ಯಾಹೂ! | ನನ್ನ ಯಾಹೂ! | ಮೇಲ್ | ಚಿತ್ರ
ಶೋಧ
 
   ಮುಖ ಪುಟ ಸಮಾಚಾರ ಆಟೋಟ
ವಿಶ್ವಕಪ್: ಆಫ್ರಿಕಾವನ್ನು ಮಣಿಸಿದ ಕಿವಿಸ್ ಸೆಮಿಫೈನಲ್ ಪ್ರವೇಶ
ಗ್ರೆನಡಾ (ಏಜೆನ್ಸಿ), ಭಾನುವಾರ, 15 ಏಪ್ರಿಲ್ 2007
AP
ಮ್ಯಾಕ್ ಮಿಲ್ಲನ್ ಅವರ ಆಲ್‌ರೌಂಡರ್ ಆಟ, ಸ್ಕಾಟ್ ಸ್ಟೈರಿಸ್ ಅವರ ಉಪಯುಕ್ತ 56 ರನ್‌ಗಳು ಮತ್ತು ನಾಯಕ ಸ್ಟಿಫನ್ ಫ್ಲೆಮಿಂಗ್ ಅವರ ಜವಾಬ್ದಾರಿಯುತ 50 ರನ್‌ಗಳು ಶನಿವಾರ ಪ್ರಬಲ ನ್ಯೂಜಿಲೆಂಡ್ ತಂಡ ವಿಶ್ವದ ಎರಡನೆಯ ಶ್ರೇಷ್ಠ ಕ್ರಿಕೆಟ್ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾದ ಪ್ರಬಲ ದಕ್ಷಿಣ ಆಫ್ರಿಕಾವನ್ನು ಪರಿಣಾಮಕಾರಿಯಾಗಿ ಸೋಲಿಸಿ ಸೆಮಿಫೈನಲ್ ಪ್ರವೇಶಿಸುವಲ್ಲಿ ಸಹಕಾರಿಯಾದವು.

ಒಂದೊಮ್ಮೆ ವಿಶ್ವದ ನಂಬರ್ ಒನ್ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕ್ರಿಕೆಟ್ ಜಗತ್ತಿನ ಪ್ರಮುಖ ತಂಡವಾದ ದಕ್ಷಿಣ ಆಫ್ರಿಕಾ ತಂಡ ಶನಿವಾರದ ತನ್ನ ಸುಪರ್ ಏಯ್ಟ್ ಹಂತದ ಪಂದ್ಯದಲ್ಲಿ ಎದುರಾಳಿಯಾದ ಕಿವಿಸ್ ತಂಡಕ್ಕೆ 5 ವಿಕೆಟ್‌ಗಳ ಅಂತರದಿಂದ ಮಣಿಯುವುದರ ಮೂಲಕ ಭಾರಿ ಮುಖಭಂಗ ಅನುಭವಿಸಿದೆ.

ಟಾಸ್ ಗೆದ್ದ ಕಿವಿಸ್ ಮೊದಲು ಆಫ್ರಿಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದು ಕಿವಿಸ್‌ಗೆ ವರದಾನವಾಗಿ ಪರಿಣಮಿಸಿತು, ತಂಡದ ಮೊತ್ತ ಕೇವಲ 3ರನ್‌ಗಳಾಗಿದ್ದಾಗ ನಾಯಕ್ ಸ್ಮಿತ್ ಮತ್ತೊಮ್ಮೆ 1ರನ್‌ ಗಳಿಸಿ ಬಾಂಡ್ ಬಾಲಿಂಗ್‌ನಲ್ಲಿ ಓರಾಮ್‌ಗೆ ಕ್ಯಾಚಿತ್ತು ಆಫ್ರಿಕಾಕ್ಕೆ ಹಿನ್ನೆಡೆ ಒದಗಿಸಿದರು.
ಇವರ ಹಿಂದಯೆ 3ನೆಯ ಓವರ್‌ನಲ್ಲಿ ಇನ್ನೊರ್ವ ಆರಂಭಿಕ ಆಟಗಾರ ಡಿ ವೆಲಿಯರ್ಸ್ ಖಾತೆ ತೆರೆಯುವ ಮುನ್ನವೆ ಔಟಾಗಿ ತಂಡಕ್ಕೆ ತೀವ್ರ ಹಿನ್ನೆಡೆ ಉಂಟಾಗುವಂತೆ ಮಾಡಿದರು.

ಕುಸಿತದ ಅಪಾಯವನ್ನರಿತ ಅನುಭವಿಗಳಾದ ಜಾಕಸ್ ಕಾಲಿಸ ಮತ್ತು ಹರ್ಷಲ್ ಗಿಬ್ಸ್ ಮೂರನೆಯ ವಿಕೆಟ್ ಪಾಲುದಾರಿಕೆಯಲ್ಲಿ ರಕ್ಷಣಾತ್ಮಕ ಮತ್ತು ಜವಾಬ್ದಾರಿಯುತ ಆಟವಾಡಿ ತಂಡದ ಆರಂಭಿಕ ಕುಸಿತವನ್ನು ತಡೆಯುವಲ್ಲಿ ಯಶಸ್ವಿಯಾದರು, ಇವರಿಬ್ಬರ ಪಾಲುದಾರಿಕೆಯಲ್ಲಿ ಮೂರನೆಯ ವಿಕೆಟ್‌ಗೆ 49ರನ್ ಹರಿದು ಬಂದವು.

