ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಚಾರ್ಜರ್ಸ್ ಮೇಲೆ ರೈಡ್ ಮಾಡಿದ ನೈಟ್ ರೈಡರ್ಸ್
ಹೈದರಾಬಾದ್(ಏಜೆನ್ಸಿ), ಸೋಮವಾರ, 12 ಮೇ 2008   ( 09:15 IST )
ಕೋಲ್ಕತಾ ನೈಟ್ ರೈಡರ್ಸ್ ತಂಡ ನೀಡಿದ 205 ರನ್ ಸವಾಲನ್ನು ಯಾವುದೇ ಕ್ಷಣದಲ್ಲಿ ಮೀರಿ ನಿಲ್ಲಲಾಗದ ಡೆಕ್ಕನ್ ಚಾರ್ಜರ್ಸ್ ತಂಡವು ಅಂತಿಮವಾಗಿ ವೇಣುಗೋಪಾಲ್ ಅವರು ಸಿಡಿಸಿದ 71 ರನ್ ನೆರವಿನಿಂದ 181 ರನ್ ಮಾಡಲಷ್ಟೇ ಸಫಲವಾಗಿ, 24 ರನ್ ಗಳ ಪರಾಭವ ಹೊಂದಿತು. ಇದು ಅವರಿಗೆ ತಮ್ಮ ತವರಿನಲ್ಲಿ ಎದುರಾದ ನಾಲ್ಕನೇ ಸೋಲು.

ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಇಂದೂ ಕೂಡಾ ಡೆಕ್ಕನ್ ಆಟಗಾರರು ವಿಫಲವಾದರು. ತಮ್ಮ ದುರ್ಬಲ ಬೌಲಿಂಗ್ ಜೊತೆಗೆ ಫೀಲ್ಡಿಂಗ್‌ನಲ್ಲಿ ಎದುರಾಳಿಗಳಿಗೆ ಧಾರಾಳ ರನ್ ಬಿಟ್ಟು ಕೊಟ್ಟರು. ಕೋಲ್ಕತಾ ತಂಡದ ನಾಯಕ ಗಂಗೂಲಿ ಕೇವಲ 52 ಬಾಲ್‌ಗಲ್ಲಿ 91 ರನ್ ಹೊಡೆಯ ಬೇಕಾದರೆ, ಡೆಕ್ಕನ್ ಅವರ ಪಾಲೂ ಸಾಕಷ್ಟಿತ್ತು.

ಭಾರೀ ರನ್ ಬಿಟ್ಟು ಕೊಟ್ಟ ಬಳಿಕ ಅದನ್ನು ಸಾಧಿಸಲು ವಿಫಲವಾದ ಡೆಕ್ಕನ್ ಬ್ಯಾಟ್ಸ್‌ಮನ್‌ಗಳ ಹೋರಾಟಕ್ಕೆ ಹಂಗಾಮಿ ನಾಯಕ ಗಿಲ್‌ಕ್ರಿಸ್ಟ್ ಸಾಕ್ಷಿಯಾಗಬೇಕಾಯಿತು. ಈ ವೆರೆಗೆ ಮಿಂಚುತ್ತಿದ್ದ ರೋಹಿತ್ ಶರ್ಮಾ ಕೂಡಾ ಇಂದು ವಿಫಲವಾಗುವುದರೊಂದಿಗೆ, ಸೆಮಿ ಫೈನಲ್‌ ಸೇರುವ ಡೆಕ್ಕನ್ ಚಾರ್ಜರ್ಸ್ ಆಸೇ ಬಹುತೇಕ ಕೊನೆಯಾಗಿದೆ.

ಟಾಸ್ ಗೆದ್ದು ಮೊದಲು ಬ್ಯಾಟು ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಮೊದಲ ವಿಕೆಟನ್ನು ಸಲ್ಮಾನ್ ಬಟ್(4) ಅವರ ಮೂಲಕ ಕಳೆದುಕೊಂಡಿತು. ಆದರೆ ನಂತರ ಬಂದ ನಾಯಕ ಗಂಗೂಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಪ್ರಾರಂಭ ಮಾಡಿದರು. ಈ ವೇಳೆ ಮತ್ತೊಂದು ಬದಿಯಲ್ಲಿ ಯುವ ಆಟಗಾರ ಆಕಾಶ್ ಚೋಪ್ರಾ 24 ರನ್ ಮಾಡಿ ವಿಕೆಟ್ ಒಪ್ಪಿಸಿದರು.

ಬಳಿಕ ಗಂಗೂಲಿ ಜೊತೆ ಸೇರಿದ ಡೇವಿಡ್ ಹಸ್ಸಿ(52) ರನ್ ಗತಿಗೆ ಭಾರೀ ಬಿರುಸು ತಂದರು. ಇವರಿಬ್ಬರು ತಮ್ಮ ಮೂರನೇ ವಿಕೆಟ್ ಜತೆಯಾಟದಲ್ಲಿ 40 ಬಾಲ್‌ಗಳಿಗೆ 102 ರನ್ ಸೇರಿಸಿದರು. ಗಂಗೂಲಿ ಬಳಿಕ ಶುಕ್ಲಾ 14 ರನ್ ಮಾಡಿದರೆ, ಟೈಬು 9 ರನ್ ಮಾಡಲು ಸಫಲರಾದರು. ಅಂತಿಮವಾಗಿ 204 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡ ಕೋಲ್ಕತಾ ತಂಡವು ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ಸವಾಲು ಬಿಟ್ಟುಕೊಟ್ಟಿತು.

