|
| ಭಾಷಾ ವಿವಾದ: ಕಾಗೇರಿ ವಿರುದ್ಧ ನ್ಯಾಯಾಂಗ ನಿಂದನೆ ದೂರು |
| ಬೆಂಗಳೂರು, ಮಂಗಳವಾರ, 19 ಮೇ 2009 ( 12:30 IST ) | |
'ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕು ಎಂಬ ನಿಲುವಿಗೆ ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲು ಖಾಸಗಿ ಶಾಲೆಗಳಿಗೆ ಅವಕಾಶ ನೀಡುವುದಿಲ್ಲ'ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕಳೆದ ಗುರುವಾರ ಹೇಳಿಕೆ ನೀಡಿರುವುದರ ವಿರುದ್ಧ ನಗರದ ಖಾಸಗಿ ಶಾಲೆಯೊಂದು ಕೋರ್ಟ್‌ಗೆ ಸೋಮವಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ನಗರದ ಈಜಿಪುರದ ಮಾಡರ್ನ್ ಇಂಗ್ಲಿಷ್ ಸ್ಕೂಲ್‌ನ ಮುಖ್ಯಸ್ಥರಾಗಿರುವ ಎಂ.ಎಸ್.ಖಾನ್ ಅವರು ಕಾಗೇರಿ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ಅನುಮತಿ ಕೋರಿ ಅಡ್ವೊಕೇಟ್ ಜನರಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಖಾಸಗಿ ಶಾಲೆಗಳಿಗೆ ಮಾತೃಭಾಷೆ ಕಡ್ಡಾಯ ಮಾಡುವುದು ಸರಿಯಲ್ಲ ಎಂದಿರುವ ಹೈಕೋರ್ಟ್ ಪೂರ್ಣಪೀಠದ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿಗೆ ಸುಪ್ರೀಂಕೋರ್ಟ್ ತಡೆ ನೀಡದ ಹಿನ್ನೆಲೆಯಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಕೋರಿರುವ ತಮ್ಮ ಮನವಿಯನ್ನು ತಿರಸ್ಕರಿಸುವ ಹಕ್ಕು ಸರ್ಕಾರಕ್ಕೆ ಇಲ್ಲ ಎಂದು ಅರ್ಜಿಯಲ್ಲಿ ದೂರಲಾಗಿದೆ.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ವಿವಾದಗಳಿಗೆ ಚಾಲನೆ, ಪಿತೃ ನೆರವಿನಿಂದ ಆರ್ಥಿಕ ಸಂಕಷ್ಟ ನಿವಾರಣೆಗೊಂಡು ನೂತನ ಯೋಜನೆಗಳನ್ನು ಹಾಕಿಕೊಳ್ಳುವಿರಿ. ಕುಟುಂಬ ಮತ್ತು ಕಚೇರಿ ಎರಡನ್ನೂ ಚೆನ್ನಾಗಿಯೇ ನಿಭಾಯಿಸುತ್ತಿದ್ದೀರಿ. ಆದರೂ ಈಗ ಏನು ಬೇಕಾದರೂ ಮಾಡು ಎಂದು ಸ್ವತಂತ್ರವಾಗಿ ನಿಮ್ಮನ್ನು ಬಿಟ್ಟದ್ದು ನಿಮಗೆ ಖುಷಿಯಾಗುತ್ತದೆ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ |
| |
|
|
|
|
|
|