ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಮಹಿಳಾ ತಂಡಕ್ಕೆ ಬಿಸಿಸಿಐ ನಗದು ಬಹುಮಾನ
ಮುಂಬೈ(ಏಜೆನ್ಸಿ), ಸೋಮವಾರ, 12 ಮೇ 2008   ( 12:28 IST )
ಶ್ರೀಲಂಕಾದ ಕರುಣಗಲಾದ, ವೆಲಾಗೆದರ ಕ್ರಿಕೆಟ್ ಕ್ರಿಡಾಂಗಣದಲ್ಲಿ ಭಾನುವಾರ ನಡೆದ ಎಷ್ಯಾಕಪ್ ವನಿತಾ ಕ್ರಿಕೆಟ್ ಫೈನಲ್‌ನಲ್ಲಿ ಜಯಗಳಿಸಿದ ಭಾರತೀಯ ಮಹಿಳಾ ತಂಡದ ಸದಸ್ಯರಿಗೆ ಬಿಸಿಸಿಐ ನಗದು ಬಹುಮಾನ ಘೋಷಿಸಿದೆ.

ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಗೆಲುವನ್ನು ದಾಖಲಿಸುವ ಮೂಲಕ ಸತತ ನಾಲ್ಕನೇ ಬಾರಿ ಎಷ್ಯಾ ಕಪ್ ಗಳಿಸಿರುವ ಭಾರತೀಯ ಮಹಿಳಾ ತಂಡದ ಎಲ್ಲಾ 15 ಆಟಗಾರ್ತಿಯರಿಗೆ ತಲಾ 5 ಲಕ್ಷ ರೂಪಾಯಿಗಳನ್ನು ಬಿಸಿಸಿಐ ಘೋಷಿಸಿದೆ.

ಇದೇ ವೇಳೆ, ಬಿಸಿಸಿಐಯ ಅಧ್ಯಕ್ಷ ಶರದ್ ಪವಾರ್ ಅವರು, ''ಎಷ್ಯಾಕಪ್‌ನ್ನು ಮತ್ತೊಮ್ಮೆ ಎತ್ತಿದ ನಮ್ಮ ತಂಡದ ಎಲ್ಲಾ ಆಟಗಾರ್ತಿಯರಿಗೆ ಅಭಿನಂದನೆ ಸಲ್ಲಿಸುತ್ತೇನೆ'' ಎಂದು ಹೇಳಿದ್ದಾರೆ.

ಭಾರತ ಮತ್ತು ಶ್ರೀಲಂಕಾ ತಂಡವು ಇದುವರೆಗೆ ನಾಲ್ಕು ಭಾರಿ ಫೈನಲ್‌ನಲ್ಲಿ ಆಡಿತ್ತು, ಸತತ ನಾಲ್ಕನೇ ಭಾರಿ ಭಾರತ ತಂಡವೇ ಪ್ರಶಸ್ತಿಯನ್ನು ಬಾಚಿಕೊಂಡಿದೆ.

ರಾಷ್ಟ್ರಪತಿ ಅಭಿನಂದನೆ-
ಎಷ್ಯಾ ಕಪ್ ಎತ್ತಿ ವನಿತೆಯರಿಗೆ ರಾಷ್ಚ್ರಪತಿ ಪ್ರತಿಭಾ ಪಾಟೀಲ್ ಅವರು ಭಾನುವಾರ ಅಭಿನಂದನೆ ಸಲ್ಲಿಸಿದ್ದಾರೆ.

ರಾಷ್ಟಪತಿ ಭವನದಲ್ಲಿ, ಸತತ ನಾಲ್ಕನೇ ಭಾರಿಯೂ ಉತ್ತಮ ಪ್ರದರ್ಶನದ ಮೂಲಕ ಪ್ರಶಸ್ತಿಯನ್ನು ಬಾಚಿಕೊಂಡ ಭಾರತದ ಮಹಿಳಾ ತಂಡವನ್ನು ಮತ್ತು ನಾಯಕಿ ಮಿಥಾಲ್ ರಾಜ್ ಅವರನ್ನು ಅಭಿನಂದಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವನಿತಾ ಕ್ರಿಕೆಟ್; ಭಾರತ ತಂಡಕ್ಕೆ ಏಷ್ಯಾ ಕಪ್
ಡೆವಿಲ್ಸ್‌ಗೆ ಗೆಲುವು ನಿರಾಕರಿಸಿದ ವಾಟ್ಸನ್‌
ಚಾರ್ಜರ್ಸ್ ಮೇಲೆ ರೈಡ್ ಮಾಡಿದ ನೈಟ್ ರೈಡರ್ಸ್
ಐಪಿಎಲ್ ಫೈನಲ್: ವಾಂಕಡೆಯಿಂದ ಡಿವೈ ಪಾಟಿಲ್‌ಗೆ
ಬಾಲಾಜಿ ಹ್ಯಾಟ್ರಿಕ್, ಪಂಜಾಬ್ ಧೂಳಿಪಟ
ಐದನೇ ಸ್ಥಾನಕ್ಕೆ ಅಂಜು ತೃಪ್ತಿ
ಗ್ರಹ ಗತಿ
ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಈ ಬಾರಿಯೂ ನಾನೇ ಕಿಂಗ್: ಕುಮಾರಸ್ವಾಮಿ
ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಸಿಗುವುದರ ಜೊತೆಗೆ ಜೆಡಿಎಸ್ ಗದ್ದುಗೆ ಏರಲಿದೆ ...
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಮತದಾರರ ಪಟ್ಟಿಯಲ್ಲಿ ಶಿವಣ್ಣನ ಹೆಸರೇ ಇಲ್ಲ!!
ಮನರಂಜನೆ
ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ.
ಮುಂದೆ ಓದಿ|ಮತ್ತಷ್ಟು...
Marketplace