|
| ಸ್ಟ್ಯಾನ್‌ಫೋರ್ಡ್ ಕ್ಲಾಸಿಕ್: ಸ್ಟೊಸುರ್ ಕ್ವಾಟರ್ಸ್‌ಗೆ |
| ಸ್ಟ್ಯಾನ್‌ಫೋರ್ಡ್, ಶುಕ್ರವಾರ, 18 ಜುಲೈ 2008 ( 13:49 IST ) | |
ಸ್ಟ್ಯಾನ್‌ಫೋರ್ಡ್ ಕ್ಲಾಸಿಕ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಅಸ್ಟ್ರೇಲಿಯಾದ ಸಮಾಂಥ ಸ್ಟೊಸುರ್ ಮೂರನೇ ಶ್ರೇಯಾಂಕಿತೆ ವೆರ ಜ್ವೊನರೆವರನ್ನು 6-3, 6- 2ರಲ್ಲಿ ಸೋಲಿಸಿದ್ದಾರೆ.
ಲಿಂಡ್ಸೇ ಡವೆನ್‌ಪೋರ್ಟ್ ಹೊರ ನಡೆದ ಬಳಿಕ ಟೂರ್ನಿಯಲ್ಲಿ ಸ್ಥಾನ ಪಡೆದ ಸ್ಟೊಸುರ್ ಶೀಘ್ರದಲ್ಲೇ ತಮ್ಮ ಲಯವನ್ನು ಕಂಡು, ದೊಡ್ಡ ಸರ್ವ್ ಮತ್ತು ನಿಖರ ಗ್ರೌಂಡ್‌ಸ್ಟ್ರೋಕ್ ಮೂಲಕ ಎದುರಾಳಿ ಜ್ವೊನರೆವರ ವಿರುದ್ಧ ಪ್ರಭುತ್ವ ಸಾಧಿಸಿದರು.
24 ವರ್ಷದ ಸ್ಟೊಸುರ್ ಅನಾರೋಗ್ಯದ ಕಾರಣ ಸೆಪ್ಟೆಂಬರ್‌ನಿಂದ ಪಂದ್ಯದಿಂದ ನೇಪಥ್ಯಕ್ಕೆ ಸರಿದಿದ್ದರು. ನಂತರ ವಾಪಸಾತಿ ಕಂಡ ಸ್ಟೊಸುರ್ ಈ ತಿಂಗಳಾದಿಯಲ್ಲಿ ಬೋಬ್ ಬ್ರಿಯಾನ್ ಜತೆ ಗೂಡಿ ವಿಂಬಲ್ಡನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿದ್ದರು.
ಸ್ಟೊಸುರ್ ಮುಂದಿನ ಕ್ವಾಟರ್-ಫೈನಲಿನಲ್ಲಿ ಅಲೆಕ್ಸಂದ್ರ ವೊಜಿನಿಯಾಕ್‌ರನ್ನು ಎದುರಿಸಲಿದ್ದಾರೆ. ಕೆನಡಾದ ವೊಜಿನಿಯಾಕ್ ಆಸ್ಟ್ರೀಯಾದ ಸಿಬಿಲ್ಲೆ ಬಮ್ಮೆರ್‌ರನ್ನು 6-4, 7-5 ಸೋಲಿಸಿದ್ದರು.
ಸ್ವಿಜರ್ಲೇಂಡಿನ 5ನೇ ಶ್ರೇಯಾಂಕಿತೆ ಪಟ್ಟಿ ನೈಡರ್ ರಷ್ಯಾದ ಅಲಿಸ ಕ್ಲೆಬನೋವಾರನ್ನು 7-6 ,6-4 ದಲ್ಲಿ ಸೋಲಿಸಿ ಮುನ್ನಡೆ ಕಂಡರು. ಕ್ವಾಟರ್ಸ್‌ನಲ್ಲಿ ನೈಡರ್ ಅಗ್ರ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್‌ರನ್ನು ಎದುರಿಸಲಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|