22ರನ್ ಗಳಿಸಿದ್ದ ಜಾಕಸ್ ಕಾಲಿಸ್, ವೆಟ್ಟೊರಿ ಬಾಲಿಂಗ್‌ನಲ್ಲಿ ಬಾಂಡ್ ಅವರಿಗೆ ಔಟಾಗಿ ಪೆವಿಲಿಯನ್ ಸೇರಿದರೆ, ಗಿಬ್ಸ್ ಮಾತ್ರ ಛಲ ಬಿಡದೆ ಹೋರಾಡಿ ಅರ್ಧಶತಕ ದಾಟಿ 60ರನ್ ಬಾರಿಸಿ ಮ್ಯಾಕ್ ಮಿಲ್ಲನ್ ಅವರಿಗೆ ಬೌಲ್ಡ್ ಆದರು. ನಂತರ ಉತ್ತಮವಾಗಿ ಆಡುತ್ತಿದ್ದ ಆಸ್ಲೆ ಪ್ರಿನ್ಸ್ 37ರನ್ ಗಳಿಸಿ ಮ್ಯಾಕ್ ಮಿಲ್ಲನ್‌ರ ಎಸೆತದಲ್ಲಿ ಪಟೇಲ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು.

ನಂತರ ಶಾನ್ ಪೊಲಾಕ್ ಔಟಾಗದೆ 21ರನ್ ಮತ್ತು ಆಂಡ್ರೂ ಹಾಲ್ ಅವರ ಉಪಯುಕ್ತ 17 ರನ್ ಮತ್ತು ಪ್ರಾಂಕ್ಲಿನ್ ಅವರ ಜವಾಬ್ದಾರಿಯುತ 16ರನ‌್‌ಗಳು ತಂಡದ ಮೊತ್ತವನ್ನು 193ರನ್ ಗಳಿಸುವಂತೆ ಮಾಡಿತು.

ಕಿವಿಸ್ ಪರ ಮಿಂಚಿದ ಮ್ಯಾಕ್ ಮಿಲ್ಲನ್ 3ವಿಕೆಟ್ ಕಬಳಿಸಿ ಗಮನ ಸೆಳೆದರೆ, ಶೇನ್ ಬಾಂಡ್ ಅವರು 2ವಿಕೆಟ್ ಗಳಿಸಿದರು.

ಎದುರಾಳಿಗಳು ಒಡ್ಡಿದ ಅಲ್ಪ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭದಿಂದಲೂ ಎಚ್ಚರಿಕೆಯ ಆಟದೆಡೆಗೆ ಒತ್ತು ನೀಡುತ್ತಾ ಬಂದಿತ್ತು. ಮೊದಲ ವಿಕೆಟ್ ಪಾಲುದಾರಿಕೆಯಲ್ಲಿ 25ರನ್ ಹರಿದು ಬಂದವು. 16ರನ್ ಗಳಿಸಿದ್ದ ಪುಲ್ಟೊನ್ ನಿಟಿನಿ ಬಾಲಿಂಗ್‌ನಲ್ಲಿ ಹಾಲ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರೆ, ನಾಯಕ ಫ್ಲೆಮಿಂಗ್ ಮತ್ತು ಸ್ಟೈರಿಸ್ ಮೂರನೆಯ ವಿಕೆಟ್ ಪಾಲುದಾರಿಕೆಯಲ್ಲಿ 78ರನ್‌ಗಳನ್ನು ಗಳಿಸುವುದರ ಮೂಲಕ ತಂಡಕ್ಕೆ ಮೊದಲ ಬಾರಿಗೆ ಜಯದ ವಾಸನೆಯನ್ನು ಬಡಿಸಿದರು.

50ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕ ಫ್ಲೆಮಿಂಗ್ ಪೊಲಾಕ್ ಬಾಲಿಂಗ್‌ನಲ್ಲಿ ಬೌಚರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ನಂತರ ಸ್ಟೈರಿಸ್ ಅವರನ್ನು ಸೇರಿಕೊಂಡ ಮ್ಯಾಕ್ ಮಿಲ್ಲನ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟತ್ತಾ, ಸ್ಟೈರಿಸ್ ಅವರೊಂದಿಗೆ ನಾಲ್ಕನೆಯ ವಿಕೆಟ್ ಪಾಲುದಾರಿಕೆಯಲ್ಲಿ 58 ರನ್ ಪೇರಿಸಿ ತಂಡಕ್ಕೆ ಜಯ ಒಲಿಯುವಂತೆ ಮಾಡಿದ್ದರು. ಇದೇ ವೇಳೆ ಸಿಕ್ಸ್ ಬಾರಿಸಲು ಹೋಗಿ 56ರನ್ ಗಳಿಸಿದ್ದ ಸ್ಟೈರಿಸ್ ಔಟೌಗಿ ಪೆವಿಲಿಯನ್ ಸೇರಿದರು.

