|
| ಪಿಎಚ್ಎಲ್: ಮರಾಠರನ್ನು ಮಣಿಸಿದ ಸ್ಟೀಲರ್ಸ್ |
| ಚಂಡಿಗಢ್ (ಏಜೆನ್ಸಿ), ಭಾನುವಾರ, 30 ಡಿಸೆಂಬರ್ 2007 ( 15:06 IST ) | |
ಪ್ರಸಕ್ತ ಪ್ರಿಮಿಯರ್ ಹಾಕಿ ಲೀಗ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನವನ್ನು ಈವರೆಗೆ ನೀಡಿದ ಹಾಲಿ ಚಾಂಪಿಯನ್ ಓರಿಸ್ಸಾ ಸ್ಟೀಲರ್ಸ್ ತಂಡವು ಮರಾಠಾ ವಾರಿಯರ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ 4-2 ಗೋಲುಗಳ ಅಂತರದಿಂದ ಗೆದ್ದುಕೊಂಡು ತನ್ನ ಸೆಮಿಫೈನಲ್ ತಲುಪುವ ಬಯಕೆಯನ್ನು ಜೀವಂತವಾಗಿರಿಸಿಕೊಂಡಿತು.
ಪಂದ್ಯದ ಪ್ರಾರಂಭದಲ್ಲಿ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಸ್ಟೀಲರ್ಸ್ ತಂಡವು, ಹಾಕಿಯ ಎಲ್ಲ ವಿಭಾಗಗಳಲ್ಲಿ ಉತ್ಕೃಷ್ಟ ಪ್ರದರ್ಶನ ನೀಡಿತು. ಸ್ಟೀಲರ್ಸ್ ಪರ ಆಡುವ ಪಾಕಿಸ್ತಾನದ ಶಕೀಲ್ ಅಬ್ಬಾಸಿ ಪಂದ್ಯದಲ್ಲಿ ಶ್ರೇಷ್ಠ ಹಾಕಿ ಪ್ರದರ್ಶನ ನೀಡಿದರು. ಭಾರತೀಯ ಹಾಕಿ ಪಟುಗಳಾದ ಪ್ರಭೋದ್, ಇಗ್ನೆಸ್ ಟರ್ಕಿ ಮತ್ತು ಸುನಿಲ್ ಎಕ್ಕಾ ಪ್ರಬುದ್ಧ ಹಾಕಿಯನ್ನು ವಾರಿಯರ್ಸ್ ವಿರುದ್ಧ ಪ್ರದರ್ಶಿಸಿ ಅಂತ್ಯದವರೆಗೆ ಪಂದ್ಯದ ಮೇಲೆ ಸ್ಟೀಲರ್ಸ್ ಹಿಡಿತ ಸಾಧಿಸುವಲ್ಲಿ ಸಫಲವಾಯಿತು.
ಎಡಬದಿಯಿಂದ ಎದುರಾಳಿ ಅಂಕಣದ ಮೇಲೆ ದಾಳಿ ಪ್ರಾರಂಭಿಸಿದ ಸ್ಟೀಲರ್ಸ್ ತಂಡದ ಸುನಿಲ್ ಎಕ್ಕಾ ಅವರು ಗೋಲಿನ ಅಂಕಣದ ಸನೀಹಕ್ಕೆ ಬರುತ್ತಲೆ ಅಜೀತೇಶ್ ರಾಯ್ ನಿಯಂತ್ರಣಕ್ಕೆ ಬಂದ ಚೆಂಡು ಏಳನೇ ನಿಮಿಷದಲ್ಲಿ ವಾರಿಯರ್ಸ್ ತಂಡದ ಗೋಲು ಪೆಟ್ಟಿಗೆ ಸೇರಿತು.
ಪಂದ್ಯದ ದ್ವಿತೀಯಾರ್ದ ನಿರಸವಾಗಿತ್ತು. ಎರಡು ಬಾರಿ ಶಕೀಲ್ ಅಬ್ಬಾಸಿ ಗೋಲು ಪೆಟ್ಟಿಗೆಯವರೆಗೆ ತಲುಪುವಲ್ಲಿ ಯಶಸ್ವಿಯಾದರು. ಆದರೆ ಗೋಲಿನ ಖಾತೆಯನ್ನು ಪುನಃ ತೆರೆಯಲಿಕ್ಕೆ ಸಾಧ್ಯವಾಗಲಿಲ್ಲ. 25ನೇ ನಿಮಿಷದಲ್ಲಿ ಅಬ್ಬಾಸಿಯ ಪ್ರಯತ್ನವನ್ನು ಗೋಲಿ ಆಡ್ರಿಯನ್ ಡಿಸೋಜಾ ಅದ್ಭುತವಾಗಿ ತಡೆಯುವಲ್ಲಿ ಸಫಲರಾದರು.
