರಲ್ಲಿ ಹಾಕಿ ವಿಶ್ವ ಕಪ್‌ನ ಆತಿಥ್ಯ ವಹಿಸಲಿದೆ. ಈ ನಿರ್ಧಾರವನ್ನು ಹೈದರಾಬಾದಿನಲ್ಲಿ ನಡೆದ ಎಫ್ಐಎಚ್ ಮಂಡಳಿ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಇದಕ್ಕೂ ಮುಂಚೆ, ಎಫ್ಐಎಚ್ ತಾತ್ಕಾಲಿಕವಾಗಿ ನವದೆಹಲಿಗೆ 2010 ವಿಶ್ವ ಕಪ್‌ ಆತಿಥ್ಯವನ್ನು ನೀಡಿತ್ತು, ಆದರೆ ಭಾರತ ಬೀಜಿಂಗ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ನಂತರ ಎಫ್ಐಎಚ್ ದೇಶದಲ್ಲಿ ಅಭಿವೃದ್ಧಿ ಯೋಜನೆಗಳು ಸೇರಿದಂತೆ ಗಣನೀಯ ಸುಧಾರಣೆ ಮಾಡುವವರೆಗೆ ಈ ಬಗೆಗಿನ ದೃಢೀಕರಣವನ್ನು ಹಿಡಿದಿಟ್ಟುಕೊಂಡಿತ್ತು.

ಇದು ಒಂದು ಉತ್ತಮ ನಿರ್ಧಾರವಾಗಿದ್ದು, ಭಾರತೀಯ ಹಾಕಿಗೆ ಉತ್ತೇಜನ ನೀಡಲಿದೆ ಎಂಬ ತಾತ್ಪೂರ್ತಿಕ ಆಯ್ಕಾ ಸಮಿತಿ ಅಧ್ಯಕ್ಷ ಅಸ್ಲಾಮ್ ಶೇರ್ ಖಾನ್ ಉಲ್ಲೇಖ ವರದಿಯಾಗಿದೆ.

ತಾವು ಅದಾಗಲೇ ಎಫ್ಐಎಚ್ ಅಧಿಕಾರಿಗಳೊಂದಿಗೆ ಹಲವು ಮಾತುಕತೆ ಸುತ್ತನ್ನು ಹೊಂದಿದ್ದೆವು. ಏಷಿಯಾ ಕಪ್‌ನ ಅಂತಿಮ ಮೂರು ದಿವಸಗಳ ಕಾಲ ಎಫ್ಐಎಚ್‌ನ ಮತ್ತೊಂದು ಉನ್ನತ ಮಟ್ಟದ ನಿಯೋಗಿಗಳು ಹೈದರಾಬಾದಿನಲ್ಲಿ ಇರಲಿದ್ದಾರೆ. ಈ ಬಗೆಗಿನ ವಿಷಯ ಅಂತಿಮಗೊಂಡಿದ್ದರಿಂದ ತನಗೆ ಸಂತೋಷವಾಗಿದೆ ಎಂದು ಶೇರ್ ಖಾನ್ ತಿಳಿಸಿದ್ದಾರೆ.

ಐಎಚ್ಎಫ್‌ನ್ನು ಹಾಕಿ ಇಂಡಿಯಾ ಎಂದಾಗಿ ಮರುನಾಮಕರಣ ಮಾಡುವ ಬಗ್ಗೆ ಭಾರತೀಯ ಹಾಕಿ ಒಕ್ಕೂಟ ಘೋಷಿಸಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹಾಕಿ: ಮಲೇಷ್ಯಾ 5ನೇ, ಬಾಂಗ್ಲಾ 6ನೇ ಸ್ಥಾನಕ್ಕೆ ತೃಪ್ತಿ
ಸ್ಟ್ಯಾನ್‌ಫೋರ್ಡ್ ಕ್ಲಾಸಿಕ್‌: ಸ್ಟೊಸುರ್‌ ಕ್ವಾಟರ್ಸ್‌ಗೆ
ನಂಡ್ರೊಲೋನ್ ಹೌದೇ ಅಲ್ಲವೇ ಎಂಬುದು ತಿಳಿದಿಲ್ಲ: ಪಿಸಿಬಿ
ಇಂಡಿಯಾನಪೊಲಿಸ್: ಬೋಪಣ್ಣ-ಕುರೇಶಿ ಜೋಡಿ ಔಟ್
6ನೇ ಶೈಲಿ ಬೌಲಿಂಗ್‌ನತ್ತ ಮೆಂಡೀಸ್ ಕಾರ್ಯೋನ್ಮುಖ
ಡಿಡಿ, ಖಾಸಗಿ ವಾಹಿನಿಗಳ ಮೇಲೆ ಗಿಲ್ಲ್ ಗರಂ
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಯಡಿಯ‌ೂರಪ್ಪ ಬಜೆಟ್ : ರೈತರಿಗೆ ಉಚಿತ್ ವಿದ್ಯುತ್
ದಕ್ಷಿಣ ಭಾರತದಲ್ಲಿ ಮೊಟ್ಟಮೊದಲಬಾರಿಗೆ ಅಧಿಕಾರದ ನೆಲೆ ಸ್ಥಾಪಿಸಿರುವ ಮುಖ್ಯಮಂತ್ರಿ ಯುಡಿಯ‌ೂರಪ್ಪ ....
ಚಿತ್ರೋದ್ಯಮ ಸಮಸ್ಯೆಗಳಿಗೆ ಸ್ಪಂದನ
ಹಳ್ಳಿಗಾಡಿನ ಜನರತ್ತ ಸರ್ಕಾರದ ದೃಷ್ಟಿ
ಮನರಂಜನೆ
ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು
ಮುಂದೆ ಓದಿ|ಮತ್ತಷ್ಟು...