|
| ಮುರಳೀಧರನ್ ಶ್ರೀಲಂಕಾದ ಅತ್ಯುತ್ತಮ ಕ್ರೀಡಾಪಟು |
| ಕೊಲೊಂಬೊ, ಗುರುವಾರ, 17 ಜುಲೈ 2008 ( 15:51 IST ) | |
ಭಾರತದ ವಿರುದ್ಧದ ತವರು ಟೆಸ್ಟ್ ಸರಣಿ ಆರಂಭವಾಗಲು ಇನ್ನು ಕೆಲವೇ ದಿನಗಳಿದ್ದು, ಇದಕ್ಕೆ ಉತ್ತೇಜಕವೆಂಬಂತೆ ಸ್ಪಿನ್ ಮಾಂತ್ರಿಕ ಮುರಳೀದರನ್ ಶ್ರೀಲಂಕಾದ ವರ್ಷದ ಅತ್ಯಂತ ಅಸಾಧಾರಣ ಕ್ರೀಡಾಪಟು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳವಾರ ರಾತ್ರಿ ನಡೆದ ಝಗಮಗಿಸುವ ಸಮಾರಂಭವೊಂದರಲ್ಲಿ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಮುರಳೀಧರನ್‌ಗೆ ಈ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಶಸ್ತಿ ಪಡೆದ ಉಲ್ಲಾಸಿತ ಮುರಳೀಧರನ್ ಅಧ್ಯಕ್ಷರಿಗೆ ಧನ್ಯವಾದ ಸಲ್ಲಿಸಿದರು.
ತಮ್ಮ 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರತಿ ಟೆಸ್ಟ್ 6 ವಿಕೆಟುಗಳಿಗಿಂತಲೂ ಅಧಿಕ ಸರಾಸರಿ ಹೊಂದಿರುವ ಮುರಳೀಧರನ್ ಕ್ರಿಕೆಟ್ ಇತಿಹಾಸದಲ್ಲಿನ ಅತ್ಯಂತ ಯಶಸ್ಸಿ ಬೌಲರುಗಳಲ್ಲಿ ಒಬ್ಬರಾಗಿದ್ದಾರೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ತಮ್ಮ ತವರು ಕ್ರೀಡಾಂಗಣವಾದ ಕ್ಯಾಂಡಿಯಲ್ಲಿ ಆಸ್ಟ್ರೇಲಿಯಾದ ಸ್ಪಿನ್ ದಿಗ್ಗಜ ಶೇನ್ ವಾರ್ನ್‌ರ 708 ವಿಕೆಟ್ ದಾಖಲೆಯನ್ನು ಮುರಿದು ಹಾಕುವುರೊಂದಿಗೆ ವಿಶ್ವದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆಗೆ ಪಾತ್ರರಾದರು. ಮುರಳೀಧರನ್ 120 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 735 ವಿಕೆಟುಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸಂಧಾನಕ್ಕೆ ಸಾಧ್ಯವಾಗದ ವಿಷಯವೊಂದು ನಿಮ್ಮ ಕಾರ್ಯವನ್ನು ತ್ರಾಸದಾಯಕವಾಗಿಸಬಹುದು. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|