|
| ಪೇಯಿಂಗ್ ಗೆಸ್ಟ್ ಕಳ್ಳಿ ಪೊಲೀಸರ ಬಲೆಗೆ |
| ಬೆಂಗಳೂರು, ಮಂಗಳವಾರ, 19 ಮೇ 2009 ( 16:38 IST ) | |
ಪೇಯಿಂಗ್ ಗೆಸ್ಟ್ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಸಾಫ್ಟ್‌ವೇರ್ ಪದವೀಧರೆ ಕೊನೆಗೂ ಹಳೆ ವಿಮಾನ ನಿಲ್ದಾಣ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಈಕೆ ಹೇಳೋಕೆ ಮಾತ್ರ ಸಾಫ್ಟ್‌ವೇರ್ ಪದವೀಧರೆ. ಆದರೆ ಮಾಡೋ ಕೆಲಸ ಮಾತ್ರ ಕಳ್ಳತನ. ಕಳೆದ 18 ತಿಂಗಳಿನಿಂದ ಈಕೆ 28 ಪಿಜಿಗಳಲ್ಲಿ ವಾಸಿಸಿದ್ದಾಳೆ. ಇವಳು ಕದ್ದ ಹಣದ ಮೊತ್ತ ಬರೋಬರಿ 9 ಲಕ್ಷ ರೂಪಾಯಿ.
ತ್ರಿಪುರ ಜಿಲ್ಲೆಯ ಅಮನಸಮುದ್ರಮ್ ಮೂಲದ ದೇವಿ ಮಹಾಲಕ್ಷಿ ಕೆಲಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಳು. ಕೆಲಸ ಸಿಗದ ಕಾರಣ ಕಳ್ಳತನಕ್ಕೆ ಕೈ ಹಾಕಿದ್ದಾಗಿ ಒಪ್ಪಿಕೊಂಡಿದ್ದಾಳೆ. ಕೊಠಡಿಯಲ್ಲಿ ಸಹಪಾಠಿಗಳೊಂದಿಗೆ ಸ್ನೇಹ ಬೆಳೆಸಿ ಅವರಿಲ್ಲದ ಸಮಯ ನೋಡಿಕೊಂಡು ಹಣ ಹಾಗೂ ಇತರ ವಸ್ತುಗಳನ್ನು ಕಳವು ಮಾಡಿ ಪರಾರಿಯಾಗುತ್ತಿದ್ದಳು.
ಪೇಯಿಂಗ್ ಗೆಸ್ಟ್‌ನಳಲ್ಲಿ ಸಹಪಾಠಿಗಳ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಹಾಗೂ ಎಟಿಎಂ ಕಾರ್ಡ್‌ಗಳನ್ನು ಕಳವು ಮಾಡಿ ಅದನ್ನು ಐಷಾರಾಮಿ ವಸ್ತುಗಳನ್ನು ಕೊಳ್ಳುವ ವೇಳೆ ಬಳಸುತ್ತಿದ್ದಳು. ಆದರೆ ಅವಳ ಕಳ್ಳತನದ ಬಗ್ಗೆ ಯಾರಿಗೂ ಅರಿವಿರಲಿಲ್ಲ.
ವಿಮಾನ ನಿಲ್ದಾಣ, ಎಚ್ಎಎಲ್, ಕೆ.ಆರ್.ಪುರ, ಬೈಯಪ್ಪನ ಹಳ್ಳಿ, ಜೀವನಭೀಮಾನಗರ, ಇಂದಿರಾನಗರ, ಕೋರಮಂಗಲ, ಹಲಸೂರು, ಮಡಿವಾಳ, ಮೇಕೋ ಲೇಔಟ್, ತಿಲಕ ನಗರ, ಜಯನಗರ ಜೆಪಿನಗರ, ರಾಮಮೂರ್ತಿನಗರ ಹೀಗೆ ಇವಳು ಕಳವು ಮಾಡದ ಏರಿಯಾಗಳಿಲ್ಲ. ಈ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿರುವ 28 ಪ್ರಕರಣಗಳಲ್ಲಿ ಈಕೆ ಭಾಗಿಯಾಗಿದ್ದಾಳೆ. ಅಷ್ಟೇ ಅಲ್ಲ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|