|
| ಪಾಕ್ ಕೆಟ್ಟ ಪ್ರದರ್ಶನಕ್ಕೆ ಬಿಗಿ ವೇಳಾಪಟ್ಟಿ ಕಾರಣ: ಯೂಸುಫ್ |
| ಲಾಹೋರ್, ಗುರುವಾರ, 17 ಜುಲೈ 2008 ( 13:57 IST ) | |
ಕಠಿಣ ಎದುರಾಳಿಯನ್ನು ಸೋಲಿಸುವ ತೀವ್ರತೆಯನ್ನು ಪಾಕಿಸ್ತಾನ ಕಳೆದುಕೊಂಡಿದೆ ಎಂಬ ಮಾತುಗಳನ್ನು ನಿರಾಕರಿಸಿದ ಮೊಹಮ್ಮದ್ ಯೂಸುಪ್, ಈ ದಿನಗಳಲ್ಲಿ ಆಡುತ್ತಿರುವ ಕ್ರಿಕೆಟ್ ಆಟದ ಪ್ರಮಾಣದವನ್ನು ದೂಷಿಸಿದ್ದು, ಸೋಲು ಗೆಲುವು ಕ್ರೀಡೆಯ ಅವಿಭಾಜ್ಯ ಅಂಗ ಎಂದು ಹೇಳುವ ಮೂಲಕ ತಮ್ಮ ತಂಡವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ತಿಂಗಳ ಆದಿಯಲ್ಲಿ, ಪಾಕಿಸ್ತಾನ ಏಷಿಯಾ ಕಪ್ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಪ್ರಮುಖ ಪಂದ್ಯಗಳಲ್ಲಿ ಭಾರತ ಮತ್ತು ಶ್ರೀಲಂಕಾ ಎದುರು ಸೋಲು ಕಂಡಿತ್ತು.
ಗೆಲ್ಲುವುದು ಸೋಲುವುದು ಕ್ರೀಡೆಯ ಭಾಗವಾಗಿದೆ ಎಂದು ಹೇಳಿರುವ ಯೂಸುಫ್, ತಾವು ಪ್ರಮುಖ ಪಂದ್ಯಗಳಲ್ಲಿ ಸೋತಿದ್ದೇವೆ. 300 ರನ್ನುಗಳನ್ನು ಪೇರಿಸುವಲ್ಲಿ ವಿಫಲವಾದ ಕಾರಣ ತಾವು ದಂಡ ತೆತ್ತೆವು ಎಂದು ತಿಳಿಸಿದರು.
ಈ ದಿನಗಳಲ್ಲಿ ಆಡುಲಾಗುತ್ತಿರುವ ಕ್ರಿಕೆಟ್ ಆಟಗಳ ಪ್ರಮಾಣ ಪಾಕ್ ತಂಡದ ಅಸ್ಥಿರ ಪ್ರದರ್ಶನಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ ಯೂಸುಫ್, ಇದು ತನ್ನ ಪ್ರಕಾರ ಸಾಮಾನ್ಯವಾದುದಲ್ಲ ಎಂದು ಹೇಳಿದ್ದಾರೆ. ಈ ದಿನಗಳಲ್ಲಿ ಆಡಲಾಗುತ್ತಿರುವ ಪಂದ್ಯಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡರೆ, ಪಂದ್ಯದಲ್ಲಿ ಸೋಲು ಕಾಣುವುದು ದೊಡ್ಡ ವಿಷಯವಲ್ಲ. ಕೆಲವನ್ನು ಗೆಲ್ಲುತ್ತೇವೆ, ಇನ್ನು ಕೆಲವನ್ನು ಸೋಲುತ್ತೇವೆ. ಇದು ಕ್ರಿಕೆಟ್‌ನಲ್ಲಿ ಸರ್ವೇಸಾಮನ್ಯ ಎಂದು ವಿವರಿಸಿದರು.
ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದರೂ, ಪಾಕ್ ಪರ ವಿಶ್ವಾಸ ವ್ಯಕ್ತಪಡಿಸಿರುವ ಯೂಸುಫ್, ತಾವು ತವರು ಲಾಭ ಮತ್ತು ಉತ್ತಮ ತಂಡವನ್ನು ಹೊಂದಿದ್ದು ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಲಿದ್ದೇವೆ ಎಂಬುದು ತನ್ನ ಅನಿಸಿಕೆ ಎಂದು ಯೂಸುಫ್ ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತವಾಗಿ ಸಾಗುತ್ತವೆ. ಸಂಧಾನಕ್ಕೆ ಸಾಧ್ಯವಾಗದ ವಿಷಯವೊಂದು ನಿಮ್ಮ ಕಾರ್ಯವನ್ನು ತ್ರಾಸದಾಯಕವಾಗಿಸಬಹುದು. ನಿಮ್ಮ ವಿರೋಧಿಗಳು ಮತ್ತು ಕಚೇರಿ ಸಹವರ್ತಿಗಳೂ ಕೂಡ ನಿಮ್ಮ ನೈತಿಕ ಬಲವನ್ನು ಒಪ್ಪಿಕೊಳ್ಳುತ್ತಾರೆ. ಅನಿರೀಕ್ಷಿತ ಕ್ಷೇತ್ರಗಳಿಂದ ಸಾಲದ ನೆರವು ನೀವು ಪಡೆಯಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಒಬ್ಬರು ಚಿತ್ರರಂಗ ಪ್ರವೇಶಿಸಿದರೆ ಇಡೀ ಪರಿವಾರವೇ ಚಿತ್ರರಂಗದತ್ತ ಮುಖ ಮಾಡುತ್ತಾರೆ. ಇದಕ್ಕೆ ಬಾಲಿವುಡ್, ಹಾಲಿವುಡ್‌ನಂತೆ ಸ್ಯಾಂಡಲ್ವುಡ್ ಕೂಡಾ ಹೊರತಾಗಿಲ್ಲ. ಪೂಜಾಗಾಂಧಿ ಮುಂಗಾರು ಮಳೆಯ ಮೂಲಕ ರಾತ್ರೋ ರಾತ್ರಿ ಜನಪ್ರಿಯವಾದರು. ಆಕೆಯನ್ನು |
| |
|
|
|
|
|
|
|