ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಚಿತ್ರ ಪ್ರದರ್ಶನ ಸಮಯದಲ್ಲಿ ಬದಲಾವಣೆ
ಬೆಂಗಳೂರು, 20 ಮೇ 2009   ( 11:33 IST )
ಬೆಂಗಳೂರಿನಲ್ಲಿ ಚಲನಚಿತ್ರ ಪ್ರದರ್ಶನ ವೇಳೆ ಬದಲಿಸುವಂತೆ ಒತ್ತಾಯಿಸುತ್ತಿದ್ದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಬಹು ದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಪ್ರದರ್ಶದ ಹೊಸ ವೇಳೆ ಮೇ 22 ರಿಂದಲೇ ಜಾರಿಗೆ ಬರಲಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ವಿ.ಎಸ್ ಆಚಾರ್ಯ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಚಲನಚಿತ್ರ ಹಾಗೂ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಹಾಗೂ ಇತರೆ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಚಲನಚಿತ್ರ ಸಮಯ ಬದಲಾವಣೆ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಿದರು.

ಈ ವೇಳಾ ಪಟ್ಟಿ ನಗರದ ಎಲ್ಲಾ ಚಿತ್ರಮಂದಿರಗಳಿಗೂ ಅನ್ವಯವಾಗಲಿದೆ. ಬೆಳಗಿನ ಚಲನಚಿತ್ರ ಪ್ರದರ್ಶನ 11.15 ಕ್ಕೆ, ಮಧ್ಯಾಹ್ನ 2.30 ಕ್ಕೆ, ಸಾಯಂಕಾಲ 6.15ಕ್ಕೆ ಹಾಗೂ ರಾತ್ರಿ ಪ್ರದರ್ಶನ 8.30ಕ್ಕೆ ಆರಂಭವಾಗುತ್ತದೆ ಎಂದರು. ಒಂದು ವೇಳೆ ಸಿನಿಮಾ 3 ಗಂಟೆಗಿಂತ ಹೆಚ್ಚು ಸಮಯ ಇದ್ದಲ್ಲಿ ನಗರದ ಪೊಲೀಸ್ ಆಯುಕ್ತರಿಂದ ಅನುಮತಿ ಪಡೆಯತಕ್ಕದ್ದು ಎಂದು ಹೇಳಿದರು.ಬಾರ್ ಹಾಗೂ ರೆಸ್ಟೌರೆಂಟ್‌ಗಳನ್ನು ಹೊರತುಪಡಿಸಿ ಹೊಟೇಲ್‌ಗಳಿಗೆ 12 ಗಂಟೆ ವರೆಗೆ ಅನುಮತಿ ನೀಡಲಾಗಿದೆ ಎಂದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಐಸಿಸಿಗೆ ಮತ್ತೊಂದು ನೊಟೀಸ್ ನೀಡಲು ಪಾಕ್ ನಿರ್ಧಾರ
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮುಖ್ಯಮಂತ್ರಿ ಹೇಳಿದರೆ ವಿಷ ಕುಡಿಯುವೆ: ಕೃಷ್ಣಯ್ಯ ಶೆಟ್ಟಿ
ಪೇಯಿಂಗ್ ಗೆಸ್ಟ್ ಕಳ್ಳಿ ಪೊಲೀಸರ ಬಲೆಗೆ
ಕುಮಾರಸ್ವಾಮಿ ಸಚಿವ ಸ್ಥಾನಕ್ಕೆ ಸಿದ್ದು ತೀವ್ರ ವಿರೋಧ
ಸರ್ಕಾರ ಅತಂತ್ರಗೊಳಿಸುವ ಪ್ರತಿಪಕ್ಷಗಳ ಹಗಲುಗನಸು
ಗ್ರಹ ಗತಿ
ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ದೇವೇಗೌಡರ 77ನೇ ಹುಟ್ಟು ಹಬ್ಬ ಆಚರಣೆ
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ..
ಜೆಡಿಎಸ್ ಕಾಂಗ್ರೆಸ್ ಜತೆ ವಿಲೀನವಾಗಲಿ: ಡಿವಿಎಸ್
ರಾಜ್ಯವನ್ನು ನಿರ್ಲಕ್ಷಿಸಿದರೆ ಎಚ್ಚರ!: ಯುಪಿಎಗೆ ಸವಾಲ್
ಮನರಂಜನೆ
ಚಿತ್ರ ಸುದ್ದಿ - ಖೇಣಿ ಅವರಿಗೂ ಚಿತ್ರರಂಗಕ್ಕೂ ಒಂದು ಸಂಬಂಧ ಇದ್ದೇ ಇರುತ್ತದೆ. ಉದ್ಯಮಿಯಾದರೂ ಅವರಿಗೆ ಬಣ್ಣದ ಲೋಕದ ಬಗ್ಗೆ ಸ್ವಲ್ಪ ಕ್ರೇಜ್ ಹೆಚ್ಚೇ ಎನ್ನಬಹುದು. ಅವರು ಎರಡು ಮೂರು ಚಿತ್ರಗಳಲ್ಲಿ ಕೆಲವು ಪಾತ್ರಗಳನ್ನು
ಮುಂದೆ ಓದಿ|ಮತ್ತಷ್ಟು...