ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಶ್ವಕಪ್: ಬಾಂಗ್ಲಾಕ್ಕೆ ಐರ್ಲೆಂಡ್‌ನಿಂದ ಸವಾಲಿನ ಮೊತ್ತ
ಬಾರ್ಬಿಡೊಸ್ (ಏಜೆನ್ಸಿ), ಭಾನುವಾರ, 15 ಏಪ್ರಿಲ್ 2007
ಸತತ ಐದು 'ಸುಪರ್ ಏಯ್ಟ್' ಪಂದ್ಯಗಳನ್ನು ಸೋತು ತೀವ್ರ ಮುಖಭಂಗ ಅನುಭವಿಸಿರುವ ಐರ್ಲೆಂಡ್ ತಂಡ ಭಾನುವಾರದ ಪಂದ್ಯದಲ್ಲಿ ಎದುರಾಳಿ ತಂಡವಾದ ಬಾಂಗ್ಲಾದೇಶಕ್ಕೆ ಉತ್ತಮ ಸವಾಲಿನ ಮೊತ್ತವನ್ನು ನೀಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಐರ್ಲೆಂಡ್, ಆರಂಭದಲ್ಲಿಯೆ ಉತ್ತಮ ರನ್ ಸರಾಸರಿಯನ್ನು ಹೊಂದುವ ಮೂಲಕ ತಂಡಕ್ಕೆ ಭದ್ರಬುನಾದಿ ಹಾಕಿದವರೆಂದರೆ ಪೊರ್ಟರ್‌ಪಿಲ್ಡ್ ಮತ್ತು ಬ್ರೇಯ್. ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ ಇವರಿರ್ವರು 92ರನ್ ಕಲೆ ಹಾಕಿದ್ದರು.

ಪಂದ್ಯದ 26ನೆಯ ಓವರ್‌ನಲ್ಲಿ 31ರನ್ ಗಳಿಸಿದ್ದ ಬ್ರೇಯ್ ಅವರು ರನೌಟ್ ಆಗುವ ಮೂಲಕ ತಂಡ ಮೊದಲ ವಿಕೆಟ್ ಕಳೆದುಕೊಂಡಿತು, ನಂತರ ಬಂದ ಮೊರ್ಗನ್ ಮತ್ತು ಎನ್.ಜೆ.ಓಬ್ರೇನ್ ಹೆಚ್ಚು ಹೊತ್ತು ನಿಲ್ಲದೆ ಪೆವಿಲಿಯನ್‌ನೆಡೆಗೆ ಹಾದಿ ಹಿಡಿದರು.

ಪೊರ್ಟರ್‌ಪಿಲ್ಡ್ ಮತ್ತು ಕೆವಿನ್ ಓಬ್ರೇನ್ ಅವರು 4ನೆಯ ವಿಕೆಟ್ ಪಾಲುದಾರಿಕೆಯಲ್ಲಿ 48ರನ್ ಸೇರಿಸಿ ತಂಡಕ್ಕೆ ಮತ್ತೆ ಚೇತರಿಕೆ ನೀಡಿದರು.

ಉತ್ತಮವಾಗಿ ಆಡುತ್ತಾ ಎದುರಾಳಿ ತಂಡದ ಎಲ್ಲ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಪೊರ್ಟರ್‌ಪಿಲ್ಡ್ 85ರನ್ ಗಳಿಸಿ ಮುಷರಪ್ ಮೊರ್ತೂಜಾ ಅವರ ಬೌಲಿಂಗ್‌ನಲ್ಲಿ ಮೊಹಮ್ಮದ್ ರಫಿಕ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರೆ , 48ರನ್ ಗಳಿಸಿದ್ದ ಕೆವಿನ್ ಓಬ್ರೇನ್ ರನೌಟ್ ಆಗುವ ಮೂಲಕ ತಂಡಕ್ಕೆ ಮತ್ತೆ ಅಘಾತ ತಂದಿತ್ತರು. ಆದರೆ, ಇವರ ನಂತರ ಬಂದ ಜಾನ್‌ಸ್ಟನ್ 30ರನ್ ಗಳಿಸಿದರು.

ಇವರೆಲ್ಲರ ಒಟ್ಟಾರೆಯ ಸಾಂಘಿಕ ಪ್ರಯತ್ನದ ಫಲವಾಗಿ ಐರ್ಲೆಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 7ವಿಕೆಟ್ ನಷ್ಟಕ್ಕೆ 243ರನ್ ಗಳಿಸಿ ಎದುರಾಳಿ ಬಾಂಗ್ಲಾ ತಂಡಕ್ಕೆ ಸವಾಲಿನ ಮೊತ್ತ ನೀಡಿದೆ.

ಐರ್ಲೆಂಡ್‌ನ ನಾಲ್ವರು ಬ್ಯಾಟ್ಸಮನ್‌ಗಳು ರನೌಟ್ ಆಗಿದ್ದು ಅವರ ಅನುಭವದ ಕೊರತೆಯನ್ನು ಎದ್ದು ತೋರಿಸುತ್ತಿತ್ತು. ಬಾಂಗ್ಲಾ ಪರ ಉತ್ತಮ ಬೌಲಿಂಗ್ ಮಾಡಿದ ಮುಷರಫ್ ಮೊರ್ತೂಜಾ 2ವಿಕೆಟ್ ಗಳಿಸಿದರೆ, ಸಕೀಬುಲ್ ಹಸನ್ 1ವಿಕೆಟ್ ಗಳಿಸಿದರು.

ಸ್ಕೋರ್ ವಿವರ

ಐರ್ಲೆಂಡ್ ತಂಡ-50ಓವರ್‌ಗಳಲ್ಲಿ243/7
ಪೊರ್ಟರ್‌ಪಿಲ್ಡ್-85ರನ್
ಕೆವಿನ್ ಓಬ್ರೇನ್-48ರನ್
ಬ್ರೇಯ್-31ರನ್
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಕಪ್: ಶತಕದತ್ತ ಪೊರ್ಟರ್‌ಪಿಲ್ಡ್
ವಿಶ್ವಕಪ್: ಐರ್ಲೆಂಡ್‌‍ನಿಂದ ಉತ್ತಮ ಆಟ ಮುಂದುವರಿಕೆ
ವಿಶ್ವಕಪ್: ಐರ್ಲೆಂಡ್‌‍ನಿಂದ ಉತ್ತಮ ಅಡಿಪಾಯ
ವಿಶ್ವಕಪ್: ಆಫ್ರಿಕಾವನ್ನು ಮಣಿಸಿದ ಕಿವಿಸ್ ಸೆಮಿಫೈನಲ್ ಪ್ರವೇಶ
ವಿಶ್ವಕಪ್: ಜಯದತ್ತ ಮುನ್ನುಗ್ಗುತ್ತಿರುವ ಕಿವಿಸ್
ವಿಶ್ವಕಪ್: ಆಫ್ರಿಕಾ ವಿರುದ್ಧ ಗೆಲುವಿನತ್ತ ಕಿವಿಸ್
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace