ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಡೆವಿಲ್ಸ್‌ಗೆ ಗೆಲುವು ನಿರಾಕರಿಸಿದ ವಾಟ್ಸನ್‌
ಜೈಪುರ(ಏಜೆನ್ಸಿ), 12 ಮೇ 2008   ( 09:55 IST )
PTI
ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಆಟಗಾರರು ನೀಡಿದ ಎರಡು ಜೀವದಾನಗಳ ಉಪಯೋಗವನ್ನು ಸಂಪೂರ್ಣವಾಗಿ ಪಡೆದ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಸೇನ್ ವಾಟ್ಸನ್, ವೇಗದ ಅರ್ಧ ಶತಕ ಹೊಡೆದು, ಡೆಲ್ಲಿ ಡೇರ್ ಡೆವಿಲ್ಸ್ ಎದುರು ರಾಜಸ್ಥಾನ ರಾಯಲ್ಸ್ ತಂಡಕ್ಕೆ ಮೂರು ವಿಕೆಟ್‌ಗಳ ರೋಚಕ ಜಯಕ್ಕೆ ಕಾರಣರಾದರು.

ಭಾನುವಾರ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟು ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ನೀಡಿದ 157 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದ ರಾಜಸ್ಥಾನ ರಾಯಲ್ಸ್ ತಂಡವು ಪ್ರಾರಂಭದಲ್ಲಿ ಹಿನ್ನಡೆಯನ್ನು ಅನುಭವಿಸಿತು. ಆದರೆ, ಒಂದು ಹಂತದಲ್ಲಿ ತಿರುಗಿ ಬಿದ್ದ ರಾಜಸ್ಥಾನ ರಾಯಲ್ಸ್ ತಂಡವು, ಡೆವಿಲ್ಸ್‌‌ಗಳಿಗೆ ಜಯವನ್ನು ನಿರಾಕರಿಸಿತು.

ಸುಲಭ ಸವಾಲಯನ್ನು ಪಡೆದುಕೊಂಡಿದ್ದ ರಾಜಸ್ಥಾನ ರಾಯಲ್ಸ್ ತಂಡದ ಆರಂಭ ಸೋಚನೀಯವಾಗಿತ್ತು. ಮೊದಲ ಐದು ಓವರ್‌ಗಳಲ್ಲಿ ಆಡಿದ ರೀತಿ ನೋಡಿದರೆ ರನ್‌ ಸವಾಲಿನ ಹತ್ತಿರ ಬರುವ ಸಾಧ್ಯತೆ ಕಡಿಮೆ ಇತ್ತು. ಅಬ್ಬರದ ಆಟಗಾರ ಯೂಸುಫ್ ಪಠಾಣ್ ಅವರು ಮಹಮ್ಮದ್ ಕೈಫ್ ಅವರು ಬೇಗನೇ ಫೆವಿಲಿಯನ್ ಕಡೆಗೆ ನಡಿಗೆ ಇಟ್ಟಾಗ ಡೆವಿಲ್ಸ್ ಜಯ ದಾಖಲಿಸುವುದು ಖಚಿತವಾಗಿತ್ತು. ಇದಕ್ಕೆ ಸರಿಯಾಗಿ, ರನ್ ಮಾಡಲು ಪರದಾಡಿದ ಗ್ರೇಮ್ ಸ್ಮಿತ್ ಅತಿಮವಾಗಿ 24 ರನ್ ಸೇರಿಸಿ ಮರಳಿ ಗೊಡು ಸೇರಿದರು.

ಅದೇನಿದ್ದರೂ, ಆಸ್ಟ್ರೇಲಿಯನ್ ಆಟಗಾರ ಶೇನ್ ವಾಟ್ಸನ್ ಡೆವಿಲ್ಸ್‌ಗಳಿಗೆ ಹೆದರಲೇ ಇಲ್ಲ. ಬದಲಾಗಿ ಡೆವಿಲ್ಸ್‌ಗಳ ಎದೆಯಲ್ಲಿ ನಡುಕ ಉಂಟುಮಾಡತೊಡಗಿದರು. ಇದಕ್ಕೆ ಸಾಕ್ಷಿಯೆಂಬಂತೆ ವಾಟ್ಸನ್ ಅವರು ನೀಡಿ ಎರಡು ಕ್ಯಾಚುಗಳನ್ನು ಬಿಟ್ಟ ಡೆವಿಲ್ಸ್ ನಮ್ಮಕ್ಕಿಂತ ನೀನೇ ಮೇಲು ಎಂದರು. ಇದನ್ನು ಸರಿಯಾಗಿ ಉಪಯೋಗಿಸಿಕೊಂಡ ಅವರು ಕೇವಲ 40 ಬಾಲ್‌ಗಳಲ್ಲಿ 74 ರನ್ ಮಾಡಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದು ನಿಲ್ಲಿಸಿದರು.

ಈ ಭದ್ರ ಸ್ಥಿತಿಯನ್ನು ಉಳಿದ ಬ್ಯಾಟ್ಸ್‌ಮನ್‌ಗಳು ಉಪಯೋಗಿಸತೊಡಗಿದರು. ಜಡೇಜಾ. ವಾರ್ನ್, ಮಸ್ಕರೇನಸ್, ಪಟೇಲ್ ಮತ್ತು ರಾವತ್ ಅವರು ತಮ್ಮ ತಮ್ಮಕಾಣಿಕೆಗಳನ್ನು ತಮ್ಮ ಒಟ್ಟು ಮೊತ್ತಕ್ಕೆ ನೀಡುತ್ತಾ ಸಾಗಿದರು. ಅಂತಿಮವಾಗಿ ಇನ್ನೂ 5 ಬಾಲ್‌ಗಳು ಬಾಕಿ ಉಳಿದಿರುಂತೆ ಡವಿಲ್ಸ್ ಬೌಲಿಂಗ್‌ಗೆ ಬೆದರದೇ ನಿಂತ ರಾವತ್ ಮತ್ತು ಪಟೇಲ್ ತಂಡವನ್ನು ಗೆಲ್ಲಿಸಿಬಿಟ್ಟರು.

