ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಟೈಟ್‌ರೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ: ಹಸ್ಸಿ
ಮೆಲ್ಬೋರ್ನ್ (ಏಜೆನ್ಸಿ), ಬುಧವಾರ, 6 ಫೆಬ್ರವರಿ 2008   ( 15:51 IST )
ಮಾನಸಿಕವಾಗಿ ಕುಗ್ಗಿ ಹೋಗಿರುವ ಆಸ್ಟ್ರೇಲಿಯಾದ ವೇಗದ ಬೌಲರ್ ಶಾನ್ ಟೈಟ್ ಬೆಂಬಲಕ್ಕೆ ಇಡೀ ತಂಡವೇ ಒಂದಾಗಿ ನಿಂತಿದೆ ಎಂದು ಆಸ್ಟ್ರೇಲಿಯಾದ ಇನ್ನೊರ್ವ ಆಟಗಾರ ಮೈಕೆಲ್ ಹಸ್ಸಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಾನಸಿಕವಾಗಿ ಕುಗ್ಗಿ ಹೋಗಿರುವ ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅನಿರ್ಧಾಷ್ಟವಧಿವರೆಗೆ ತಾವು ನಿವೃತ್ತಿ ಹೊಂದಲಿರುವುದಾಗಿ ಕಳೆದ ವಾರ ಟೈಟ್ ಹೇಳಿದ್ದರ ಹಿನ್ನಲೆಯಲ್ಲಿ, ಹಸ್ಸಿ ಈ ಹೇಳಿಕೆ ನೀಡಿದ್ದಾರೆ.

"ಆಸ್ಟ್ರೇಲಿಯಾದ ಪ್ರತಿಯೊಂದು ಆಟಗಾರರು ಕಷ್ಟದ ಕಾಲ ಸವೆಸುತ್ತಿದ್ದು, ವಿಶ್ರಾಂತಿಗಾಗಿ ತೆರಳಿರುವ ಶಾನ್ ಮೊದಲಿಗಿಂತಲೂ ಸ್ಟ್ರಾಂಗ್ ಆಗಿ ಹೊರ ಬರುವ ಭರವಸೆ ತಮಗಿದೆ" ಎಂದು ಮಧ್ಯಮ ಕ್ರಮಾಂಕದ ಆಸ್ಟ್ರೇಲಿಯಾ ಆಟಗಾರ ಹಸ್ಸಿ ತಿಳಿಸಿದ್ದಾರೆ.

24 ವರ್ಷದ ಶಾನ್ ಟೈಟ್ ಕಳೆದ ಕೆಲ ದಿನಗಳಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತರಾಗಿದ್ದು, ತಾವು ಸಕ್ರೀಯ ಕ್ರಿಕೆಟ್‌ನಿಂದ ಕೆಲವು ದಿನಗಳ ಕಾಲ ನಿವೃತ್ತಿ ಪಡೆಯಲಿರುವುದಾಗಿ ಹೇಳಿ ಭಾರಿ ಆಘಾತದ ಸುದ್ದಿ ನೀಡಿದ್ದರು.

ಪ್ರಯಾಣ, ಮಾಧ್ಯಮಗಳ ಹೇಳಿಕೆ, ಪ್ರಾಯೋಜಕರ ಕಿರಿಕಿರಿ, ಅಧಿಕೃತ ಕಾರ್ಯಕ್ರಮಗಳು, ತರಬೇತಿ, ಮನೆ, ಹೆಂಡತಿ ಮಕ್ಕಳು ಮತ್ತು ಸ್ನೇಹಿತರ ಮಧ್ಯೆ ನಾವು ಜೀವನ ಸಾಗಿಸಬೇಕಾಗಿ ಬಂದಿರುವುದರಿಂದ ಇಂತಹ ದೈಹಿಕ ಮತ್ತು ಮಾನಸಿಕ ಒತ್ತಡಗಳು ಅನಿವಾರ್ಯ ಎಂದು ಹಸ್ಸಿ ಹೇಳಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಪಾಕ್ ಆಟಗಾರರನ್ನು ಸೆಳೆದುಕೊಳ್ಳುವಲ್ಲಿ ಐಸಿಎಲ್ ಸಫಲ
ಕ್ರಿಕೆಟ್: ರೋಹಿತ್‌ಗೆ ದಂಡ
ಕೊಚ್ಚಿಯಲ್ಲಿ ದಕ್ಷಿಣ ಏಷ್ಯಾ ಅಥ್ಲೆಟಿಕ್ ಚಾಂಪಿಯನ್‌ಶಿಪ್
ಹಿರಿಯರ ಹಾಕಿ ಪಂದ್ಯಾವಳಿ: ಕರ್ನಾಟಕ, ದೆಹಲಿಗೆ ಜಯ
ಸಾನಿಯಾ ನಿರ್ಧಾರಕ್ಕೆ ಎಲ್ಲೆಡೆಯಿಂದ ಅನುಕಂಪ
ತೆಂಡೂಲ್ಕರ್ ಕಿರೀಟಕ್ಕೆ ಮತ್ತೊಂದು ಗರಿ
ಸಮಾಚಾರ
ದೇಶ - ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಕಂದಹಾರ್‌ಗೆ ಅಪಹರಣ ಮಾಡಿದ ಪ್ರಕರಣದಲ್ಲಿ ಭಾಗಿಯಾದ ಮೂವರಿಗೆ ನಗರದ ಕೋರ್ಟೊಂದು ಹತ್ಯೆ ಮತ್ತು ಒಳಸಂಚಿನ ಆರೋಪಕ್ಕೆ ಸಂಬಂದಿಸಿದಂತೆ ಜೀವಾವಧಿ ಶಿಕ್ಷೆ ವಿಧಿಸಿದೆ. ಅಬ್ದುಲ್
ಮುಂದೆ ಓದಿ|ಮತ್ತಷ್ಟು...
ಮನರಂಜನೆ
NRB
 
ಮಿಲನವಾಯ್ತು, ಇನ್ನೇನಿದ್ದರೂ ಬಿಂದಾಸ್
ಪುನೀತ್ ರಾಜ್‌ಕುಮಾರ್ ಚಿತ್ರಗಳ ಕುರಿತು ಒಂದು ವಿಶೇಷತೆಯಿದೆ. ಅದೇನೆಂದರೆ, ಅವರ ಬಾಡಿ ...
ಹಿಟ್ ಚಿತ್ರಕ್ಕಾಗಿ ಹಂಬಲಿಸುತ್ತಿರುವ ಪ್ರೇಮ್
ಸದ್ದಿಲ್ಲದೆ ದುಡ್ಡು ದೋಚುತ್ತಿದೆ ಗಜ ಚಿತ್ರ
ಸಮಾಚಾರ
ಆಟೋಟ - ಕ್ರಿಕೆಟ್ ಜಗತ್ತಿನ ಜೀವಂತ ದಂತಕತೆ, ರನ್ ಮಷಿನ್ ಖ್ಯಾತಿಯ ಸಚಿನ್ ತೆಂಡೂಲ್ಕರ್ ಮಂಗಳವಾರ ಸಿಬಿ ಸರಣಿಯ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ತಮ್ಮ ಸಾಧನೆಯ
ಮುಂದೆ ಓದಿ|ಮತ್ತಷ್ಟು...
Marketplace