|
| ವಿಶ್ವಕಪ್: ಕಿವಿಸ್‌ಗೆ ಸಾಧಾರಣ ಸವಾಲು ನೀಡಿದ ಆಪ್ರಿಕಾ |
| ಗ್ರೆನಡಾ (ಏಜೆನ್ಸಿ), ಶನಿವಾರ, 14 ಏಪ್ರಿಲ್ 2007 | |
ವಿಶ್ವದ ನಂಬರ್ ಒನ್ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕ್ರಿಕೆಟ್ ಜಗತ್ತಿನ ಪ್ರಮುಖ ತಂಡವಾದ ದಕ್ಷಿಣ ಆಫ್ರಿಕಾ ತಂಡ ಶನಿವಾರದ ತನ್ನ ಸುಪರ್ ಏಯ್ಟ್ ಹಂತದ ಪಂದ್ಯದಲ್ಲಿ ಎದುರಾಳಿಯಾದ ಕಿವಿಸ್ ತಂಡಕ್ಕೆ ಕೇವಲ 194 ರನ್‌ಗಳ ಸಾಧಾರಣ ಮೊತ್ತದ ಸವಾಲನ್ನೊಡ್ಡಿದೆ.
ಟಾಸ್ ಗೆದ್ದ ಕಿವಿಸ್ ಮೊದಲು ಆಫ್ರಿಕಾ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದು ಕಿವಿಸ್‌ಗೆ ವರದಾನವಾಗಿ ಪರಿಣಮಿಸಿತು, ತಂಡದ ಮೊತ್ತ ಕೇವಲ 3ರನ್‌ಗಳಾಗಿದ್ದಾಗ ನಾಯಕ್ ಸ್ಮಿತ್ ಮತ್ತೊಮ್ಮೆ 1ರನ್ ಗಳಿಸಿ ಬಾಂಡ್ ಬಾಲಿಂಗ್‌ನಲ್ಲಿ ಓರಾಮ್‌ಗೆ ಕ್ಯಾಚಿತ್ತು ಆಫ್ರಿಕಾಕ್ಕೆ ಹಿನ್ನೆಡೆ ಒದಗಿಸಿದರು.
ಇವರ ಹಿಂದಯೆ 3ನೆಯ ಓವರ್‌ನಲ್ಲಿ ಇನ್ನೊರ್ವ ಆರಂಭಿಕ ಆಟಗಾರ ಡಿ ವೆಲಿಯರ್ಸ್ ಖಾತೆ ತೆರೆಯುವ ಮುನ್ನವೆ ಔಟಾಗಿ ತಂಡಕ್ಕೆ ತೀವ್ರ ಹಿನ್ನೆಡೆ ಉಂಟಾಗುವಂತೆ ಮಾಡಿದರು.
ಕುಸಿತದ ಅಪಾಯವನ್ನರಿತ ಅನುಭವಿಗಳಾದ ಜಾಕಸ್ ಕಾಲಿಸ ಮತ್ತು ಹರ್ಷಲ ಗಿಬ್ಸ್ ಮೂರನೆಯ ವಿಕೆಟ್ ಪಾಲುದಾರಿಕೆಯಲ್ಲಿ ರಕ್ಷಣಾತ್ಮಕ ಮತ್ತು ಜವಾಬ್ದಾರಿಯುತ ಆಟವಾಡಿ ತಂಡದ ಆರಂಭಿಕ ಕುಸಿತವನ್ನು ತಡೆಯುವಲ್ಲಿ ಯಶಸ್ವಿಯಾದರು, ಇವರಿಬ್ಬರ ಪಾಲುದಾರಿಕೆಯಲ್ಲಿ ಮೂರನೆಯ ವಿಕೆಟ್‌ಗೆ 49ರನ್ ಹರಿದು ಬಂದವು.
