|
|
ಐಸಿಸಿ ಪೂರ್ಣ ಸದಸ್ಯನಾಗಿ ಜಿಂಬಾಬ್ವೆ ಮುಂದುವರಿಕೆ |
| ದುಬೈ, ಶುಕ್ರವಾರ, 4 ಜುಲೈ 2008 ( 13:38 IST ) | |
ಜಿಂಬಾಬ್ವೆ ವಿಷಯವಾಗಿ ಒಡಕು ಕಂಡಿದ್ದ ವಿಶ್ವ ಕ್ರಿಕೆಟ್ ಮಂಡಳಿ ಕೊನೆ ಕ್ಷಣ ಮಾಡಿದ ಸಂಧಾನದ ಫಲವಾಗಿ, ಕಲಹ ಪೀಡಿತ ಜಿಂಬಾಬ್ವೆ ಐಸಿಸಿಯ ಪೂರ್ಣ ಸದಸ್ಯನಾಗಿ ಮುಂದುವರಿಯಲು ಒಪ್ಪಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿದ್ದಾರೆ.
ಮೂರನೇ ದಿನವಾದ ಇಂದೂ ಸಭೆ ನಡೆಸಿದ ಐಸಿಸಿ ಕಾರ್ಯಕಾರಿಣಿ ಮಂಡಳಿ, ಜಿಂಬಾಬ್ವೆಯನ್ನು ತನ್ನ ತೆಕ್ಕೆಯಲ್ಲೇ ಉಳಿಸಲು ಒಪ್ಪಿಕೊಂಡಿತು. ಮುಂದಿನ ವರ್ಷ ಇಗ್ಲೆಂಡಿನಲ್ಲಿ ನಡೆಯಲಿರುವ ವಿಶ್ವ ಟ್ವೆಂಟಿ20 ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿಯುವಂತೆ ಭಾರತ ಮಾಡಿದ ಮನವಿಗೆ ಆಫ್ರಿಕಾ ರಾಷ್ಟ್ರ ಒಪ್ಪಿಕೊಂಡ ನಂತರ ಈ ಬೆಳವಣಿಗೆ ಕಂಡು ಬಂದಿದೆ. ಇದಕ್ಕೂ ಮುಂಚೆ ಬ್ರಿಟೀಷ್ ಸರಕಾರ ಜಿಂಬಾಬ್ವೆ ಕ್ರಿಕೆಟರುಗಳಿಗೆ ವೀಸಾವನ್ನು ವಿತರಿಸುವುದಿಲ್ಲ ಎಂಬುದಾಗಿ ಸ್ಪಷ್ಟ ದ್ವನಿಯಲ್ಲಿ ತಿಳಿಸಿತ್ತು ಮತ್ತು ಇದರಿಂದ ಐಸಿಸಿಗೆ ಈ ಟ್ವೆಂಟಿ20 ಚಾಂಪಿಯನ್‌ಶಿಪನ್ನು ಇಂಗ್ಲೆಂಡ್‌ನಿಂದ ಹೊರಕ್ಕೆ ನಡೆಸುವ ಅನಿವಾರ್ಯವನ್ನು ತಂದಿತ್ತು.
ತಮ್ಮ ದೇಶ ಸ್ವಯಂ ಪ್ರೇರಿತವಾಗಿ ಚಾಂಪಿಯನ್‌ಶಿಪ್‌ನಿಂದ ಹೊರ ನಡೆದಿದೆ ಎಂದು ಜಿಂಬಾಬ್ವೆ ಕ್ರಿಕೆಟ್ ಸಂಘಟನೆಯ ಅಧ್ಯಕ್ಷ ಪೀಟರ್ ಚಿಂಗೋಕ ಸುದ್ಧಿ ಸಂಸ್ಥೆಗೆ ತಿಳಿಸಿದ್ದಾರೆ. ಕ್ರಿಕೆಟ್‌ನ ಹಿತವನ್ನು ಗಮನದಲ್ಲಿಟ್ಟುಕೊಂಡು ತಾವು ಟ್ವೆಂಟಿ20 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಆದರೆ ತಾವು ಐಸಿಸಿಯ ಪೂರ್ಣ ಸದಸ್ಯರಾಗಿ ಮುಂದುವರಿಯಲಿದ್ದೇವೆ ಮತ್ತು ತಮ್ಮ ಜತೆ ಆಡಲು ಇಚ್ಚಿಸುವ ಯಾವುದೇ ತಂಡಕ್ಕೆ ಸ್ವಾಗತವಿದೆ ಎಂದು ಹೇಳಿದ್ದಾರೆ.
ಇಗ್ಲೆಂಡ್‌ಗೆ ಪ್ರಯಾಣ ನಡೆಸಲು ತಮಗೆ ವೀಸಾ ನೀಡಲಾಗುವುದಿಲ್ಲ ಎಂಬುದಾಗಿ ತಮಗೆ ತಿಳಿಸಲಾಗಿದ್ದು, ಈ ಕಾರಣದಿಂದ ತಾವು ಸ್ವಯಂ ಪ್ರೇರಿತವಾಗಿ ಟ್ವೆಂಟಿ20 ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದೆವು ಎಂದು ವಿವರಿಸಿದರು.
ಹರಾರೆಯಲ್ಲಿನ ಹದಗೆಡವುತ್ತಿರುವ ರಾಜಕೀಯ ಪರಿಸ್ಥಿತಿಯ ಪ್ರತಿಭಟನೆಯಾಗಿ ದಕ್ಷಿಣ ಆಫ್ರಿಕಾ ಮತ್ತು ಇಗ್ಲೆಂಡ್ ಕ್ರಿಕೆಟ್ ಮಂಡಳಿ ಜಿಂಬಾಬ್ವೆ ಜತೆಗಿನ ದ್ವಿಪಕ್ಷೀಯ ಮೈತ್ರಿಯನ್ನು ಕಡಿದು ಹಾಕಿತ್ತು. ಇಗ್ಲೆಂಡ್ ಮತ್ತು ದ.ಆಫ್ರಿಕಾ ಜಿಂಬಾಬ್ವೆಯನ್ನು ಐಸಿಸಿಯಿಂದ ತೆಗೆದು ಹಾಕಲು ಇಚ್ಚಿಸಿತ್ತಾದರೆ, ಪಂದ್ಯದ ವಾಣಿಜ್ಯ ಶಕ್ತಿ ಭಾರತ ನೇತೃತ್ವದ ಏಷಿಯಾ ಕ್ರಿಕೆಟ್ ರಾಷ್ಟ್ರ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|