ಡೆಲ್ಲಿ ಬೌಲಿಂಗ್ ಪರ ಮಿಶ್ರಾ 2. ಮಹರೂಫ್ ಮತ್ತು ಸೇಹ್ವಾಗ್ ತಲಾ ಒಂದು ವಿಕೆಟ್ ಪಡೆದರು.

ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿದ ಡೇರ್ ಡೆವಿಲ್ಸ್ ತಂಡವು ತನ್ನ ನೈಜ ಆಟವನ್ನು ಆಡಲು ವಿಫಲವಾಯಿತು. ಆರಂಭಿಕರಾದ ಸೇಹ್ವಾಗ್ ಮತ್ತು ಗಂಭೀರ್ ಅವರು ಭಾರೀ ಮೊತ್ತಕ್ಕೆ ಮುನ್ನುಡಿ ಬರೆಯಲಿಲ್ಲ. ಅದರಂತೆ ಸೇಹ್ವಾಗ್ 17 ರನ್ ಮಾಡಿ ಔಟಾದರೆ, ಗಂಭೀರ್ 31 ರನ್ ಮಾಡಿ ಔಟಾಗದರು. ಬಳಿಕ ಬಂದ ಶಿಖರ್ ಧವನ್ ಕೂಡಾ 3 ರನ್ ಮಾಡಿ ಹೋಗುವ ಮೂಲಕ ಕೆಟ್ಟ ಆರಂಭವನ್ನು ಪಡೆಯಿತು.

ಡಿ ವಿಲಿಯರ್ಸ್ ಅವರು 20 ರನ್ ಮಾಡಿದರೆ, ಕಾರ್ತಿಕ್ 13 ಮತ್ತು ಆಲ್ ರೌಂಡರ್ ದಿಲ್ಶಾನ್ ಅವರು 18 ರನ್ ಮಾಡಿ ಫೆವಿಲಿಯನ್ ಕಡೆಗೆ ದಾರಿ ಮಾಡಿದರು. ಆದರೆ ಅಂತಿಮ ಹಂತದಲ್ಲಿ ಮಹಾರೂಫ್ ಅವರು 16 ಬಾಲ್‌ಗಳಲ್ಲಿ ಭರ್ಜರಿ 39 ರನ್ ಮಾಡುವ ಮೂಲಕ ತಂಡವನ್ನು 150 ಗಡಿ ದಾಟಿಸಿಬ, ಅಲ್ಪ ಮಟ್ಟದ ಸವಾಲನ್ನು ನೀಡಿದರು
ಟರು.

ರಾಜಸ್ಥಾನ ರಾಯಲ್ಸ್ ಬೌಲಿಂಗ್ ಪರ, ಮಸ್ಕರೇನಸ್, ವಾಟ್ಸನ್ ಮತ್ತು ತ್ರಿವೇದಿ ತಲಾ ಒಂದು ವಿಕೆಟ್ ಪಡೆದರು.

ಭರ್ಜರಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮೂಲಕ ಗಮನ ಸೆಳೆದ ವಾಟ್ಸನ್ ಅವರು ಪಂದ್ಯಪುರುಷ ಪ್ರಶಸ್ತಿಯನ್ನು ಪಡೆದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮಹಿಳಾ ತಂಡಕ್ಕೆ ಬಿಸಿಸಿಐ ನಗದು ಬಹುಮಾನ
ವನಿತಾ ಕ್ರಿಕೆಟ್; ಭಾರತ ತಂಡಕ್ಕೆ ಏಷ್ಯಾ ಕಪ್
ಚಾರ್ಜರ್ಸ್ ಮೇಲೆ ರೈಡ್ ಮಾಡಿದ ನೈಟ್ ರೈಡರ್ಸ್
ಐಪಿಎಲ್ ಫೈನಲ್: ವಾಂಕಡೆಯಿಂದ ಡಿವೈ ಪಾಟಿಲ್‌ಗೆ
ಬಾಲಾಜಿ ಹ್ಯಾಟ್ರಿಕ್, ಪಂಜಾಬ್ ಧೂಳಿಪಟ
ಐದನೇ ಸ್ಥಾನಕ್ಕೆ ಅಂಜು ತೃಪ್ತಿ
ಗ್ರಹ ಗತಿ
ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಈ ಬಾರಿಯೂ ನಾನೇ ಕಿಂಗ್: ಕುಮಾರಸ್ವಾಮಿ
ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಸಿಗುವುದರ ಜೊತೆಗೆ ಜೆಡಿಎಸ್ ಗದ್ದುಗೆ ಏರಲಿದೆ ...
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಮತದಾರರ ಪಟ್ಟಿಯಲ್ಲಿ ಶಿವಣ್ಣನ ಹೆಸರೇ ಇಲ್ಲ!!
ಮನರಂಜನೆ
ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ.
ಮುಂದೆ ಓದಿ|ಮತ್ತಷ್ಟು...
Marketplace