ದೊಡ್ಡ ರನ್ ಸವಾಲನ್ನು ಎದುರಿಸಲು ಪ್ರಾರಂಭಿಸಿದ ಡೆಕ್ಕನ್ ಚಾರ್ಜರ್ಸ್ ತಂಡವು ಆರಂಭದಲ್ಲೇ ಕುಸಿದು ಬಿತ್ತು. ಗಿಬ್ಸ್ ಅವರು 5 ರನ್ ಮಾಡಿ ಔಟಾದರು. ಬಳಿಕ ಬಂದ ರವಿ ತೇಜಾ ಅವರು ಕೂಡಾ 10 ಮಾಡಿ ಫವಿಲಿಯನ್ ದಾರಿ ಹಿಡಿದರು. ಆ ವೇಳೆಯಲ್ಲಿ ನಾಯಕ ಗಿಲ್‌ಕ್ರಿಸ್ಟ್ ಅವರು 24 ರನ್ ಮಾಡಿ ಕ್ರೀಸಿನಿಂದ ಹೋರಟರು. ನಂತರ ಬಂದ ರೋಹಿತ್ ಶರ್ಮಾ ತಮ್ಮದೂ 33 ರನ್ ಸೇರಿಸಿದರು. ಆದರೆ, ಗೆಲುವಿನನ್ನು ಗುರಿ ಮುಟ್ಟಿಸುವ ಜವಾಬ್ದಾರಿ ವಹಿಸಲು, ಡೆಕ್ಕನ್ ಬ್ಯಾಟ್ಸ್‌ಮನ್‌ಗಳು ಮನಸ್ಸೂ ಮಾಡಲಿಲ್ಲ, ಕೋಲ್ಕತಾ ಬೌಲರ್‌ಗಳು ಬಿಡಲೂ ಇಲ್ಲ.

ಇದೇ ರೀತಿ ಮುಂದಿನ ವಿಕೆಟ್ ರೂಪದಲ್ಲಿ ಸ್ಟೈರೀಸ್ ಅವರು 5 ರನ್ ಮಾಡಿ ಔಟಾದಾಗ ಡೆಕ್ಕನ್ ಚಾರ್ಜರ್ಸ್ ತಂಡದ ಸ್ಥಿತಿ ಸೋಚನೀಯವಾಗಿತ್ತು. ಆದರೆ ಅಂತಿಮ ಹಂತದಲ್ಲಿ ಸಿಡಿದ ವೇಣುಗೋಪಾಲ್ ಅವರು 42 ಬಾಲ್‌ಗಳಲ್ಲಿ 71 ರನ್ ಮಾಡಿ ತಂಡವನ್ನು 180 ಗಡಿ ದಾಟಿಸಿ ಮರ್ಯಾದೆ ಉಳಿಸಿಕೊಂಡರು. ಆ ಬಳಿಕ ವಾಸ್. ಬಂಗಾರ, ಮತ್ತು ಆರ್‌ಪಿ ಸಿಂಗ್ ತಮ್ಮ ಕಾಣಿಕೆಯನ್ನು ನೀಡಿ ಫೆವಿಲಿಯನ್ ದಾರಿ ಹಿಡಿದರು.

ಕೋಲ್ಕತಾ ಬೌಲಿಂಗ್ ಪರ ದಿಂಡಾ 3,ಗಂಗೂಲಿ 2, ಗುಲ್ ಮತ್ತು ಶುಕ್ಲಾ ತಲಾ ಒಂದು ವಿಕೆಟ್ ಪಡೆದರು,

ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಭಾರೀ ಪ್ರದರ್ಶನ ನೀಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗಂಗೂಲಿ ಪಂದ್ಯಪುರುಷ ಪ್ರಶಸ್ತಿಯನ್ನು ಪಡೆದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಐಪಿಎಲ್ ಫೈನಲ್: ವಾಂಕಡೆಯಿಂದ ಡಿವೈ ಪಾಟಿಲ್‌ಗೆ
ಬಾಲಾಜಿ ಹ್ಯಾಟ್ರಿಕ್, ಪಂಜಾಬ್ ಧೂಳಿಪಟ
ಐದನೇ ಸ್ಥಾನಕ್ಕೆ ಅಂಜು ತೃಪ್ತಿ
ದಾಖಲೆ ಸಮಾನ ಪ್ರದರ್ಶನ ನೀಡಿದ ನಾರಂಗ್
ಕೀವೀಸ್ ಕೋಚ್: ರೈಟ್ ಪ್ರಥಮ ಆಯ್ಕೆ
ಪಾಕ್‌ನಲ್ಲೇ ಚಾಂಪಿಯನ್ಸ್ ಟ್ರೋಫಿ: ಅಶ್ರಫ್
ಗ್ರಹ ಗತಿ
ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಈ ಬಾರಿಯೂ ನಾನೇ ಕಿಂಗ್: ಕುಮಾರಸ್ವಾಮಿ
ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಸಿಗುವುದರ ಜೊತೆಗೆ ಜೆಡಿಎಸ್ ಗದ್ದುಗೆ ಏರಲಿದೆ ...
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಮತದಾರರ ಪಟ್ಟಿಯಲ್ಲಿ ಶಿವಣ್ಣನ ಹೆಸರೇ ಇಲ್ಲ!!
ಮನರಂಜನೆ
ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ.
ಮುಂದೆ ಓದಿ|ಮತ್ತಷ್ಟು...
Marketplace