ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಕೀವೀಸ್ ಕೋಚ್: ರೈಟ್ ಪ್ರಥಮ ಆಯ್ಕೆ
ಕ್ರಿಸ್ಟ್‌ಚರ್ಚ್ (ಏಜೆನ್ಸಿ) , ಶನಿವಾರ, 10 ಮೇ 2008   ( 15:14 IST )
file
ಭಾರತೀಯ ಕ್ರಿಕೆಟ್ ತಂಡದ ತಮ್ಮ ತರಬೇತುದಾರನ ಅಧಿಕಾರವಧಿಯಲ್ಲಿ ಅಭೂತಪೂರ್ವ ಯಶಸ್ಸು ಗಳಿಸಿದ್ದ ಜಾನ್ ರೈಟ್, ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ಕೋಚ್ ಹುದ್ದೆಗಾಗಿ ಮೊದಲ ಆಯ್ಕೆಯಾಗಿದ್ದಾರೆ.

ಪ್ರಸಕ್ತ ಕೋಚ್ ಜಾನ್ ಬ್ರಾಸ್‌ವೆಲ್ ಮುಂದಿನ ವರ್ಷ ಏಪ್ರಿಲಿನಲ್ಲಿ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ.

ಒಂದು ವೇಳೆ ಜಾನ್ ರೈಟ್ ಅಂತಾರಾಷ್ಟ್ರೀಯ ಕ್ರಿಕೆಟ್ ಮುಖ್ಯವಾಹಿನಿಗೆ ಮರಳುವುದಾದರೆ, ನ್ಯೂಜಿಲ್ಯಾಂಡ್ ತಂಡದ ಜತೆ ಕೆಲಸ ಮಾಡಲು ಅವರಿಗೆ ಸಂಪೂರ್ಣ ಸ್ವಾಗತವಿದೆ ಎಂದು ಎನ್‌ಜೆಡ್‌ಸಿ ಮುಖ್ಯ ಕಾರ್ಯಕಾರಿಣಿ ಜಸ್ಟಿನ್ ವಾಗನ್ ತಿಳಿಸಿದ್ದಾರೆ.

17 ವರ್ಷ ಕೆಳಗಿನ ಮಟ್ಟದಿಂದ ಅಂತಾರಾಷ್ಟ್ರೀಯ ಮಟ್ಟದ ವರೆಗಿನ ಆಟಗಾರರ ಅಭಿವೃದ್ಧಿಗೆ ಜಾನ್ ರೈಟ್ ಜವಾಬ್ದಾರರಾಗಿದ್ದು, ಅವರು ಅಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಆ ದಾರಿಗೆ ಮರಳುವುದು ಅವರ ಇಚ್ಛೆಗೆ ಬಿಟ್ಟ ವಿಷಯ ಎಂಬ ವಾಗನ್‌ರ ಉಲ್ಲೇಖ ಪತ್ರಿಕೆಯಲ್ಲಿ ವರದಿಯಾಗಿದೆ.

ರೈಟ್ ಈ ನಿಟ್ಟಿನಲ್ಲಿ ಯಾವುದನ್ನೂ ನಿರಾಕರಿಸಿಲ್ಲ ಎಂಬ ಬಗ್ಗೆ ವರದಿಯಾಗಿದೆ. ಅಂತಾರಾಷ್ಟ್ರೀಯ ಕೋಚಿಂಗ್‌ನಲ್ಲಿನ ಕಾಠಿನ್ಯದ ಹಿನ್ನೆಲೆಯಲ್ಲಿ ಬ್ರಾಸ್‌ವೆಲ್ ತಮ್ಮ ಗುತ್ತಿಗೆಯನ್ನು ವಿಸ್ತರಿಸಲು ಒಲವು ತೋರಿಲ್ಲ ಎಂದು ವಾಗನ್ ತಿಳಿಸಿದ್ದಾರೆ.

ಕಂಟೆರ್ಬರಿಯ ದ.ಆಫ್ರಿಕಾ ಕೋಚ್ ಡೇವ್ ನೋಸ್ವರ್ದಿ ಮತ್ತು ಮಾರ್ಕ್ ಒ'ಡೊನ್ನೆಲ್ ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡ ರಾಷ್ಟ್ರೀಯ ಕೋಚ್ ಹುದ್ದೆಗಾಗಿನ ಇತರ ಆಕಾಂಕ್ಷಿಗಳಾಗಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಾಕ್‌ನಲ್ಲೇ ಚಾಂಪಿಯನ್ಸ್ ಟ್ರೋಫಿ: ಅಶ್ರಫ್
ಹಾಕಿ: ಭಾರತಕ್ಕೆ ಹೀನಾಯ ಸೋಲು
ಭಜ್ಜಿ, ಶ್ರೀಶಾಂತ್ ಪ್ರಕರಣ ವಿಚಾರಣೆ,
ವಿಂಡೀಸ್ ಪ್ರವಾಸದಿಂದ ಕ್ಲಾರ್ಕ್ ಹಿಂದಕ್ಕೆ
ಕಾನ್ಪುರ ಟೆಸ್ಟ್: ಬಿಸಿಸಿಐಗೆ, ಐಸಿಸಿ ಎಚ್ಚರಿಕೆ
ಡೆಕ್ಕನ್‌ಗೆ ದಕ್ಕದ ಜಯ
ಗ್ರಹ ಗತಿ
ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಅಳಿವು ಉಳಿವಿನ ಹೋರಾಟಕ್ಕೆ ಸಜ್ಜು
ಕರ್ನಾಟಕ ರಾಜಕೀಯದಲ್ಲಿ ವಂಶಪಾರಂಪರ್ಯ ಆಡಳಿತಕ್ಕೆ ನಾಂದಿ ಹಾಡಿದ ದೇವೇಗೌಡರ ಕುಟುಂಬ...
ನಿರ್ಭೀತಿಯಿಂದ ಮತ ಚಲಾಯಿಸಲು ಸಲಹೆ
ದಕ್ಷಿಣ ಭೂಪಟದಲ್ಲಿ ಬಿಜೆಪಿ ಅಧಿಕಾರ: ಸುಷ್ಮಾ ಸ್ವರಾಜ್
ಮನರಂಜನೆ
ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ
ಮುಂದೆ ಓದಿ|ಮತ್ತಷ್ಟು...
Marketplace