|
| ಡೆಕ್ಕನ್‌ಗೆ ದಕ್ಕದ ಜಯ |
| ಜೈಪುರ(ಏಜೆನ್ಸಿ), ಶನಿವಾರ, 10 ಮೇ 2008 ( 08:52 IST ) | |
ಆರಂಭಿಕರಾದ ಯೂಸುಫ್ ಪಠಾಣ್ ಮತ್ತು ಗ್ರೇಮ್ ಸ್ಮಿತ್ ರಿಂದ ಮೊದಲ ವಿಕೆಟಿಗೆ ಹೊರಹೊಮ್ಮಿದ ಶತಕದ ಜತೆಯಾಟದ ನೆರವಿನಿಂದ, ಡೆಕ್ಕನ್ ಚಾರ್ಚರ್ಸ್ ತಂಡವು ನೀಡಿದ ಅಲ್ಪ ಮೊತ್ತವನ್ನು ಮೀರಿ ನಿಂತ ರಾಜಸ್ಥಾನ ರಾಯಲ್ಸ್ ತಂಡವು ಇನ್ನೂ ನಾಲ್ಕು ಓವರ್‍ಗಳು ಬಾಕಿ ಇರುವಂತೆ ಎಂಟು ವಿಕೆಟ್‌ಗಳ ಸುಲಭ ಜಯವನ್ನು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಡೆಕ್ಕನ್ ಚಾರ್ಜರ್ಸ್ ತಂಡವು ಪೇರಿಸಿದ್ದ 140 ರನ್‌ಗಳನ್ನು, ವಾರ್ನ್ ಪಡೆ ಸವಾಲೆಂದು ಪರಿಗಣಿಸಲೇ ಇಲ್ಲ. ಆರಂಭದ ಜೋಡಿಗಳಾದ ಗ್ರೇಮ್ ಸ್ಮಿತ್ ಮತ್ತು ಯೂಸುಫ್ ಪಠಾಣ್ ಮೊದಲ ವಿಕೆಟ್‍ಗೆ 108 ರನ್ ಸೇರಿಸಿ, ತಂಡಕ್ಕೆ ಭರ್ಜರಿ ತಳಪಾಯ ಹಾಕಿದರು. ಇದರಲ್ಲಿ ಯೂಸುಫ್ ಪಠಾಣ್ ಬಿರುಗಾಳಿಯಂತೆ ಆಡಿ ಕೇವಲ 37 ಬಾಲ್‌ಗಳಲ್ಲಿ 68 ರನ್ ತೆಗೆದರು. ಇವರು ಡೆಕ್ಕನ್ ಚಾರ್ಜರ್ಸ್ ಬೌಲರ್‌ಗಳನ್ನು ಮೈದಾನದ ಎಲ್ಲಾ ಕಡೆ ಅಟ್ಟಿ 9 ಬೌಂಡರಿ ಮತ್ತು 2 ಭರ್ಜರಿ ಸಿಕ್ಸರ್‌ಗಳನ್ನು ಹೊಡೆದಿದ್ದಾರೆ. ಮತ್ತೊಂದು ಬದಿಯಲ್ಲಿ ಇವರಿಗೆ ಸಾಥ್ ನೀಡಿದ ಗ್ರೇಮ್ ಸ್ಮಿತ್ ನಿಧಾನ ಗತಿಯ ಆಟವಾಡಿ 43 ಬಾಲಿಗೆ 40 ರನ್ ಮಾಡಿದ್ದಾರೆ.
ಯೂಸುಫ್ ಪಠಾಣ್ ಅವರು ಪ್ರಗ್ಯಾನ್ ಓಜಾ ಅವರಿಗೆ ವಿಕೆಟ್ ಒಪ್ಪಿಸಿದರೆ, ಸ್ಮಿತ್ ಆರ್‌ಪಿ ಸಿಂಗ್‌ಗೆ ಬಲಿಯಾದರು. ಆದರೆ, ಉತ್ತಮ ಆರಂಭವನ್ನು ಪಡೆದಿದ್ದ ರಾಜಸ್ಥಾನ ರಾಯಲ್ಸ್ ತಂಡವು ಮಹಮದ್ ಕೈಫ್ (17) ಮತ್ತು ವಾಟ್ಸನ್ (5) ಅವರಿಂದ ಹೊಮ್ಮಿದ ರನ್ನ್‌ನ ಮೂಲಕ ಗೆಲುವಿನ ಗುರಿಯನ್ನು ಇನ್ನೂ ಪಂದ್ಯದ ಅಂತ್ಯಕ್ಕೆ ನಾಲ್ಕು ಓವರ್ ಇರುವಂತೆ ಸುಲಭವಾಗಿ ದಾಟಿಬಿಟ್ಟರು.
