ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಬೀಜಿಂಗ್ ಒಲಿಂಪಿಕ್ಸ್: ಸಾನಿಯಾ-ಸುನಿತಾಗೆ ವೈಲ್ಡ್ ಕಾರ್ಡ್
ನವದೆಹಲಿ, ಗುರುವಾರ, 3 ಜುಲೈ 2008   ( 12:42 IST )
ಅಗಸ್ಟ್ 8ರಿಂದ ಪ್ರಾರಂಭವಾಗಲಿರುವ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಭಾರತದ ಸಾನಿಯಾ ಮಿರ್ಜಾ ಮತ್ತು ಸುನಿತಾ ರಾವ್ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದಾರೆ.

ಸಾನಿಯ ಭಾರತದ ಅಗ್ರ ಶ್ರೇಯಾಂಕಿತೆ ಮಹಿಳಾ ಟೆನಿಸ್ ಆಟಗಾರ್ತಿಯಾಗಿದ್ದರೆ, ಅಮೆರಿಕದಲ್ಲಿ ವಾಸಿಸುತ್ತಿರುವ ಸುನಿತಾ ಎರಡನೇ ಅಗ್ರ ಶ್ರೇಯಾಂಕ ಪಡೆದ ಭಾರತೀಯ ಆಟಗಾರ್ತಿಯಾಗಿದ್ದಾರೆ. ಮತ್ತು ಇವರು ಪೆಡ್ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಅಂತಾರಾಷ್ಟ್ರೀಯ ಟೆನ್ನಿಸ್ ಪೆಡರೇಶನ್ (ಐಟಿಎಫ್)ನಿಂದ ದೃಢೀಕರಣವನ್ನು ಪಡೆದಿದ್ದೇವೆ ಎಂದು ಅಖಿಲ ಭಾರತೀಯ ಟೆನ್ನಿಸ್ ಸಂಘಟನೆ (ಎಐಟಿಎ)ಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಎಐಟಿಎ ನಾಮನಿರ್ದೇಶನ ಹೊಂದಿರುವ ಸಾನಿಯಾ ಮತ್ತು ಸುನಿತಾಗೆ ಮಹಿಳಾ ಡಬಲ್ಸ್ ಸ್ಪರ್ಧೆಗಾಗಿನ ವೈಲ್ಡ್ ಕಾರ್ಡ್ ಪ್ರವೇಶಕ್ಕೆ ಅನುಮೋದನೆ ನೀಡಿದ ಪತ್ರವನ್ನು ತಾವು ಎಟಿಎಫ್‌ನಿಂದ ಪಡೆದಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಸಿಂಗಲ್ಸ್ ಸ್ಪರ್ಧೆಗೆ ಸಾನಿಯಾ ಈಗಾಗಲೇ ನೇರ ಪ್ರವೇಶವನ್ನು ಪಡೆದಿದ್ದಾರೆ. ಬೀಜಿಂಗ್‌ನ ನೂತನ ಒಲಿಂಪಿಕ್ ಟೆನ್ನಿಸ್ ಕೇಂದ್ರದಲ್ಲಿ ಅಗಸ್ಟ್ 10 -17ರ ತನಕ ಟೆನ್ನಿಸ್ ಸ್ಪರ್ಧೆ ನಡೆಯಲಿದೆ. ಮಹಿಳಾ ಡಬಲ್ಸ್ ಸ್ಪರ್ಧೆಯಲ್ಲಿ 21 ರಾಷ್ಟ್ರಗಳ ಆಟಗಾರ್ತಿಯರು ಪಾಲ್ಗೊಳ್ಳಲಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಏಷಿಯಾ ಕಪ್: ಯೂನಿಸ್ ಶತಕ, ಭಾರತಕ್ಕೆ ಸೋಲು
ವಿಂಬಲ್ಡನ್: ಪೇಸ್-ಲೌಹಿ ಜೋಡಿ ಸೆಮೀಸ್‌ಗೆ
ವಿಂಬಲ್ಡನ್: ಸೆಮೀಸ್‌ಗೆ ಡೆಮಿಂಟಿವಾ
ಕಿರಿಯರ ಏಷಿಯಾ ಕಪ್‌ಗೆ ಗುರ್ಬಾಜ್ ನಾಯಕ
ತಂಡದ ಯಶಸ್ಸಿಗೆ ಧೋನಿ ಕಾರಣ: ಶ್ರೀಕಾಂತ್
ಬಿಗಿ ಪಂದ್ಯ ವೇಳಾಪಟ್ಟಿ: ಧೋನಿಯನ್ನು ಬೆಂಬಲಿಸಿದ ಕರ್ಸ್ಟನ್
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಮುಂಗಡಪತ್ರದಲ್ಲಿ ಹಾಲಿಗೆ 2ರೂ. ಸಹಾಯಧನ
ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ 2ರೂ. ಸಹಾಯಧನ....
ದೆಹಲಿಗೆ ತೆರಳಿದ ಜೆಡಿಎಸ್ ನಿಯೋಗ
ಲಾರಿ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ
ಮನರಂಜನೆ
ಚಿತ್ರ ಸುದ್ದಿ - ಅದು ಕಾರಂಜಿಯ ಬಗ್ಗೆ ಮಾತನಾಡಲು ನಿರ್ಮಾಪಕ ಎಂ.ಎನ್. ಸುರೇಶ್ ಕರೆದಿದ್ದ ಪತ್ರಿಕಾಗೋಷ್ಠಿ. ಅಲ್ಲಿ ಅವರು ಒಂದಷ್ಟನ್ನು ಹರವಿಕೊಂಡರು. ತಮ್ಮ ಕನಸಿನ ಕಾರಂಜಿಯನ್ನು ಬಣ್ಣಿಸಿದರು. ಹೊಸ ಪ್ರತಿಭೆಗಳನ್ನು ಕನ್ನಡಕ್ಕೆ ಪರಿಚಯಿಸುವುದು ನನ್ನ ಉದ್ದೇಶ. ಹಣ ಗಳಿಸುವುದು ಮುಂದಿನ
ಮುಂದೆ ಓದಿ|ಮತ್ತಷ್ಟು...