|
| ವನಿತಾ ಕ್ರಿಕೆಟ್; ಭಾರತ ತಂಡಕ್ಕೆ ಏಷ್ಯಾ ಕಪ್ |
| ಕರುಣಗಲಾ(ಏಜೆನ್ಸಿ), ಸೋಮವಾರ, 12 ಮೇ 2008 ( 10:18 IST ) | |
ಭಾರತದ ಮಹಿಳಾ ಕ್ರಿಕೆಟ್ ತಂಡಕ್ಕೆ ಎಷ್ಯಾದಲ್ಲಿ ಯಾವ ತಂಡ ಕೂಡಾ ಸವಾಲೇ ಅಲ್ಲ ಎನ್ನುವ ರೀತಿಯ ಭಾವನೆ ಭಾನುವಾರ ಉಂಟಾಯಿತು. ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ ವನಿತಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶ್ರೀಲಂಕಾ ತಂಡವನ್ನು 177 ರನ್‌ಗಳಿಂದ ಮಟ್ಟ ಹಾಕಿದ ಭಾರತ ಮಹಿಳಾ ತಂಡ ಏಷ್ಯಾ ಕಪ್ ಪ್ರಶಸ್ತಿಯನ್ನು ಪಡೆಯುವ ಮೂಲಕ ಸತತ ನಾಲ್ಕನೇ ಭಾರಿ ಪ್ರಶಸ್ತಿ ಗಳಿಸಿದ ದಾಖಲೆಯನ್ನು ಬರೆದರು.
ಯಾವುದೇ ಪಂದ್ಯಗಳನ್ನು ಸೋಲದೇ ಫೈನಲ್ ತಲುಪಿದ್ದ ಭಾರತ ತಂಡವು, ಈ ಪಂದ್ಯದಲ್ಲಿ ಶ್ರೀಲಂಕವನ್ನು ಎದುರಿಸಿತ್ತು, ಮೊದಲು ಬ್ಯಾಟು ಮಾಡಿದ ಭಾರತ ತಂಡವು 7 ವಿಕೆಟ್ ಕಳೆದುಕೊಂಡು 270 ರನ್ ಮಾಡಿತು. ಇದಕ್ಕುತ್ತರವಾಗಿ ಆಡಲು ತೊಡಗಿದ ಶ್ರೀಲಂಕಾ ತಂಡ, ಭಾರತದ ಮಹಿಳೆಯರ ಮಾರಕ ಬೌಲಿಂಗ್‌ಗೆ ತತ್ತರಿಸಿದರು. ಧರ್ ಮತ್ತು ಸೀಮಾ ಅವರು ತಲಾ ಎರಡು ವಿಕೆಟ್ ಪಡೆದರೆ, ನೀತು ಡೇವಿಡ್ ಒಂದು ವಿಕೆಟ್ ಪಡೆದು ಶ್ರೀಲಂಕಾದ ಕುಸಿತಕ್ಕೆ ಕಾರಣರಾದರು. ಅಂತಿಮವಾಗಿ ಶ್ರೀಲಂಕಾ ತಂಡ 83 ಕ್ಕೆ ಆಲೌಟ್ ಆಗಿ 177 ರನ್ ಗಳ ಸೋಲನ್ನು ಪಡೆಯಿತು.
ಈ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮಹಿಳೆಯರು ಉತ್ತಮ ಆರಂಭವನ್ನು ಪಡೆಯಿತು, ಕರುಣಾ ಜೈನ್ 28, ಮಿಥಾಲಿ ರಾಜ್ 66, ರುಮೇಲಿ ಧರ್ ಅವರು 50 ಮಾಡಿದರೆ, ರಾವತ್ ಅವರು 97 ರನ್ ಮಾಡಿ ತಂಡದ ರನ್ ಗಳಿಕೆಯನ್ನು ಹಿಗ್ಗಿಸಿದರು. ಭಾರತದ ಘಟಾನುಘಟಿಗಳ ಅಬ್ಬರಕ್ಕೆ ಶ್ರೀಲಂಕಾದ ಬೌಲಿಂಗ್ ಸಪ್ಪಯಾಯಿತು. ಇದ್ದದರಲ್ಲಿ ಸಿರಿವರ್ಧನೆ ಅವರು ನಾಲ್ಕು ವಿಕೆಟ್ ಪಡೆಯಲು ಸಫಲರಾದರು.
ಎ ರಾವತ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರೆ, ರುಮೇಲಿ ಧರ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ. |
| |
|
|
|
|
|
|
|