ಈ ಮೊದಲು ಬ್ಯಾಟಿಂಗ್ ಮಾಡಿದ್ದ ಡೆಕ್ಕನ್ ಚಾರ್ಜರ್ಸ್ ತಂಡಕ್ಕೆ ಹಂಗಾಮಿ ನಾಯಕ ಗಿಲ್ ಕ್ರಿಸ್ಟ್ ಉತ್ತಮ ಬೆಂಬಲವನ್ನು ನೀಡಿದರು. ಅದಾಗ್ಯೂ, ಉಳಿದ ಆಟಗಾರಲ್ಲಿ ಯಾರೂ ಕೂಡಾ ಗಮನ ಸೆಳೆಯುವಂತಹ ಆಟವನ್ನು ಪ್ರದರ್ಶಿಸಲು ಸಾಧ್ಯವಾಗದೇ ಇದ್ದು ಎದುರಾಳಿಗೆ ಸವಾಲಿನ ಮೊತ್ತವನ್ನು ನೀಡಲು ವಿಫಲವಾಯಿತು.
ಪ್ರಾರಂಭದಲ್ಲಿ ಗಿಲ್‌ಕ್ರಿಸ್ಟ್ ಬ್ಯಾಟು ಬೀಸಿ 61 ರನ್ ಮಾಡಿದರು. ಆದರಲ್ಲಿ 9 ನಾಲ್ಕುಗಳು ಮತ್ತು 1 ಆರು ಸೇರಿತ್ತು. ಆದರೆ ಇವರ ಮತ್ತೊಂದು ಬದಿಯಲ್ಲಿ ಬ್ಯಾಟಿಂಗ್ ಹಿಡಿಯಲು ಬಂದಿದ್ದ ಗಿಬ್ಸ್ 19 ರನ್‌ಗೆ ಫೆವಿಲಿಯನ್‌ಗೆ ಸೇರಿದರು. ಈ ವೇಳೆ ಚೇತರಿಸದ ಸ್ಟೈರೀಸ್ 13, ರೋಹಿತ್ ಶರ್ಮಾ 5, ಶಾಹಿದ್ ಅಫ್ರಿದಿ 1 ಮತ್ತು ಸಂಜಯ್ ಬಂಗಾರ ಅವರು 3 ರನ್ ಮಾಡಿ ರಾಜಸ್ಥಾನ ರಾಯಲ್ಸ್ ತಂಡದ ಶಿಸ್ತಿನ ದಾಳಿಯ ಮುಂದೆ ತಲೆಬಾಗಿದರು.
ಉಳಿದಂತೆ ರವಿ ತೇಜಾ 6 ,ಆರ್‌ಪಿ ಸಿಂಗ್ 2 ಮತ್ತು ಪಿಪಿ ಓಜಾ 1 ರನ್ ಮಾಡಿ ಔಟಾದರು. ಈ ಮಧ್ಯೆ ರನ್ ಗತಿಯನ್ನೂಮ್ಮೆ ಬದಲಿಸಿದ ವೇಣುಗೋಪಾಲ ರಾವ್ 23 ರನ್ ಮಾಡಿ ತಂಡದ ರನ್‌ನ್ನು 140 ದಾಟಿಸಿ ಬಿಟ್ಟರು.
ರಾಜಸ್ಥಾನ ಬೌಲಿಂಗ್ ಪರ, ಶೇನ್ ವಾರ್ನ್ 2 ವಿಕೆಟ್ ಪಡೆದರೆ, ಯೂಸುಫ್ ಪಠಾಣ್, ವಾಟ್ಸನ್, ಮುನಾಫ್ ಪಟೇಲ್ ಮತ್ತು ತ್ರಿವೇದಿ ತಲಾ ಒಂದು ವಿಕೆಟ್ ಪಡೆದರು.
ಅಬ್ಬರದ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ನೀಡಿದ ಯೂಸುಫ್ ಪಠಾಣ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ನಿನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಸಹೋದ್ಯೋಗಿಗಳ ನೆರವು ಕೋರಬೇಕಾಗುತ್ತದೆ. ವಿರೋಧಿಗಳ ನಡೆಗಳ ಬಗ್ಗೆ ಜಾಗ್ರತೆಯಾಗಿರಿ. ಮುಂಬರುವ ಸಮಯದಲ್ಲಿ ಹೊಸ ಸಂಬಂಧಗಳು ಅನುಕೂಲವಾಗುವ ಸಾಧ್ಯತೆ ಇದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ನಮ್ಮ ರಮ್ಯಾ ಈಗ ಫುಲ್ ಬ್ಯುಸಿ. ಈಗವರ ಪ್ರಯಾಣ ಚೆನ್ನೈ ಟೂ ಬೆಂಗಳೂರು. ಯಾಕೆಂದು ನಿಮಗೆ ಗೊತ್ತಿರಬಹುದು. ರಾಹುಲ್ ದ್ರಾವಿಡ್ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡದ ಸ್ವಾರ್ ರಾಯಭಾರಿ. ಹೀಗಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ |
| |
|
|
|
|
|
|
|