ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಚಿತ್ರದುರ್ಗ: ಎತ್ತಿನಗಾಡಿ ಹಳ್ಳಕ್ಕೆ ಬಿದ್ದು 19ಸಾವು
ಬೆಂಗಳೂರು, ಬುಧವಾರ, 20 ಮೇ 2009   ( 18:17 IST )
ಸುಮಾರು 28ಮಂದಿ ಮದುವೆ ಸಮಾರಂಭ ಮುಗಿಸಿಎತ್ತಿನ ಬಂಡಿಯಲ್ಲಿ ಊರಿಗೆ ವಾಪಸಾಗುತ್ತಿದ್ದ ವೇಳೆ ತುಂಬಿಹರಿಯುತ್ತಿರುವ ಹಳ್ಳಕ್ಕೆ ಬಿದ್ದು 19ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ಚಿತ್ರದುರ್ಗದ ಮಾಚೇನಹಳ್ಳಿ ಸಮೀಪದ ರಾಂಪುರದಲ್ಲಿ ನಡೆದಿದೆ.

ಮಂಗಳವಾರ ಮದುವೆ ಸಮಾರಂಭವನ್ನು ಮುಗಿಸಿ, ಇಂದು ಎತ್ತಿನಗಾಡಿಯಲ್ಲಿ ಊರಿಗೆ ಮರಳುತ್ತಿದ್ದ ವೇಳೆ ರಾಂಪುರದ ಹಗರಿಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಎತ್ತಿನಬಂಡಿಯಲ್ಲಿದ್ದ ಹಲವು ಮಂದಿ ನೀರಲ್ಲಿ ಮುಳುಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈಗಾಗಲೇ 19ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ. ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮೃತಪಟ್ಟವರೆಲ್ಲ ವೆಂಕಟಾಪುರ ಗ್ರಾಮಕ್ಕೆ ಸೇರಿದವರಾಗಿದ್ದು, ಇದರೆಲ್ಲ ಬಹುತೇಕ ಮಕ್ಕಳು, ಹೆಂಗಸರೇ ಸೇರಿದ್ದು, ಘಟನಾ ಸ್ಥಳದಲ್ಲಿ ಮೃತ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.

ಮೃತಪಟ್ಟವರಲ್ಲಿ ವೆಂಕಟಾಪುರದ ಶ್ಯಾಮಲಾ, ಲಕ್ಷ್ಮಿ, ತಿಪ್ಪೇಶ್, ಶಾರದಾ, ಸ್ವಪ್ನಾ, ನವೀನ, ಆಂಜನೇಯಪ್ಪ, ಜೈರಾಮ್, ಮಹಾಲಕ್ಷ್ಮಿ, ಪದ್ಮ, ರೇವಕಲ್ಲಪ್ಪ, ರುದ್ರಣ್ಣ, ಅಂಜನಪ್ಪ, ಬಸವರಾಜು, ಹೊನ್ನೂರಮ್ಮ, ರುದ್ರಣ್ಣ, ಕೋಲಾರಪ್ಪ ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಶಿವರಾಮ ರೆಡ್ಡಿ, ತಹಸೀಲ್ದಾರ್ ಭೇಟಿ ನೀಡಿದ್ದಾರೆ. ಶವಗಳ ಹುಡುಕಾಟ ಮತ್ತು ಮೇಲಕ್ಕೆತ್ತುವಲ್ಲಿ ಸ್ಥಳೀಯರ ನೆರವಿನಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಬೀದರ್ ಉಪಚುನಾವಣೆ: ಮರು ಮತಎಣಿಕೆಗೆ ಬಿಜೆಪಿ ಆಗ್ರಹ
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಅತೀ ಆತ್ಮವಿಶ್ವಾಸವೇ ಸೋಲಿಗೆ ಕಾರಣ: ಸಿದ್ದು
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಕುಮಾರಸ್ವಾಮಿ ಸಚಿವ ಸ್ಥಾನದ ಕನಸು ನನಸಾಗದು
ಗ್ರಹ ಗತಿ
ದೈನಿಕ - ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ನಿಮ್ಮ ವ್ಯವಹಾರ ಚಟುವಟಿಕೆಗಳು ಕೂಡ ಸರಾಸರಿ ವೇಗದಲ್ಲಿ ಕಾರ್ಯನಿರ್ವಹಿಸಲಿವೆ. ವೈವಾಹಿಕ ವಿಷಯಗಳಿಂದ ಸಂತಸ ಲಭಿಸಲಿದೆ. ಆರೋಗ್ಯ ಯಾವುದೇ ಚಿಂತೆಯ ವಿಷಯವಾಗದು.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕಾಫಿ ಬೆಳೆಗಾರರ ಪ್ಯಾಕೇಜ್‌ಗೆ ಆದ್ಯತೆ: ಚಂದ್ರೇಗೌಡ
ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಕೇಂದ್ರ ಸರ್ಕಾರದ ಮುಂದಿಡುವ ಕಾಫಿ ಪ್ಯಾಕೇಜನ್ನು ತಕ್ಷಣ ಜಾರಿಗೆ ತರುವಂತೆ ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ. ಚಂದ್ರೇಗೌಡ
ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್
ಬಿಜೆಪಿ ಕತೆ ಏನಾಗುತ್ತೆ ಅಂತ ನೋಡಿ: ಸಿದ್ದರಾಮಯ್ಯ
ಮನರಂಜನೆ
ಚಿತ್ರ ಸುದ್ದಿ - ಕನ್ನಡದಲ್ಲಿ ಈ ವಾರ ಸ್ಟಾರ್ ವಾರ್. ದೊಡ್ಡ ನಟರ ಎರಡು ಚಿತ್ರಗಳು ಒಟ್ಟೊಟ್ಟಿಗೆ ಬಿಡುಗಡೆಯಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರೇಕ್ಷಕರ ಪ್ರತಿಕ್ರಿಯೆ ಯಾವ ಚಿತ್ರಕ್ಕೆ ಹೇಗಿರುತ್ತದೆ ಎಂಬುದು
ಮುಂದೆ ಓದಿ|ಮತ್ತಷ್ಟು...