ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಸಿಡ್ನಿ ಪಂದ್ಯಕ್ಕೆ ರಣ ತಂತ್ರ ರೂಪಿಸುತ್ತಿರುವ ಭಾರತ
ಸಿಡ್ನಿ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007   ( 16:42 IST )
ಮೆಲ್ಬೋರ್ನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿರುವ ಭಾರತ ತಂಡ ಸಿಡ್ನಿಯಲ್ಲಿ ಯಶಸ್ಸಾಗಬೇಕಾದರೆ ಸಮಗ್ರ ರಣ ತಂತ್ರ ರೂಪಿಸಬೇಕಾಗಿದೆ.

ಭಾರತ ತಂಡ ಮೆಲ್ಬೋರ್ನ್‌ನಲ್ಲಿ ಸೋತಿದ್ದರೂ, ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗುವುದಿಲ್ಲ ಎಂದು ತಂಡದ ವ್ಯವಸ್ಥಾಪಕರು ತಿಳಿಸಿರುವ ಕಾರಣ ಒಮ್ಮೆ ಸೋಲಿನ ಕಹಿ ಅನುಭವಿಸರುವ ಅದೇ 11 ಮಂದಿಯ ತಂಡವು ಸಿಡ್ನಿಯಲ್ಲಾದರೂ ಗೆಲುವಿನ ರುಚಿಯನ್ನು ಅರಸಿಕೊಂಡು ಹೋಗಬೇಕಾಗಿದೆ.

ಭಾರತೀಯ ತಂಡದ ಆಟಗಾರರು ಆರಾಮವಾಗಿ ಮುಂದಿನ ಪಂದ್ಯವನ್ನ ಆಡಲಿ ಎಂಬ ದೃಷ್ಟಿಯಿಂದ, ಭಾರತೀಯ ತಂಡದ ವ್ಯವಸ್ಥಾಪಕರು ತಂಡದ ಯಾವುದೇ ಆಟಗಾರರ ಮೇಲೆ ಒತ್ತಡ ಹೇರದೆ, ಆಟ ಆಡುವಂತೆ ಹೇಳಿದೆ. ಅದೇ ರೀತಿ ಬದಲಾದ ಫಲಿತಾಂಶವನ್ನು ಕಾಯುತ್ತಿದೆ.

ರಾಹುಲ್ ದ್ರಾವಿಡ್ ಅವರ ಬಸವನ ಹುಳುವಿನ ತರಹದ ಆಟದ ಬಗ್ಗೆ ಈಗಾಗಲೇ ಕೆಲವರಿಗಾದರೂ ಮನದಲ್ಲಿ ಉರಿ ಉಂಟಾಗಿರಬಹುದು. ಆದರೂ, ಆರಂಭಿಕರ ಬದಲಾವಣೆ ಕಡೆಗೆ ಯಾವುದೇ ಹುಮ್ಮಸ್ಸು ಆಯ್ಕೆ ಮಂಡಳಿ ತೋರಿಲ್ಲ. ಅದು ಅವರ ಮಾನಸಿಕ ಸ್ಥಿತಿ ಎಂದಿರುವ ತಂಡದ ವ್ಯವಸ್ಥಾಪಕ ಲಾಲ್ ಚಂದ್ ರಜಫೂತ್, ದ್ರಾವಿಡ್ 'ಭಾರತದ ಗೋಡೆ' ಎಂಬುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.

ಹೊಸ ವರ್ಷದ ಆಚರಣೆಯ ನಂತರ ಭಾರತ ತಂಡವು ಹೊಸ ಗೆಲುವಿನ ಕಡೆ ಗಮನ ನೀಡಬಹುದು ಎನ್ನುವುದು ಎಲ್ಲರ ಆಶಯ. ಇದೇ ವೇಳೆ, ತಂಡದ ನಾಯಕ ಅನಿಲ್ ಮಾತನಾಡಿ ನಾವು ಸೋತಿರಬಹುದು. ಆದರೆ, ಸಂಪೂರ್ಣ ಸರಣಿ ಕಳೆದುಕೊಂಡಿಲ್ಲ ಎಂದು ಹೇಳಿರುವುದು ಕ್ರಿಕೆಟ್ ಅಭಿಮಾನಿಗಳ ಮನದೊಳಗೆ ಸ್ವಲ್ಪ ಭರವಸೆ ಸೃಷ್ಟಿ ಮಾಡಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಆಸ್ಟ್ರೇಲಿಯಾ ಅಭಿಮಾನಿಗಳ ಜನಾಂಗೀಯ ನಿಂದನೆ
ಪಾಕಿಸ್ತಾನದಿಂದ ದೂರವಿರುತ್ತೇನೆ: ಸೈಮಂಡ್ಸ್
ಹೋಪ್‌ಮನ್ ಕಪ್: ಸರ್ಬಿಯಾ ಎದುರು ತೈವಾನ್‌ಗೆ ಸೋಲು
ಬಜ್ಜಿಯ ಮೊಲ ಅಲ್ಲ :ಪಾಂಟಿಂಗ್
ಬಾಂಗ್ಲಾ ಬೆಂಡೆತ್ತಿದ ಮ್ಯಾಕಲಮ್: ಕಿವಿಸ್‌ಗೆ ದಾಖಲೆಯ ಜಯ
ಟೆನಿಸ್: ಇಂದು ಚೆನ್ನೈ ಒಪನ್‌ಗೆ ಚಾಲನೆ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace