ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಐಪಿಎಲ್ ಫೈನಲ್: ವಾಂಕಡೆಯಿಂದ ಡಿವೈ ಪಾಟಿಲ್‌ಗೆ
ಮುಂಬೈ (ಏಜೆನ್ಸಿ), 11 ಮೇ 2008   ( 13:40 IST )
ಮೂಲತಃ ದಕ್ಷಿಣ ಮುಂಬೈಯ ವಾಂಕಡೆ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಐಪಿಎಲ್‌ನ ಜೂನ್ 1ರ ಫೈನಲ್ ಪಂದ್ಯವನ್ನು ನಾನಾ ಕಾರಣಗಳಿಂದ ನವಿ ಮುಂಬೈಯ ಡಿವೈ ಪಾಟಿಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ ಎಂದು ಕ್ರಿಕೆಟ್ ಮಂಡಳಿ ಮೂಲಗಳು ತಿಳಿಸಿವೆ.

ಫೈನಲ್ ಪಂದ್ಯವನ್ನು ಡಿವೈ ಪಾಟಿಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದ್ದು, ಇದಕ್ಕೆ ಪ್ರಮುಖ ಕಾರಣ ಟಿವಿ ಸಿಬ್ಬಂದಿಗಳು ವಾಂಕಡೆ ಕ್ರೀಡಾಂಗಣದಲ್ಲಿನ ತಾತ್ಕಾಲಿಕ ವ್ಯವಸ್ಥೆಯಿಂದ ಅಸಮಾಧಾನ ಗೊಂಡಿರುವುದು. ಮತ್ತು ಅಲ್ಲಿ ಅವರ ಸಲಕರಣೆಗಳನ್ನು ಇಡಲು ಸಾಕಷ್ಟು ಸ್ಥಳಾವಕಾಶ ಇಲ್ಲದಿರುವುದು ಎಂದು ಮೂಲಗಳು ವರದಿಗಾರರಿಗೆ ತಿಳಿಸಿವೆ.

ಮತ್ತೊಂದು ಕಾರಣ, ವಾಂಕಡೆಯ 40,000 ಪ್ರೇಕ್ಷಕ ಸಾಮರ್ಥ್ಯದ ಎದುರು ಡಿವೈ ಪಾಟಿಲ್ ಕ್ರೀಡಾಂಗಣ 55,000 ಪ್ರೇಕ್ಷಕ ಸಾಮರ್ಥ್ಯವನ್ನು ಹೊಂದಿರುವುದು. ಇದರಿಂದ ತವರು ತಂಡದ ಮಾಲಕರಾದ ರಿಲಯನ್ಸ್ ಇಂಡಸ್ಟ್ರೀಸ್‌ಗೆ ಆದಾಯ ಹೆಚ್ಚಾಗುವುದು.

