|
| ಬಜ್ಜಿಯ ಮೊಲ ಅಲ್ಲ :ಪಾಂಟಿಂಗ್ |
| ಮೆಲ್ಬೋರ್ನ್ (ಏಜೆನ್ಸಿ), 31 ಡಿಸೆಂಬರ್ 2007 ( 11:49 IST ) | |
"ನಾನು ಹರ್ಭಜನ್ ಸಿಂಗ್‌ರ ಮೊಲ ಅಲ್ಲ" ಎಂದು ಆಸ್ಟ್ರೇಲಿಯಾ ತಂಡದ ನಾಯಕ ರಿಕಿ ಪಾಂಟಿಂಗ್ ಸಣ್ಣಗೆ ಉಸುರಿದ್ದಾರೆ.
ಮೆಲ್ಬೋರ್ನ್‌ನಲ್ಲಿ ನಡೆದ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ನಾಯಕ ಪಾಂಟಿಂಗನ್ನು ಬಜ್ಜಿ ಪೆವಿಲಿಯನ್ನಿಗೆ ಕಳುಹಿಸಿದ್ದರು. ಅಲ್ಲದೆ, ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಅವರು ಪಾಂಟಿಂಗ್ ವಿಕೆಟ್ ಪಡೆಯುವ ಮೂಲಕ 250 ವಿಕೆಟ್ ಪಡೆದ ಭಾರತೀಯ ನಾಲ್ವರು ಬೌಲರ್‌ಗಳ ಸಾಲಿಗೆ ಸೇರಿದ್ದರು. ಇದಕ್ಕೆ ಪ್ರಕ್ರಿಯಿಸಿದ ಪಾಂಟಿಂಗ್, ನಾನು ಯಾವಾಗಲೂ ಹರ್ಭಜನ್ ಅವರ ಎಸೆತಕ್ಕೆ ಔಟಾಗಲು ಸಾಧ್ಯವಿಲ್ಲ, ಯಾಕೆಂದರೆ ನಾನು ಅವರು ಸಾಕಿದ ಮೊಲ ಅಲ್ಲ ಎಂದು ನುಡಿದಿದ್ದಾರೆ.
ನಾನು ಸಿಡ್ನಿ ಪಂದ್ಯವನ್ನು ಎದುರು ನೋಡುತಿದ್ದೇನೆ, ಅಲ್ಲಿ ಹರ್ಭಜನ್ ಬೌಲಿಂಗ್‌ನಲ್ಲಿ ರನ್ ಕಸಿಯಲಿದ್ದೇನೆ. ಈ ಮೂಲಕ ಅವರಿಗೆ ಕಳೆದ ಎರಡು ಬೌಲಿಂಗ್ ತಂತ್ರಕ್ಕೆ ತಕ್ಕ ಉತ್ತರ ನೀಡಲಿದ್ದೇನೆ ಎಂದು ಪಾಟಿಂಗ್ ಹೇಳಿದರು.
ಹರ್ಭಜನ್ ಬೌಲಿಂಗ್ ಮೂಲಕ ಭಯ ಸಷ್ಟಿ ಮಾಡಿದ್ದಾರೆ. ಅವರು ಟೆಸ್ಟ್‌ನಲ್ಲಿ ಮಾತ್ರ ಮಿಂಚುತ್ತಿದ್ದು, ಏಕದಿನದದಲ್ಲಿ ವಿಕೆಟ್ ಪಡೆಯಲು ಅಸಮರ್ಥರಾಗಿದ್ದಾರೆ. ಈ ಕಾರಣದಿಂದಾಗಿ ಅವರು ಈ ಬದಿಯಲ್ಲೂ ಚಿಂತಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ, ನಮ್ಮ ಮತ್ತು ಭಾರತೀಯರ ನಡುವೆ ನಡೆಯುತ್ತಿರುವ ಈ ಪಂದ್ಯಾಟವು ಉತ್ತಮವಾದ ಕಾದಾಟವನ್ನೇ ಸೃಷ್ಟಿ ಮಾಡಿದೆ. ಇದು ಕಳೆದ 2001 ವಿಶ್ವಕಪ್ ಫೈನಲ್ ಪಂದ್ಯವನ್ನು ನೆನಪಿಸುತ್ತದೆ ಎಂದು ಅಭಿಪ್ರಾಯಪಟ್ಟರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|