|
| ಕಾನ್ಪುರ ಟೆಸ್ಟ್: ಬಿಸಿಸಿಐಗೆ, ಐಸಿಸಿ ಎಚ್ಚರಿಕೆ |
| ದುಬೈ(ಏಜೆನ್ಸಿ), ಶನಿವಾರ, 10 ಮೇ 2008 ( 10:48 IST ) | |
ಏಪ್ರಿಲ್ 11 ರಿಂದ ಕಾನ್ಪುರದಲ್ಲಿ ನಡೆದಿದ್ದ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದ ಪಿಚ್ ಕಳಪೆ ಮಟ್ಟದ್ದಾಗಿತ್ತು ಎಂಬುದನ್ನು ಉಲ್ಲೇಖಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅಧಿಕೃತ ಎಚ್ಚರಿಕೆಯನ್ನು ನೀಡಿದೆ.
ಮೂರು ದಿನಗಳ ಕಾಲ ನಡೆದಿದ್ದ, ಸರಣಿಯ ಕೊನೆಯ ಮತ್ತು ಮೂರನೇ ಪಂದ್ಯದಲ್ಲಿ ಭಾರತವು ಎಂಟು ವಿಕೆಟ್‌ಗಳ ಜಯ ಗಳಿಸಿತ್ತು. ಈ ಪಂದ್ಯದ ಪಿಚ್‌ನ್ನು ಪಂದ್ಯದ ಪೂರ್ವದಲ್ಲಿ ಸರಿಯಾಗಿ ತಯಾರು ಮಾಡಿರಲಿಲ್ಲದ ಕಾರಣ, ದಕ್ಷಿಣ ಆಫ್ರಿಕಾ ತಂಡವು ಇದರಲ್ಲಿ ಹೀನಾಯವಾಗಿ ಸೋತಿತ್ತು ಎಂದು ಹೇಳಿದ, ಐಸಿಸಿ, ಇನ್ನು ಮುಂದೆ ಇಂತಹ ಪಂದ್ಯಗಳನ್ನು ನಡೆಸುವ ಸಂದರ್ಭದಲ್ಲಿ ಪಿಚ್ ಗುಣ ಮಟ್ಟದ ಬಗ್ಗೆ ಗಮನ ಹರಿಸುವಂತೆ ಹೇಳಿದೆ.
ನಾವು ನಿರ್ಧಾರಕ್ಕೆ ಬಂದ ಪ್ರಕಾರ ಈ ಪಂದ್ಯಕ್ಕೆ ತಯಾರು ಮಾಡಿದ್ದ ಪಿಚ್ ಕಳಪೆ ಮಟ್ಟದಾಗಿತ್ತು. ಇದಕ್ಕಾಗಿ ನಾವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಸ್ಪಷ್ಟನೆಯನ್ನು ಪರಿಣಗಣಿಸಿದ್ದೇವೆ. ಆದರೆ, ಅದರಲ್ಲಿ ಅವರು ಹೇಳಿದಂತೆ ಪಿಚ್‌ನ ಒಣಗುವ ಗುಣವು ಈ ಮೊದಲಿನ ಕ್ರಿಡಾಂಗಣದ ಇತಿಹಾಸದಲ್ಲಿ ಕಂಡುಬರದ ಕಾರಣ, ಹೇಳಿಕೆ ಸರಿಯಾಗಿಲ್ಲ ಎಂದು ಪರಿಗಣಿಸುತ್ತೇವೆ ಎಂದು ಐಸಿಸಿಯ ಪ್ರಧಾನ ವ್ಯವಸ್ಥಾಪಕ ಡೇವ್ ರಿಚರ್ಡ್ಸನ್ ಅವರು ಹೇಳಿದ್ದಾರೆ.
ಈ ಎಲ್ಲಾ ಹೇಳಿಕೆ ಮತ್ತು ಸಾಕ್ಷಿಗಳನ್ನು ಪರಿಣಗಣಿಸಿ ಐಸಿಸಿ ನಿಯಮದ 4.2 ಕಲಂ ನಂತೆ ಭಾರತೀಯ ಕ್ರಿಕೆಟ್ ಮಂಡಳಿಗೆ ಅಧಿಕೃತ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಅವರು ನುಡಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|