ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ಬಾಂಗ್ಲಾ ಬೆಂಡೆತ್ತಿದ ಮ್ಯಾಕಲಮ್: ಕಿವಿಸ್‌ಗೆ ದಾಖಲೆಯ ಜಯ
ವೆಲ್ಲಿಂಗ್ಟನ್ (ಏಜೆನ್ಸಿ), ಸೋಮವಾರ, 31 ಡಿಸೆಂಬರ್ 2007   ( 11:19 IST )
Brendon McCullum
AP
ಏಕದಿನ ಪಂದ್ಯದಲ್ಲಿ ಎಲ್ಲವೂ ಅನಿಶ್ಚಿತ, ಅಚ್ಚರಿ, ಆಶ್ಚರ್ಯ ಎನ್ನುವುದಕ್ಕೆ ಸೋಮವಾರ ಪ್ರವಾಸಿ ಬಾಂಗ್ಲಾ ಮತ್ತು ಆತಿಥೇಯ ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯ ಸಾಕ್ಷಿಯಾಯಿತು.

ದುರ್ಬಲ ಬಾಂಗ್ಲಾ ವಿರುದ್ಧ ಈಗಾಗಲೇ ಎರಡು ಪಂದ್ಯಗಳನ್ನು ಜಯಿಸಿ, ಸರಣಿ ಕೈವಶ ಮಾಡಿಕೊಂಡಿರುವ ನ್ಯೂಜಿಲೆಂಡ್ ತಂಡ, ಮೂರನೇ ಏಕದಿನ ಪಂದ್ಯದಲ್ಲಿಯೂ ಸಹ ಗುಬ್ಬಿ ಮೇಲೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿ, ಕೇವಲ ಆರು ಓವರ್‌‌ಗಳಲ್ಲಿ ಪಂದ್ಯವನ್ನು ಜಯಿಸುವ ಮೂಲಕ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನೂತನ ವಿಶ್ವದಾಖಲೆ ಬರೆಯಿತು.

ಬಾಂಗ್ಲಾ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್, ಮೊದಲು ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ ವೇಗಿಗಳ ಕರಾರುವಕ್ಕಾದ ಬೌಲಿಂಗ್ ಪಡೆಯನ್ನು ಎದುರಿಸಲಾಗದ ಬಾಂಗ್ಲಾ ಪರ ಆರಂಭಿಕ ಆಟಗಾರರು ಬೇಗನೆ ವಿಕೆಟ್ ಕಳೆದುಕೊಂಡಿದ್ದು, ತಂಡ ಅವನತಿಯತ್ತ ಸಾಗುವ ಸೂಚನೆ ನೀಡಿತ್ತು.

ಮಧ್ಯಮ ಕ್ರಮಾಂಕದಲ್ಲಿ ನಾಯಕ ಮೊಹ್ಮದ್ ಅಸ್ರಫುಲ್ ಬಾಂಗ್ಲಾ ಪರ ಅತ್ಯಧಿಕ 25 ರನ್ ಮತ್ತು ಅಫ್ತಾಬ್ ಅಹಮದ್ 19 ರನ್ ಪೇರಿಸಿ ಸ್ವಲ್ಪ ಪ್ರತಿರೋಧ ತೋರಿಸಿದರಾದರೂ, ಎದುರಾಳಿಗಳ ದಾಳಿಗೆ ಬೇಗನೆ ವಿಕೆಟ್ ಕಳೆದುಕೊಂಡರು.

ಕೆಳ ಮಧ್ಯಮ ಕ್ರಮಾಂಕ ಮತ್ತು ಕೆಳ ಕ್ರಮಾಂಕದ ಆಟಗಾರರು ಸಂಪೂರ್ಣ ವಿಫಲರಾಗಿದ್ದರಿಂದ, ಬಾಂಗ್ಲಾ 37.5 ಓವರ್‌ಗಳಲ್ಲಿ ಕೇವಲ 93 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ಈಗಾಗಲೇ ಎರಡೂ ಪಂದ್ಯಗಳನ್ನು ಜಯಿಸಿ ಸರಣಿ ಕೈವಶ ಮಾಡಿಕೊಂಡಿರುವ ನ್ಯೂಜಿಲೆಂಡ್ ಯಾವುದೇ ಒತ್ತಡವಿಲ್ಲದೆ ಬ್ಯಾಟಿಂಗ್ ಆರಂಭಿಸಿತು. ಪಂದ್ಯ ಗೆಲ್ಲಲು ಕನಿಷ್ಠ ಪಕ್ಷ 15ರಿಂದ 20 ಓವರ್ ಆಡಲಿದೆ ಎನ್ನುವ ಪಂಡಿತರ ಲೆಕ್ಕಾಚಾರ ತಲೆಕೆಳಗೆ ಮಾಡಿದ ಆರಂಭಿಕ ಆಟಗಾರ ಬ್ರೆಂಡನ್ ಮೆಕಲ್ಲಮ್ ಅವರ ಬಿರುಗಾಳಿ ಬ್ಯಾಟಿಂಗ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಈ ಪಂದ್ಯ ದಾಖಲಾಗುವಂತೆ ಮಾಡಿದರು.

