ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವೀರನ್ಸ್‌ಗೆ ಹೈಪ್ಲೈಯರ್ಸ್‌ನ ಸೋಲಿನ ಕಾಣಿಕೆ
ಚಂಡಿಗಢ್ (ಏಜೆನ್ಸಿ), ಭಾನುವಾರ, 30 ಡಿಸೆಂಬರ್ 2007   ( 15:03 IST )
ಚಂಡಿಗಡ್‌ನಲ್ಲಿ ನಡೆದಿರುವ ನಾಲ್ಕನೇ ಪ್ರಿಮಿಯರ್ ಹಾಕಿ ಲೀಗ್ ಟೂರ್ನಿಯಲ್ಲಿ ತಮ್ಮ ವಿರುದ್ಧ ವಿರೋಚಿತ ಆಟ ಪ್ರದರ್ಶಿಸಿದ ಚೆನ್ನೈ ವೀರನ್ಸ್ ತಂಡಕ್ಕೆ 4-2 ಗೋಲುಗಳ ಅಂತರದ ಸೋಲಿನ ಕಾಣಿಕೆ ನೀಡುವ ಮೂಲಕ ಬೆಂಗಳೂರು ಹೈಪ್ಲೈಯರ್ಸ್ ತಂಡವು ತನ್ನ ಸೆಮಿಫೈನಲ್ ತಲುಪುವ ಬಯಕೆಗೆ ನೀರೆರೆದು ಪೋಷಿಸಿತು.

ಈವರೆಗೆ ಆಡಿರುವ ನಾಲ್ಕು ಪಂದ್ಯಗಳಲ್ಲಿ ಚೆನ್ನೈ ವೀರನ್ಸ್ ಸೋಲು ಅನುಭವಿಸಿದ್ದು, ಸೆಮಿಫೈನಲ್ ತಲುಪುವ ನಿರೀಕ್ಷೆಯನ್ನು ಹೈಪ್ಲೈಯರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸೋಲುವ ಮೂಲಕ ಕೈಬಿಟ್ಟಿತು. ಹೈಪ್ಲೈಯರ್ಸ್ ವಿರುದ್ಧ ಚೆನ್ನೈ ವೀರನ್ಸ್ ಅತ್ಯುತ್ತಮ ಆಟವನ್ನು ಮೊದಲಿನ ಎರಡು ಅವಧಿಯಲ್ಲಿ ಪ್ರದರ್ಶಿಸಿತು.

ಪ್ರಥಮಾರ್ಧದ 14ನೇ ನಿಮಿಷದಲ್ಲಿ ಡ್ರ್ಯಾಗ್ ಫ್ಲಿಕ್ ಸ್ಪೇಷಾಲಿಸ್ಟ್ ರಘುನಾಥ್ ಪೆನಾಲ್ಟಿ ಕಾರ್ನರ್‌ಗೆ ಗೋಲಿನ ರೂಪ ನೀಡುವಲ್ಲಿ ಯಶಸ್ವಿಯಾದರು. ಆದರೆ, ಹೈಪ್ಲೈಯರ್ಸ್ ತಂಡ ಕೂಡ ಮೂರು ನಿಮಿಷದ ಅಂತರದಲ್ಲಿ ಉತ್ತರ ನೀಡುವಲ್ಲಿ ಯಶಸ್ವಿಯಾದರು.

17ನೇ ನಿಮಿಷದಲ್ಲಿ ಬಲ ಬದಿಯಿಂದ ಚೇಯಣ್ಣರಿಗೆ ಹಾಲಪ್ಪ ಚೆಂಡು ಪಾಸ್ ಮಾಡಿದರು. ವಿಕ್ರಂಜೀತ್ ಸಿಂಗ್‌ರನ್ನು ವಂಚಿಸುವಲ್ಲಿ ಸಫಲರಾದ ಚೇಯಣ್ಣ, ಅಂತಿಮವಾಗಿ ಗೋಲಿ ಶ್ರೀಜೇಶ್‌ಗೆ ಚಳ್ಳೆಹಣ್ಣು ತಿನ್ನಿಸಿ ಗೋಲು ತೆಗೆದುಕೊಳ್ಳುವಲ್ಲಿ ಸಫಲರಾದರು.

ಪ್ರಾರಂಭದಲ್ಲಿ ಚೆನ್ನೈ ವೀರನ್ಸ್ ತಂಡದ ಮುನ್ಪಡೆ ಆಟಗಾರರಾದ ರಾಜಾ ಮತ್ತು ಸಿಂಕ್ಲೇರ್ ಆಕ್ರಮಣಕಾರಿ ಹಾಕಿಯನ್ನು ಪ್ರದರ್ಶಿಸಿದರು. ನಂತರ ಬೆಂಗಳೂರು ಹೈಪ್ಲೈಯರ್ಸ್ 40ನೇ ನಿಮಿಷದ ನಂತರ ತನ್ನ ಹಿಡಿತ ಬಿಗಿ ಮಾಡಿತು.