ಆದರೆ ಐಪಿಎಲ್ ಅಧಿಕಾರಿಗಳು ಈ ನಿರ್ಧಾರವನ್ನು ಮುಂಬೈ ತಂಡದ ಪ್ರಯೋಜಕ ಮಾಲಕರಿಗೆ ಇನ್ನೂ ತಿಳಿಸಿಲ್ಲ ಎಂದು ತಂಡದ ಪ್ರಾಯೋಜಕ ಮಾಲೀಕರ ವಕ್ತಾರ ಹೇಳಿದ್ದಾರೆ. ಒಂದು ಸೆಮಿ-ಫೈನಲನ್ನು ಅಥವಾ ಫೈನಲನ್ನು ಡಿವೈ ಪಾಟಿಲ್ ಕ್ರೀಡಾಂಗಣಕ್ಕೆ ಸ್ಥಾಳಾಂತರಿಸುವ ಬಗ್ಗೆ ಮಾತುಗಳು ನಡೆಯುತ್ತಿದ್ದು, ಈ ವಿಷಯವಾಗಿ ತಾವು ಅಧಿಕೃತವಾಗಿ ಏನನ್ನೂ ಆಲಿಸಿಲ್ಲ ಎಂದು ವಕ್ತಾರ ತಿಳಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬಾಲಾಜಿ ಹ್ಯಾಟ್ರಿಕ್, ಪಂಜಾಬ್ ಧೂಳಿಪಟ
ಐದನೇ ಸ್ಥಾನಕ್ಕೆ ಅಂಜು ತೃಪ್ತಿ
ದಾಖಲೆ ಸಮಾನ ಪ್ರದರ್ಶನ ನೀಡಿದ ನಾರಂಗ್
ಕೀವೀಸ್ ಕೋಚ್: ರೈಟ್ ಪ್ರಥಮ ಆಯ್ಕೆ
ಪಾಕ್‌ನಲ್ಲೇ ಚಾಂಪಿಯನ್ಸ್ ಟ್ರೋಫಿ: ಅಶ್ರಫ್
ಹಾಕಿ: ಭಾರತಕ್ಕೆ ಹೀನಾಯ ಸೋಲು
ಗ್ರಹ ಗತಿ
ದೈನಿಕ - ಮನೆಯ ವಾತಾವರಣವು ಹಿತಕರವಾಗಿರುತ್ತದೆ. ನಿಮ್ಮ ಕುಟುಂಬ ಮತ್ತು ಸಂಗಾತಿಯೊಂದಿಗೆ ಸ್ವಲ್ಪ ಕಾಲ ಕಳೆಯಲು ಪ್ರಯತ್ನಿಸಿ.ಇಂದು ನೀವು ಉತ್ತಮ ಮನಸ್ಥಿತಿಯಲ್ಲಿರುವಂತೆ ಕಾಣುತ್ತದೆ. ನಿಮ್ಮ ಆಕಾಂಕ್ಷೆಗಳನ್ನು ಪೂರ್ಣಗೊಳಿಸುವತ್ತ ದೃಢ ಹೆಜ್ಜೆಗಳನ್ನು ಇರಿಸಲಿದ್ದೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಈ ಬಾರಿಯೂ ನಾನೇ ಕಿಂಗ್: ಕುಮಾರಸ್ವಾಮಿ
ಜೆಡಿಎಸ್‌ಗೆ ಸಂಪೂರ್ಣ ಬೆಂಬಲ ಸಿಗುವುದರ ಜೊತೆಗೆ ಜೆಡಿಎಸ್ ಗದ್ದುಗೆ ಏರಲಿದೆ ...
ಮತದಾನದದ ಜೊತೆ ಅಕ್ರಮ, ಆಮಿಷಗಳ ಆರಂಭ
ಮತದಾರರ ಪಟ್ಟಿಯಲ್ಲಿ ಶಿವಣ್ಣನ ಹೆಸರೇ ಇಲ್ಲ!!
ಮನರಂಜನೆ
ಚಿತ್ರ ಸುದ್ದಿ - ಬಂಗಾರಿ ಯಾರೇ ನಿ ಬುಲ್, ಐತ್ತಲಕ್ಕಡಿ.... ಹಾಡಿಗೆ ಸಂಗೀತ ನೀಡಿದವರು ಯಾರೆಂದು ನಿಮ್ಗೆ ಗೊತ್ತಿದ್ಯಾ? ಹೋಗ್ಲಿ ಬಿಡಿ, ನಿಮ್ಮದೇ ಮೊಬೈಲಿನಲ್ಲಿ ಗುಂಯ್‌ಗುಡುವ 'ಮಿಂಚಾಗಿ ನೀನು ಬರಲು.... ಹಾಡಿಗೆ ಸಂಗೀತ ನೀಡಿದವರು ಯಾರೆಂದಾದರೂ ಗೊತ್ತಿದೆಯಾ? ಇನ್ಯಾರು ನಮ್ಮ ಹರಿಕೃಷ್ಣ.
ಮುಂದೆ ಓದಿ|ಮತ್ತಷ್ಟು...
Marketplace