ಎದುರಾಳಿಗಳ 93 ರನ್ ಸವಾಲನ್ನು ಕೇವಲ 6 ಓವರ್‍‌ಗಳಲ್ಲಿ ಅಂದರೆ, ಕೇವಲ 36 ಎಸೆತಗಳಲ್ಲಿ ಪ್ರತಿ ಓವರ್‌ಗೆ 15.83 ರನ್ ಬಾರಿಸಿ ಪಂದ್ಯ ಗೆಲ್ಲುವ ಮೂಲಕ ನ್ಯೂಜಿಲೆಂಡ್ ಏಕದಿನ ಪಂದ್ಯವೊಂದರಲ್ಲಿ ಅತಿ ಕಡಿಮೆ ಒವರ್‌ಗಳಲ್ಲಿ ಪಂದ್ಯ ಜಯಿಸಿದ ಖ್ಯಾತಿಗೆ ಪಾತ್ರವಾಯಿತು.

ಮೈದಾನದ ಮೂಲೆ ಮೂಲೆಗೂ ಅಬ್ಬರಿಸಿದ ಮ್ಯಾಕಲ್ಲಮ್ ಕೇವಲ 28 ಎಸೆತಗಳಲ್ಲಿ 6 ಭರ್ಜರಿ ಸಿಕ್ಸರ್ ಮತ್ತು 9 ಆಕರ್ಷಕ ಬೌಂಡರಿಗಳ ನೆರವಿನಿಂದ 80 ರನ್ ಪೇರಿಸಿ ನ್ಯೂಜಿಲೆಂಡ್ ಹಿರೋ ಆಗಿ ಮೆರೆದರು.

ಇದಕ್ಕೂ ಮೊದಲು ಬಾಂಗ್ಲಾ ಬ್ಯಾಟಿಂಗ್ ಪಡೆಯನ್ನು ಧೂಳಿಪಟ ಮಾಡಿದ ನ್ಯೂಜಿಲೆಂಡ್ ಸ್ಪಿನ್ ಬೌಲರ್ ಡೇನಿಯಲ್ ವೆಟ್ಟೋರಿ 6 ಓವರ್‌ಗಳಲ್ಲಿ 7 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆಯುವ ಮೂಲಕ ಬಾಂಗ್ಲಾಕ್ಕೆ ಸಿಂಹಸ್ವಪ್ನರಾದರು.

ಇವರಿಗೆ ಉತ್ತ ಬೆಂಬಲ ನೀಡಿದ ವೇಗಿ ಕೈಲ್ ಮಿಲ್ಸ್ 2 ವಿಕೆಟ್, ಎಂ.ಜೆ. ಮಾಸೊನ್ 2ವಿಕೆಟ್ ಮತ್ತು ಜೇಕಬ್ ಒರಾಮ್ 1 ವಿಕೆಟ್ ಪಡೆದರು.

5ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಕಾರಣರಾದ ಡೇನಿಯಲ್ ವೆಟ್ಟೋರಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಟೆನಿಸ್: ಇಂದು ಚೆನ್ನೈ ಒಪನ್‌ಗೆ ಚಾಲನೆ
ಪಿಎಚ್ಎಲ್: ಮರಾಠರನ್ನು ಮಣಿಸಿದ ಸ್ಟೀಲರ್ಸ್
ವೀರನ್ಸ್‌ಗೆ ಹೈಪ್ಲೈಯರ್ಸ್‌ನ ಸೋಲಿನ ಕಾಣಿಕೆ
ಬದಲಾವಣೆಗೆ ಸೂಕ್ತ ಸಮಯವಲ್ಲ: ರಜಪೂತ್
ಹತ್ತರ ಸ್ಥಾನಕ್ಕೆ ಮಾರ್ಕೋಸ್ ಬಾಘದತ್ತಿಸ್ ಕಣ್ಣು
ಹೋಪ್‌ಮೆನ್ ಕಪ್: ಭಾರತಕ್ಕಿನ್ನು 'ಹೋಪ್' ಇಲ್ಲ
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace