|
| ಏಷಿಯಾ ಕಪ್: ಮಿಂಚಿದ ಅಗ್ರ ಕ್ರಮಾಂಕ, ಭಾರತ ಫೈನಲ್‌ಗೆ |
| ಕರಾಚಿ, ಶುಕ್ರವಾರ, 4 ಜುಲೈ 2008 ( 08:59 IST ) | |
ಮತ್ತೊಮ್ಮೆ ಬ್ಯಾಟಿಂಗ್ ಪ್ರಭುತ್ವವನ್ನು ಮೆರೆದಿರುವ ಟೀಂ ಇಂಡಿಯಾ ತನ್ನ ಬಲಯುತ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಹೊಣೆಭರಿತ ಆಟದಿಂದಾಗಿ, ಏಷಿಯಾ ಕಪ್ ಸೂಪರ್ ಪೋರ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 6 ವಿಕೆಟುಗಳಿಂದ ಸೋಲಿಸಿ, ಫೈನಲ್‌ಗೆ ಪ್ರವೇಶಿಸುವಲ್ಲಿ ಸಫಲವಾಗಿದೆ.
ಶ್ರೀಲಂಕಾ ಒಡ್ಡಿದ ಮತ್ತೊಂದು ಭಾರಿ ಸವಾಲಾದ 308 ರನ್ನಿಗೆ ಪ್ರತ್ಯುತ್ತರವಾಗಿ ಭಾರತ ಪರ ಎಲ್ಲಾ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಮ್ಮ ಜವಬ್ದಾರಿಯುತ ಆಟ ಪ್ರದರ್ಶಿಸಿ, ಇನ್ನೂ 19 ಬೌಲುಗಳಿರುವಂತೆಯೇ ಗೆಲುವಿನ ನಗೆಯನ್ನು ಬೀರಿತು ಮತ್ತು ಫೈನಲ್ ಪ್ರವೇಶಿಸುವಾಗಿನ ಅತಿಥೇಯ ತಂಡ ಪಾಕಿಸ್ತಾನದ ಆಶಾಕಿರಣವನ್ನು ಭಗ್ನಗೊಳಿಸಿತು.
ಭಾರತ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸೆಹ್ವಾಗ್, ಗಂಭೀರ್‌ನಿಂದ ಹಿಡಿದು ಶರ್ಮಾ ವರೆಗೆ ಎಲ್ಲಾ ಬ್ಯಾಟ್ಸ್‌ಮನ್‌ಗಳು ದೊಡ್ಡ ಸವಾಲನ್ನು ಎದುರಿಸುವಲ್ಲಿ ಅಗತ್ಯವಿರಬೇಕಾದ ದೈರ್ಯ ಮತ್ತು ಸಹನೆಯನ್ನು ಪ್ರದರ್ಶಿಸಿದರು.
ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಸೆಹ್ವಾಗ್ ಮತ್ತು ಗಂಭೀರ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್‌ಗೆ ಮೊರೆಹೋಗಿ, ಲಂಕಾ ಬೌಲರುಗಳನ್ನು ಕಾಡಿದರು. ತಮ್ಮ ಮಿಂಚಿನ ಆಟವನ್ನು ಮುಂದುವರಿಸಿರುವ ಸೆಹ್ವಾಗ್ ಮತ್ತೊಮ್ಮೆ ಹೊಡೆಬಡಿ ಆಟಕ್ಕೆ ಕೈಹಾಕಿ ಮಿಂಚಿನ 42 ರನ್ನುಗಳನ್ನು ಮಾಡಿ ಕುಲಸೇಕರ ಬೌಲಿಗೆ ಔಟಾದರು. ಈ ಕಡೆ ತಮ್ಮ ಸ್ಥಿರತೆಯ ಆಟವನ್ನು ಮುಂದುವರಿಸಿರುವ ಗಂಭೀರ್ ಸಾವಧಾನಯುತವಾಗಿ ಆಡಿ ಭಾರತದ ಸ್ಕೋರ್ ಬೋರ್ಡ್ ಚಲಿಸುವಂತೆ ಮಾಡಿದರು. ಇವರಿಗೆ ರೈನಾ ಉತ್ತಮ ಸಾತ್ ನೀಡಿದರು.
