|
| ಬೀಜಿಂಗ್ ಒಲಂಪಿಕ್ ನನ್ನ ಗುರಿ : ನಡಾಲ್ |
| ಚೆನ್ನೈ(ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007 ( 17:36 IST ) | |
ಬೀಜಿಂಗ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ಒಲಂಪಿಕ್ಸ್ ಟೆನಿಸ್‌ನಲ್ಲಿ ಚಿನ್ನ ಪಡೆಯುವುದು ನನ್ನ ಮೊದಲ ಗುರಿ ಎಂದು ವಿಶ್ವದ ನಂ.2 ಆಟಗಾರ ರಾಫೆಲ್ ನಡಾಲ್ ಅವರು ಹೇಳಿದ್ದಾರೆ.
21 ವರ್ಷದ ಈ ಪ್ರೆಂಚ್ ಟೆನಿಸ್ ಪಟು, ಮುಂದಿನ ವಾರದಿಂದ ನಡೆಯಲಿರುವ ಚೆನ್ನೈ ಓಪನ್ ಪಂದ್ಯಾವಳಿಯಲ್ಲಿ ಆಡಲಿರುವ ಅಗ್ರ ಶ್ರೇಯಾಂಕದ ಆಟಗಾರನಾಗಿದ್ದು, ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'ನಾನು ಡಬಲ್ಸ್ ಆಡಲು ಬಹಳ ಇಷ್ಟ ಪಡುತ್ತೇನೆ. ಅದಕ್ಕಾಗಿಯೇ ನಾನು ಡಬಲ್ಸ್ ಆಡುತ್ತೇನೆ. ಅದೇ ರೀತಿ ಉಳಿದ ಟೆನಿಸ್ ಪಂದ್ಯಾವಳಿಗಳಿಗಿಂತ ಒಲಂಪಿಕ್‌ನ್ನು ತುಂಬಾ ಇಷ್ಟಪಡುತ್ತೇನೆ. ಉಳಿದ ಆಟಗಳು ಆಗಾಗ ನಡೆಯುತ್ತಿದ್ದರೆ, ಒಲಂಪಿಕ್ ಕೇವಲ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ ಎಂದು ಅವರು ನುಡಿದರು.
ತಾನೀಗ ಇರುವ ನಂ.2 ಸ್ಥಾನದ ಬಗ್ಗೆ ಯಾವುದೇ ಬೇಸರವಿಲ್ಲ ಎಂದ ನಡಾಲ್, ಸ್ಥಾನ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರೂ ಸಾಕಷ್ಟು ಅಂಕಗಳನ್ನು ಪಡೆದಿರುವ ಕಾರಣ ಎರಡನೆ ಸ್ಥಾನದಲ್ಲಿ ಇರಲು ಸಂತೋಷವಿದೆ ಎಂದು ಅವರು ಹೇಳಿದರು.
2007ರಲ್ಲಿ 6 ಕ್ಲೆ ಕೋರ್ಟ್ ಟೆನಿಸ್ ಪ್ರಶಸ್ತಿಗಳನ್ನು ಪಡೆದಿರುವ ನಡಾಲ್, ಅತ್ಯುತ್ತಮವಾಗಿ ಆಡುವುದು ಕಷ್ಟದ ವಿಷಯ. ಆದರೆ ನಾನು ಹುಲ್ಲು, ಗಟ್ಟಿ ಮತ್ತು ಒಳಾಂಗಣ ಕೋರ್ಟ್‌ನಲ್ಲೂ ಚೆನ್ನಾಗಿ ಆಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಪೆಡರರ್‌ಗೆ ಭಯಪಡುವುದಿಲ್ಲ ಎಂದು ಹೇಳಿದ ನಡಾಲ್, ಈಗೀಗ ಬರುತ್ತಿರುವ ಹೊಸ ಮುಖಗಳು ಚೆನ್ನಾಗಿ ಆಡುತ್ತಿದ್ದು, ಅವರ ಕುರಿತು ಚಿಂತೆ ಮಾಡಬೇಕಾಗಿದೆ ಎಂದು ತಿಳಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|