ನಂತರ ಆಗಮಿಸಿದ ಜೇಕೊಬ್ ಓರಾಮ್ ಮತ್ತು ಮೊದಲು ಬಾಲಿಂಗ್‌ನಲ್ಲಿ ಮೂರು ವಿಕೆಟ್ ಕಿತ್ತು ಆಫ್ರಿಕಾಕ್ಕೆ ಸಿಂಹಸ್ವಪ್ನರಾಗಿದ್ದ ಮ್ಯಾಕ್ ಮಿಲ್ಲನ್ ಬ್ಯಾಟಿಂಗ್‌ನಲ್ಲೂ ಮಿಂಚಿ 38 ರನ್ ಗಳಿಸುವ ಮೂಲಕ ಎದುರಾಳಿಗಳಿಂದ ಜಯವನ್ನು ಸಂಪೂರ್ಣ ಕಸಿದುಕೊಂಡರು.

ಅಂತಿಮವಾಗಿ ನ್ಯೂಜಿಲೆಂಡ್ ತಂಡ 48.2ಓವರ್‌ಗಳಲ್ಲಿ 5ವಿಕೆಟ್ ನಷ್ಟಕ್ಕೆ 196ರನ್ ಗಳಿಸಿ ಅರ್ಹ ಜಯ ಪಡೆಯಿತು.

ಸ್ಕೋರ್ ವಿವರ

ದಕ್ಷಿಣ ಆಫ್ರಿಕಾ-50ಓವರ್‌ಗಳಲ್ಲಿ 193/7
ಹರ್ಷಲ್ ಗಿಬ್ಸ್-60ರನ್
ಆಸ್ಲೆ ಪ್ರಿನ್ಸ್-37ರನ್
ಕಾಲಿಸ್ 22ರನ್

ನ್ಯೂಜಿಲೆಂಡ್- 48.2 ಓವರ್‌ಗಳಲ್ಲಿ 196/5
ಸ್ಕಾಟ್ ಸ್ಟೈರಿಸ್-56ರನ್
ಸ್ಟಿಫನ್ ಫ್ಲೆಮಿಂಗ್-50ರನ್
ಮ್ಯಾಕ್ ಮಿಲ್ಲನ್-ಔಟಾಗದೆ 38ರನ್

ಪಂದ್ಯ ಪುರುಷೋತ್ತಮ-ಮ್ಯಾಕ್ ಮಿಲ್ಲನ್ (ನ್ಯೂಜಿಲೆಂಡ್)
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ವಿಶ್ವಕಪ್: ಜಯದತ್ತ ಮುನ್ನುಗ್ಗುತ್ತಿರುವ ಕಿವಿಸ್
ವಿಶ್ವಕಪ್: ಆಫ್ರಿಕಾ ವಿರುದ್ಧ ಗೆಲುವಿನತ್ತ ಕಿವಿಸ್
ವಿಶ್ವಕಪ್: ಕಿವಿಸ್‌ ತಂಡಕ್ಕೆ ಫ್ಲೆಮಿಂಗ್‌ರಿಂದ ಉತ್ತಮ ಅಡಿಪಾಯ
ವಿಶ್ವಕಪ್: ಕಿವಿಸ್‌ನಿಂದ ಎಚ್ಚರಿಕೆಯ ಆಟ
ವಿಶ್ವಕಪ್: ಕಿವಿಸ್‌ಗೆ ಸಾಧಾರಣ ಸವಾಲು ನೀಡಿದ ಆಪ್ರಿಕಾ
ವಿಶ್ವಕಪ್: ದಕ್ಷಿಣ ಆಪ್ರಿಕಾದ 4 ವಿಕೆಟ್ ಪತನ
ಮನರಂಜನೆ
ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು!
ಮುಂದೆ ಓದಿ|ಮತ್ತಷ್ಟು...
ಆರೋಗ್ಯ
AP
 
ಲಿವರ್ ಕ್ಯಾನ್ಸರ್‌ ತಗ್ಗಿಸುವ ಕಾಫಿ
ಹೆಚ್ಚು ಕಾಫಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತನ್ನು ನಾವು ಕೇಳುತ್ತಲೇ ಬಂದಿದ್ದೇವೆ. ಆದರೆ ಕಾಫಿ...
ಗರ್ಭಧಾರಣಾ ತೂಕ ಕಳೆಯಲು ವಾಕಿಂಗ್ ಸಹಕಾರಿ
ವಯಸ್ಸು, ಒತ್ತಡ ಗರ್ಭಪಾತಕ್ಕೆ ಕಾರಣ
ಧರ್ಮ
ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ...
ಮುಂದೆ ಓದಿ|ಮತ್ತಷ್ಟು...
Marketplace