ತಮ್ಮ 11ನೇ ಏಕದಿನ ಅರ್ಧಶತಕ ಬಾರಿಸಿದ ಗಂಭೀರ್ (68) ಕೊನೆಯದಾಗಿ ಮುರಳೀಧರನ್‌ರ ಎಲ್ಬಿ ಬಲೆಗೆ ಬಿದ್ದರು. ನಂತರ ರೈನಾ ಮತ್ತು ನಾಯಕ ಧೋನಿ ಈ ದೊಡ್ಡ ಮೊತ್ತದ ಸವಾಲನ್ನು ಬೆನ್ನಟ್ಟುವ ಜವಬ್ದಾರಿಯನ್ನು ವಹಿಸಿಕೊಂಡರು. ರೈನಾ (54) ತಮ್ಮ ಉತ್ತಮ ಆಟವನ್ನು ಮುಂದುವರಿಸಿದ್ದು ಏಷಿಯಾ ಕಪ್‌ನಲ್ಲಿನ ತಮ್ಮ ಎರಡನೇ ಹಾಗೂ ಒಟ್ಟು 5ನೇ ಏಕದಿನ ಅರ್ಧಶತಕ ಬಾರಿಸಿದರು. ಅಂತಿಮವಾಗಿ ರೈನಾ ರನ್ ಕಸಿಯುವ ಭರದಲ್ಲಿ ರನೌಟ್‌ಗೆ ಬಲಿಯಾದರು. ಈ ಕಡೆ ಪಂದ್ಯ ಪುರುಶೋತ್ತಮ ಧೋನಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಜಳಪು ತೋರಿಸಿ ಭಾರತವನ್ನು ಗೆಲವಿನ ಹಂತಕ್ಕೆ ಕೊಂಡೊಯ್ದರು. ಧೋನಿ (67) ಮುರಳೀಧರ್ ಬೌಲಿಗೆ ಬೌಲ್ಡ್ ಆದರು.
ತದ ನಂತರ ಯುವರಾಜ್ ಸಿಂಗ್ (36) ಮತ್ತು ಶರ್ಮಾ (22) ತಮ್ಮ ಮುಂದಿದ್ದ ಗೆಲುವಿನ ಗುರಿಯನ್ನು ಸುಲಭವಾಗಿ ತಲುಪಿ, ಭಾರತದ ಪಾಳಯದಲ್ಲಿ ನೆಮ್ಮದಿಯ ನಗೆ ಬೀರುವಂತೆ ಮಾಡಿದರು.
ಇದಕ್ಕೂ ಮುಂಚೆ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ ನಾಯಕ ಜಯವರ್ಧನೆ (50), ಕಪುಗೆದೆರ (75) ಮತ್ತು ಸಿಲ್ವಾ (50)ರ ಅರ್ಧಶತಕದ ಆಟದ ಪರಿಣಾಮವಾಗಿ ಭಾರತದ ಎದುರು 8 ವಿಕೆಟ್ ನಷ್ಟಕ್ಕೆ 308 ರನ್ನುಗಳ ಮತ್ತೊಂದು ಬೃಹತ್ ಮೊತ್ತವನ್ನು ಪೇರಿಸಿತ್ತು. ಆರಂಭಿಕ ಆಟಗಾರ ಜಯಸೂರ್ಯ (43) ತಮ್ಮ ಎಂದಿನ ಶೈಲಿಯಲ್ಲಿ ಮಿಂಚಿನ ಆಟಕ್ಕೆ ಮೊರೆ ಹೋಗಿ, ಶ್ರೀಲಾಂಕಾಗೆ ಆರಂಭಿಕ ಆವೇಗ ನೀಡಿದ್ದರು.
ಭಾರತ ಪರ ಇಶಾಂತ್ ಶರ್ಮಾ 2, ಆರ್‌ಪಿ ಸಿಂಗ್, ಇರ್ಪಾನ್ ಪಠಾಣ್, ಪ್ರವೀಣ್ ಕುಮಾರ್ ಮತ್ತು ಒಹ್ಜಾ ತಲಾ ಒಂದು ವಿಕೆಟನ್ನು ಕಬಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ದಾಂಪತ್ಯ ಸುಖದಲ್ಲಿ ತೃಪ್ತಿ. ಮನೋರಂಜನೆಗೆ ಮರುಳಗಾಬೇಡಿರಿ. ಯಾವೂದರಲ್ಲೂ ಅವಸರಬೇಡ. ಹಣ ಬರುವುದು. ದುಂದು ವೆಚ್ಚ ಮಾಡಬೇಡಿ. ವಿದ್ಯಾರ್ಥಿಗಳಿಗೆ ಉದಾಸೀನ. ಸಿಟ್ಟಿನಿಂದ ಮಾತಿನಲ್ಲಿ ಸಿಕ್ಕಿ ಬೀಳುವಿರಿ. ಸುಬ್ರಹ್ಮಣ್ಯ ಆರಾಧನೆ ಮಾಡಿರಿ. |
| |
|
|
|
|
 | | file |
| | |
| |
|
|
|
|
|
| ಚಿತ್ರ ಸುದ್ದಿ - ನೀವು 'ನೀ ಟಾಟಾ ನಾ ಬಿರ್ಲಾ' ಚಿತ್ರದ ಮೊದಲ ದಿನದ ಪ್ರದರ್ಶನವನ್ನು ಕಪಾಲಿ ಚಿತ್ರಮಂದಿರದಲ್ಲಿ ನೋಡಿದ್ದರೆ, ನಿಮಗೆ ಆ ಚಿತ್ರ ಮಬ್ಬಾಗಿ ಕಂಡಿರಬಹುದು. ಕಾರಣ ಸಿಂಪಲ್. ಸ್ಕ್ರೀನ್ ಮೇಲೆ ಹೊಗೆಯಾಡಿತ್ತು. ದ್ವೇಷದ ಹೊಗೆಯಲ್ಲ. ಬದಲಾಗಿ ಹೋಮದ ಹೊಗೆ. |
| |
|
|
|
|
|
|
|