ವಾರಿಯರ್ಸ್‌ನ ತಂಡದ ಶಿವೇಂದ್ರ ಸಿಂಗ್ ಏಕಾಂಗಿಯಾಗಿ ದಾಳಿಯನ್ನು ಮುಂದುವರಿಸಿದರಾದರೂ ಅವರಿಗೆ ನಿರೀಕ್ಷಿತ ಬೆಂಬಲ ತಂಡದ ಮಿಡ್ ಫೀಲ್ಡ್‌ರುಗಳಿಂದ ದೊರೆಯಲಿಲ್ಲ. ಸ್ಟೀಲರ್ಸ್ ಪಡೆ ರೇಹಾನ್ ಬಟ್‌ರನ್ನು ಸುತ್ತುವರಿದು ರಕ್ಷಣೆ ಕಟ್ಟಿದ ಪರಿಣಾಮ ರೇಹಾನ್ ಮಾಡಿದ ಪ್ರಯತ್ನಗಳು ಎಲ್ಲ ವಿಫಲದ ಹಾದಿಯಲ್ಲಿ ಸಾಗಿದವು.
50ನೇ ನಿಮಿಷದಲ್ಲಿ ಸುನಿಲ್ ಎಕ್ಕಾ ಸರ್ಕಲ್‌ವರೆಗೆ ಕಳುಹಿಸಿದ ಪಾಸ್, ಶಕೀಲ್ ಅಬ್ಬಾಸಿ ಮತ್ತು ಅಜ್ಮೇರ್ ಸಿಂಗ್ ಅವರು ಮಿಂಚಿನ ವೇಗದಲ್ಲಿ ಹೊರಗೆ ಹೋಗುತ್ತಿದ್ದ ಚೆಂಡಿನ ದಿಕ್ಕು ತಪ್ಪಿಸಿ ಎರಡನೆ ಗೋಲು ತಂಡದ ಖಾತೆ ಸೇರುವಂತೆ ಮಾಡಿದರು.
ವಾರಿಯರ್ಸ್ ತಂಡವು 57ನೇ ನಿಮಿಷದಲ್ಲಿ ದೊರೆತ ಮೂರನೆ ಪೆನಾಲ್ಟಿಯನ್ನು ಗೋಲಿನ ರೂಪಕ್ಕೆ ತಿರುಗಿಸಿತು. ಲೋಯಿಜೆಮ ಮೆಲ್ಶರ್, ಕೆಳ ಮಟ್ಟದಲ್ಲಿ ಮಾಡಿದ ಡ್ರ್ಯಾಗ್ ಫ್ಲಿಕ್ ಓರಿಸ್ಸಾ ಗೋಲಿಯ ಮಿಂಚಿನ ವೇಗವನ್ನು ಲೆಕ್ಕಿಸದೇ ಗೋಲು ಪೆಟ್ಟಿಗೆಯಲ್ಲಿ ಸದ್ದು ಮಾಡಿತು. 58 ನೇ ನಿಮಿಷದಲ್ಲಿ ಶಕೀಲ್ ಅಬ್ಬಾಸಿ ಮತ್ತು ಇಗ್ನೇಸ್ ಟರ್ಕಿ ನೆರವಿನಿಂದ ಓರಿಸ್ಸಾ ತಂಡಕ್ಕೆ ಮೂರನೆ ಗೋಲು ಬಂದಿತು.
ಮರು ನಿಮಿಷವೇ ಇಗ್ನೇಸ್ ಟರ್ಕಿ, ಸರ್ಕಲ್ ಹತ್ತಿರವೇ ಇದ್ದ ಶಕೀಲ್ ಅಬ್ಬಾಸಿಗೆ ಗೋಲು ರವಾನಿಸಿದರು. ಶಕೀಲ್ ನಿಯಂತ್ರಣಕ್ಕೆ ಸಿಲುಕಿದ ಚೆಂಡನ್ನು ಗೋಲಿ ಅಡ್ರಿಯನ್ ತಡೆಯಲು ಮುನ್ನುಗ್ಗುತ್ತಿದ್ದಂತೆ ಚೆಂಡು ದಮನ್‌ದೀಪ್ ಸಿಂಗ್ ಕೈಗೆ ಸಿಲುಕಿತು. ಅಡ್ರಿಯನ್ ಇಲ್ಲದ ಗೋಲು ಪೆಟ್ಟಿಗೆಗೆ ದಮನ್ ದೀಪ್ ನಿರಾಯಾಸವಾಗಿ ಚೆಂಡು ರವಾನಿಸಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ. |
| |
|
|
|
|
 | | PTI |
| | | ಅನಿಲ್ ಕುಂಬ್ಳೆ | | ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ... |
|
| |
|
|
|
|
|
| ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ. |
| |
|
|
|
|
|
|
|