22ರನ್ ಗಳಿಸಿದ್ದ ಜಾಕಸ್ ಕಾಲಿಸ್, ವೆಟ್ಟೊರಿ ಬಾಲಿಂಗ್‌ನಲ್ಲಿ ಬಾಂಡ್ ಅವರಿಗೆ ಔಟಾಗಿ ಪೆವಿಲಿಯನ್ ಸೇರಿದರೆ, ಗಿಬ್ಸ್ ಮಾತ್ರ ಛಲ ಬಿಡದೆ ಹೋರಾಡಿ ಅರ್ಧಶತಕ ಗಳಿಸಿ 60ರನ್ ಬಾರಿಸಿ ಮ್ಯಾಕ್ ಮಿಲ್ಲನ್ ಅವರಿಗೆ ಬಾಲ್ಡ್ ಆದರು.
ನಂತರ ಉತ್ತಮವಾಗಿ ಆಡುತ್ತಿದ್ದ ಆಸ್ಲೆ ಪ್ರಿನ್ಸ್ 37ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗಮ್ಯಾಕ್ ಮಿಲ್ಲನ್‌ರ ಎಸೆತದಲ್ಲಿ ಪಟೇಲ್ ಅವರಿಗೆ ಕ್ಯಾಚಿತ್ತು ನಿರ್ಗಮಿಸಿದರು.
ನಂತರ ಶಾನ್ ಪೊಲಾಕ್ ಔಟಾಗದೆ 21ರನ್ ಮತ್ತು ಆಂಡ್ರೂ ಹಾಲ್ ಅವರ ಉಪಯುಕ್ತ 17 ರನ್ ಮತ್ತು ಪ್ರಾಂಕ್ಲಿನ್ ಅವರ ಜವಾಬ್ದಾರಿಯುತ 16ರನ‌್‌ಗಳು ತಂಡದ ಮೊತ್ತವನ್ನು 193ರನ್ ಗಳಿಸುವಂತೆ ಮಾಡಿತು.
ಕಿವಿಸ್ ಪರ ಮಿಂಚಿದ ಮ್ಯಾಕ್ ಮಿಲ್ಲನ್ 3ವಿಕೆಟ್ ಕಬಳಿಸಿ ಗಮನ ಸೆಳೆದರೆ, ಶೇನ್ ಬಾಂಡ್ ಅವರು 2ವಿಕೆಟ್ ಗಳಿಸಿದರು.
ಸ್ಕೋರ್ ವಿವರ ದಕ್ಷಿಣ ಆಫ್ರಿಕಾ-50ಓವರ್‌ಗಳಲ್ಲಿ 193/7 ಹರ್ಷಲ್ ಗಿಬ್ಸ್-60ರನ್ ಆಸ್ಲೆ ಪ್ರಿನ್ಸ್-37ರನ್ ಕಾಲಿಸ್ 22ರನ್
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ಚಿತ್ರ ಸುದ್ದಿ - ಯೋಗರಾಜ ಭಟ್ಟರು ಸುರಿಸಿರುವ ಮುಂಗಾರು ಮಳೆ ಜಯಭೇರಿ ಭಾರಿಸಿದೆ. ಈ ಚಿತ್ರ ನಿರ್ಮಾಪಕ ಕೃಷ್ಣಪ್ಪ ಅವರಿಗೆ ಕಾಂಚಾಣದ ಮಳೆಯನ್ನು ತಂದುಕೊಟ್ಟಿದೆ. ಕಾಮಿಡಿ ಟೈಂ ಗಣೇಶ್ ಅದೃಷ್ಟ ಖುಲಾಯಿಸಿದೆ. ಒಟ್ಟಾರೆ ರಾಜ್ಯದೆಲ್ಲೆಡೆ ಈಗ ಮಳೆಗೆ ಸೆಂಚುರಿ ರಂಗು. ಚಿತ್ರಪ್ರೇಮಿಗಳಿಗೆ ಮುಂಗಾರು ಮಳೆಯ ಹಾಡಿನದೇ ಗುಂಗು! |
| |
|
|
|
|
 | | AP |
| | |
| |
|
|
|
|
|
| ಧಾರ್ಮಿಕ ಲೇಖನ - ಒಮ್ಮೆ ದಶರಥನು ಬೆಳದಿಂಗಳಿನಲ್ಲಿ ತನ್ನ ಬೇಟೆಯೂಡುವ ತುಡಿತವನ್ನು ತಣಿಸುವ ಸಲುವಾಗಿ ಕಾಡಿಗೆ... |
| |
|
|
|
|
|
|
|