40ನೇ ನಿಮಿಷದಲ್ಲಿ ಲೇನ್ ಅಯ್ಯಪ್ಪ ಅವರು ಪೆನಾಲ್ಟಿಯನ್ನು ಹಾಳು ಮಾಡದ ಪರಿಣಾಮವಾಗಿ ಹೈಪ್ಲೈಯರ್ಸ್ ತಂಡದ ಖಾತೆಗೆ ಎರಡನೆ ಗೋಲು ಜಮೆಯಾಗುವ ಮೂಲಕ ಪಂದ್ಯದ ಗೋಲಿನ ಅಂತರ 2-1 ಕ್ಕೆ ತಲುಪಿತು. 49 ನೇ ನಿಮಿಷದಲ್ಲಿ ವೀರನ್ಸ್ ತಂಡದ ಸುರೇಶ್ ಗೋಲು ತರುವ ಮೂಲಕ ಪಂದ್ಯದ ಸ್ಕೋರ್ ಪುನಃ ಸಮಸ್ಥಿತಿಗೆ ಬಂದಿತು ಹೈಪ್ಲೈಯರ್ಸ್‌ನ ಮೂರನೇ ಗೋಲು ಕೋರಿಯದ ಹಾಕಿ ಪಟು ಯು ಹ್ಯೊ-ಸಿಕ್‌ರಿಂದ ದಾಖಲು ಆಯಿತು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬದಲಾವಣೆಗೆ ಸೂಕ್ತ ಸಮಯವಲ್ಲ: ರಜಪೂತ್
ಹತ್ತರ ಸ್ಥಾನಕ್ಕೆ ಮಾರ್ಕೋಸ್ ಬಾಘದತ್ತಿಸ್ ಕಣ್ಣು
ಹೋಪ್‌ಮೆನ್ ಕಪ್: ಭಾರತಕ್ಕಿನ್ನು 'ಹೋಪ್' ಇಲ್ಲ
ಬ್ಯಾಟಿಂಗ್ ವೈಫಲ್ಯ ಸೋಲಿಗೆ ಕಾರಣ: ಕುಂಬ್ಳೆ
ಚೆನ್ನೈ ಒಪನ್: ನಾಲ್ವರು ಭಾರತೀಯರಿಗೆ 'ವೈಲ್ಡ್ ಕಾರ್ಡ್'
ಎಲ್ಲಾ ಸರಣಿಯಲ್ಲಿ 32 ವಿಕೆಟ್ ಪಡೆಯಲಾಗುವುದಿಲ್ಲ : ಹರ್ಭಜನ್
ಮನರಂಜನೆ
ಚಿತ್ರ ಸಮೀಕ್ಷೆ - ನಾಟಕವನ್ನು ಷೂಟ್ ಮಾಡಬೇಕೆಂದರೆ ಏನು ಮಾಡಬೇಕು? ಸ್ಟೇಜ್ ಎದುರಿಗೆ ಒಂದು ಕೆಮೆರಾ ಫಿಕ್ಸ್ ಮಾಡಿ ಆನ್‌ ಮಾಡಿದರೆ ಆಯಿತು ಎನ್ನುವುದು ಉತ್ತರ. ಅದೇ ಟೆಕ್ನಿಕ್ ಬಳಸಿರುವುದು "ಆಪರೇಷನ್ ಅಂಕುಶ" ಚಿತ್ರದ ವಿಶೇಷ.
ಮುಂದೆ ಓದಿ|ಮತ್ತಷ್ಟು...
ಗ್ರಹ ಗತಿ
PTI
 
ಅನಿಲ್ ಕುಂಬ್ಳೆ
ಇತ್ತೀಚೆಗೆ ನಡೆದ ಕ್ರಿಕೆಟ್ ಟೆಸ್ಟ್ ಸರಣಿಯಲ್ಲಿ, ಇಪ್ಪತ್ತೇಳು ವರ್ಷಗಳ ಬಳಿಕ ಸಾಂಪ್ರದಾಯಿಕ ವೈರಿ ಪಾಕಿಸ್ತಾನದ...
ರಾಬಿನ್ ಉತ್ತಪ್ಪ
ಲಗ್ನೇಶ ಬುಧ ಇದ್ದರೂ ವಿಶ್ವಕಪ್ ತಂದ ಧೋನಿ
ಸಾಹಿತ್ಯ
ಆತ್ಮಚರಿತ್ರೆ - ಈ ಮಣ್ಣಿನ ಸೊಗಡಿನ ಸಾಹಿತ್ಯ ರಚಿಸಿದ ನಮ್ಮೆಲ್ಲರ ಅಚ್ಚುಮೆಚ್ಚಿನ ಕು.ವೀರಭದ್ರಪ್ಪನರ 'ಅರಮನೆ' ಕಾದಂಬರಿಗೆ ಈಗ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ.
ಮುಂದೆ ಓದಿ|ಮತ್ತಷ್ಟು...
Marketplace