|
| ಡಿಡಿ, ಖಾಸಗಿ ವಾಹಿನಿಗಳ ಮೇಲೆ ಗಿಲ್ಲ್ ಗರಂ |
| ನವದೆಹಲಿ, ಶುಕ್ರವಾರ, 18 ಜುಲೈ 2008 ( 12:03 IST ) | |
ಪ್ರಸಕ್ತ ಹೈದರಾಬಾದಿನಲ್ಲಿ ನಡೆಯುತ್ತಿರುವ ಜ್ಯೂನಿಯರ್ ಏಷಿಯಾ ಕಪ್ ಹಾಕಿ ಟೂರ್ನಮೆಂಟ್ ಹೆಚ್ಚಿನ ಗಮನ ಸೆಳೆಯದಿರುವುದರಿಂದ ಅಸಮಾಧಾನಕ್ಕೊಳಗಾಗಿರುವ ಕ್ರೀಡಾ ಸಚಿವ ಎಂಎಸ್ ಗಿಲ್ಲ್, ಇದಕ್ಕಾಗಿ ಸರಕಾರಿ ಪ್ರಸಾರ ಸಂಸ್ಥೆ ದೂರದರ್ಶನ ಮತ್ತು ಖಾಸಗಿ ವಾಹಿನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೈದರಾಬಾದಿನಲ್ಲಿ ನಡೆಯುತ್ತಿರುವ 8 ದೇಶಗಳ ಟೂರ್ನಮೆಂಟ್‌ನ್ನು ಅನೇಕ ಜನರು ನೋಡಲು ಇಚ್ಚಿಸುತ್ತಿದ್ದಾರೆ. ಆದರೆ ದೂರದರ್ಶನ ಈ ಬಗ್ಗೆ ಒಲವು ತೋರಲಿಲ್ಲ ಕಾರಣ ಅವರ ಗಮನ ಹಣ ಮಾಡುವುದರಲ್ಲಿ ಇದೆ ಎಂದು ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ದೂರದರ್ಶನ ಈ ಟೂರ್ನಮೆಂಟನ್ನು ತೋರಿಸದಿರುವುದಕ್ಕೆ ತನ್ನನ್ನು ಕ್ಷಮಿಸಿ. ಇದನ್ನು ಬಗೆಹರಿಸಲು ತಾನು ಸಾಕಷ್ಟು ಪ್ರಯತ್ನಿಸಿದೆ, ಆದರೆ ಸಫಲನಾಗಲಿಲ್ಲ. ಕಾರಣ ದೂರದರ್ಶನ ಅದರಿಂದ ಹಣ ಮಾಡುವುದನ್ನು ಇಚ್ಚಿಸಿತ್ತು ಎಂದು ಗಿಲ್ಲ್ ತಿಳಿಸಿದ್ದಾರೆ.
ರಾಷ್ಟ್ರೀಯ ಹಿತದ ಪಂದ್ಯಗಳನ್ನು ಪ್ರಸಾರ ಮಾಡುವುದು ಸಾರ್ವಜನಿಕ ಪ್ರಸಾರಕರ್ತ ಸಂಸ್ಥೆಯಾದ ದೂರದರ್ಶನದ ಕರ್ತವ್ಯವಾಗಿದೆ ಎಂದು ಹೇಳಿದ ಗಿಲ್ಲ್, ಡಿಡಿ ಯಾವತ್ತೂ ಹಣ ಮಾಡುವುದರತ್ತವೇ ಯೋಚಿಸ ಕೂಡದು. ಅದಕ್ಕೂ ಒಂದು ಮಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಖಾಸಗಿ ವಾಹಿನಿಗಳತ್ತಲೂ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಗಿಲ್ಲ್, ನಿನ್ನೆ ರಾತ್ರಿ ತಾನು ಪ್ರಮುಖ ಸುದ್ಧಿ ಬುಲೆಟಿನ್‌ಗಳನ್ನು ನೋಡಿದಾಗ ತನಗೆ ಬಹಳ ನಿರಾಶೆಯಾಯಿತು. ಏಷಿಯಾ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ ಭಾರತ ಮತ್ತು ಪಾಕ್ ನಡುವೆ ಕುತೂಹಲಕಾರಿ ಸೆಮಿಫೈನಲ್ ನಡೆದಿತ್ತು. ಇದನ್ನು ಭಾರತ 3-1ರಲ್ಲಿ ಗೆದ್ದು ಕೊಂಡಿತ್ತು. ಆದರೆ ಆ ಸುದ್ಧಿಯ ಬದಲಿಗೆ, ಮೊದಲ ಸುದ್ಧಿಯಾಗಿ ಸಾನಿಯಾ ಮಿರ್ಜಾ ಒಂದು ಸಣ್ಣ ಟೂರ್ನಮೆಂಟಿನಲ್ಲಿ ಸೋತಿರುವುದು ಮತ್ತು ಎರಡನೇ ಸುದ್ಧಿಯಾಗಿ ರೊನಾಲ್ಡೀನೋ ಫುಟ್‌ಬಾಲರ್ 30 ದಶಲಕ್ಷ ಡಾಲರ್ ಮೊತ್ತದಲ್ಲಿ ಬಾರ್ಸಿಲೋನಾವನ್ನು ತ್ಯಜಿಸಿ ಎಸಿ ಮಿಲಾನ್ ಸೇರುವುದು ಬಿತ್ತರಗೊಂಡಿತ್ತು. ಸಂತೋಷ್ ಟ್ರೋಫಿಯಲ್ಲಿ ಫುಟ್‌ಬಾಲರುಗಳು ತಮ್ಮ ಟಿಎ-ಡಿಎ ಪಡೆಯದ ದೇಶದಲ್ಲಿ ಈ ಸುದ್ಧಿಗಳ ಪ್ರಸಕ್ತತೆಯಾದರೂ ಏನು ಎಂಬುದಾಗಿ ಪ್ರಶ್ನಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|