|
| ಸಿಡ್ನಿ ಟೆಸ್ಟ್: ಕಾಂಗರೂಗಳನ್ನು ಕಟ್ಟಿ ಹಾಕುತ್ತಿರುವ ಸಿಂಗ್‌ಗಳು |
| ಸಿಡ್ನಿ (ಏಜೆನ್ಸಿ), ಬುಧವಾರ, 2 ಜನವರಿ 2008 ( 08:37 IST ) | |
ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯ 337 ರನ್ ಅಂತರದ ಸೋಲು, ತಮ್ಮ ಆಟದ ಆತ್ಮವಿಶ್ವಾಸದ ಮೇಲೆ ಯಾವದೇ ಪರಿಣಾಮ ಬೀರಿಲ್ಲ ಎಂದು ಭಾರತೀಯ ಬೌಲರ್‌ಗಳು ಸಿಡ್ನಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಸಾಬೀತು ಪಡಿಸುತ್ತಿದ್ದಾರೆ.
ಮೊದಲ ಟೆಸ್ಟ್ ಪಂದ್ಯ ಜಯಿಸಿದಂತೆ ಈ ಟೆಸ್ಟ್ ಪಂದ್ಯವನ್ನು ಗೆದ್ದು, ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿರುವ ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಜಹೀರ್‌ಖಾನ್ ಅನುಪಸ್ಥಿತಿಯಲ್ಲಿ ಬೌಲಿಂಗ್ ದಾಳಿಗಿಳಿದ ವೇಗಿ ಆರ್.ಪಿ.ಸಿಂಗ್, ನಾಯಕ ತಮ್ಮ ಮೇಲೆ ಇಟ್ಟಿದ್ದ ಭರವಸೆಯನ್ನು ಉಳಿಸಿಕೊಂಡರು. ಕಾಂಗರೂ ಪಡೆ ಖಾತೆ ಆರಂಭಿಸುವುದಕ್ಕಿಂತ ಮುಂಚೆಯೆ ಆರಂಭಿಕ ಆಟಗಾರ ಜಾಕ್ವೇಸ್ ಅವರ ವಿಕೆಟ್ ಪಡೆಯುವ ಮೂಲಕ ಭಾರತಕ್ಕೆ ಆರಂಭಿಕ ಮೇಲುಗೈ ಸಾಧಿಸಿವಂತೆ ಮಾಡಿದರು.
ತಂಡದ ಮೊತ್ತ 27 ರನ್‌ಗಳಾಗಿದ್ದಾಗ ಮೊದಲ ಟೆಸ್ಟ್ ಪಂದ್ಯದಲ್ಲಿ ಉತ್ತಮ ಆಟ ಪ್ರದರ್ಶಿಸಿದ್ದ ಹೇಡನ್ ಅವರನ್ನು ಕೇವಲ 13 ರನ್‌ಗಳಿಗೆ ಔಟ್ ಮಾಡುವಲ್ಲಿ ಸಫಲರಾದ ಆರ್.ಪಿ, 41ರನ್ ಗಳಿಸಿದ್ದ ಮೈಕ್ ಹಸ್ಸಿ ಅವರ ವಿಕೆಟ್‌ನ್ನು ಪಡೆಯುವ ಮೂಲಕ ಭಾರತಕ್ಕೆ ಸ್ಪಷ್ಟ ಆರಂಭಿಕ ಮೇಲುಗೈ ಒದಗಿಸಿಕೊಟ್ಟರು.
ಈ ಮಧ್ಯೆ, ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ವಿಫಲವಾಗಿದ್ದ ಆಸ್ಸಿಸ್ ನಾಯಕ ರಿಕಿ, ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 55 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸಂದರ್ಭದಲ್ಲಿ, ಹರ್ಭಜನ್ ಬೌಲಿಂಗ್‌ನಲ್ಲಿ ಎಲ್.ಬಿ.ಡಬ್ಲೂ ಬಲೆಗೆ ಬಿದ್ದರು. ರಿಕಿಯಂತೆ ಭರವಸೆಯ ಭಾವಿ ನಾಯಕ ಮೈಕೆಲ್ ಕ್ಲಾರ್ಕ್‌ರನ್ನು ಎಲ್.ಬಿ. ಬಲೆಗೆ ಹಾಕಿಕೊಂಡ ಬಜ್ಜಿ, ಆಸ್ಸಿಸ್‌ನ ಐದನೇ ವಿಕೆಟ್ ಪತನಕ್ಕೆ ಕಾರಣರಾದರು.
ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ ತಂಡ 5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿ, ಭಾರತದ ಬೌಲಿಂಗ್ ದಾಳಿಯನ್ನು ಎದುರಿಸಲು ಪರದಾಡುತ್ತಿದೆ. ಭಾರತದ ಪರ ವೇಗಿ ಆರ್.ಪಿ.ಸಿಂಗ್ 3 ವಿಕೆಟ್ ಮತ್ತು ಹರ್ಭಜನ್ ಸಿಂಗ್ 2ವಿಕೆಟ್ ಪಡೆದಿದ್ದಾರೆ.
ಅನುಭವಿಗಳಾದ ಆಂಡ್ಯ್ರೂ ಸೈಮಂಡ್ಸ್ ಮತ್ತು ವಿಕೆಟ್ ಕೀಪರ್ ಗಿಲ್‌ಕ್ರಿಸ್ಟ್ ಕ್ರೀಸ್ ಬಳಿ ಆಡುತ್ತಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|