ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕೇಂದ್ರ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಕೆ.ಎಚ್.ಮುನಿಯಪ್ಪ
ಬೆಂಗಳೂರು, 18 ಮೇ 2009   ( 16:25 IST )
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಸತತ 6ನೇ ಬಾರಿಗೆ ಆಯ್ಕೆಯಾಗಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಕೆ.ಎಚ್.ಮುನಿಯಪ್ಪ ಕೇಂದ್ರ ಸಚಿವ ಸ್ಥಾನದತ್ತ ದೃಷ್ಟಿ ನೆಟ್ಟಿದ್ದಾರೆ.

1991 ರಿಂದ ಸತತವಾಗಿ ಒಂದೇ ಕ್ಷೇತ್ರದಿಂದ 6 ಸಲ ಗೆದ್ದಿರುವ ಮುನಿಯಪ್ಪ ಅವರು ಪ್ರಧಾನಿ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ರಾಜ್ಯ ಭೂ ಸಾರಿಗೆ ಸಚಿವರಾಗಿದ್ದರು. ಮಂತ್ರಿಯಾಗಿ ಕೇಂದ್ರದಿಂದ ರಾಜ್ಯಕ್ಕೆ ಸುಮಾರು 5 ಸಾವಿರ ಕೋಟಿ ರೂ.ಗಳನ್ನು ರಸ್ತೆ ಅಭಿವೃದ್ದಿಗಾಗಿ ತಂದಿದ್ದಾರೆ.

ಜತೆಗೆ 650 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥವಾಗಿ ಅಭಿವೃದ್ದಿ ಆಗುತ್ತಿದ್ದರೆ ಇನ್ನೂ 60 ಕಿ.ಮೀ ಉದ್ದದ ಹೆದ್ದಾರಿ ಕೆಲಸಕ್ಕೆ ಸಮೀಕ್ಷೆ ನಡೆದಿದೆ. ಜತೆಗೆ ಚಿಕ್ಕಬಳ್ಳಾಪುರ-ಕೋಲಾರ-ಚೆನ್ನೈ ರಸ್ತೆ ಹೆದ್ದಾರಿ ಕೆಲಸ ಕೈಗೆತ್ತಿಕೊಳ್ಳುವ ಮೂಲಕ ತಾವು ಪ್ರತಿನಿಧಿಸುವ ಜಿಲ್ಲೆಗೆ ತಮ್ಮ ಕಾಲದಲ್ಲಿ ಮಹತ್ವದ ಯೋಜನೆ ನೀಡಿದ್ದಾರೆ.

ಜಿಲ್ಲೆ ಮತ್ತು ರಾಜ್ಯಕ್ಕೆ ಇನ್ನೂ ಹೆಚ್ಚಿನ ಕೆಲಸಗಳು ಆಗಬೇಕಾದರೆ ಕೇಂದ್ರ ಸಚಿವ ಸ್ಥಾನದಲ್ಲಿ ಮುಂದುವರಿಯಬೇಕು ಎಂಬುದು ಅವರ ಅಭಿಲಾಷೆ. ಆದರೆ ಈ ಬಾರಿ ರಾಜ್ಯದಿಂದ ಮೊಯ್ಲಿ, ಧರಂಸಿಂಗ್, ಮಲ್ಲಿಕಾರ್ಜುನ್ ಖರ್ಗೆ, ವಿಶ್ವನಾಥ್ ಸೇರಿದಂತೆ ಘಟಾನುಘಟಿಗಳೇ ಇರುವುದರಿಂದ ತಮಗೆ ಸಚಿವ ಸ್ಥಾನ ದೊರೆಯುವುದೇ ಎಂಬುದನ್ನು ಕಾದು ನೋಡಬೇಕು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ರಾಮನಗರ ಕ್ಷೇತ್ರದಿಂದ ಭವಾನಿರೇವಣ್ಣ ಕಣಕ್ಕೆ?
ಕಾಂಗ್ರೆಸ್‌‌ಗೆ ನೆರವಾಗದ 'ಜೆಡಿಎಸ್ ಪರೋಕ್ಷ ಬೆಂಬಲ'
ಸೋಲಿಗೆ ಕಾರಣ ಅಸಮರ್ಪಕ ಟಿಕೆಟ್ ಹಂಚಿಕೆ: ದೇಶಪಾಂಡೆ
ತಲೆಕೆಳಗಾದ ಲೆಕ್ಕ-ಮೌನಕ್ಕೆ ಶರಣಾದ ದೇವೇಗೌಡ
ಬಿಜೆಪಿಯಿಂದ ವರ್ತೂರ್ ಪ್ರಕಾಶ್‌ ತಲೆದಂಡ?
ಖರ್ಗೆ-ಮೊಯ್ಲಿ ನಡುವೆ 'ಮಂತ್ರಿಗಿರಿ' ಪೈಪೋಟಿ!
ಗ್ರಹ ಗತಿ
ದೈನಿಕ - ನಿಮ್ಮ ಕುಂಡಲಿಯಲ್ಲೊಂದು ರಹಸ್ಯವಾದ, ನೀತಿಯುಕ್ತವಾದ ಬಲು ಅಪರೂಪದ ಗ್ರಹವಿನ್ಯಾಸ ಕಾಣಿಸಿಕೊಂಡಿದೆ. ನಿಮ್ಮನ್ಯಾರೋ ಬಳಿಸಿಕೊಳ್ಳುವುದು ಖಚಿತ. ಅದರಲ್ಲೂ ಸಂತೋಷ ಕಾಣುವವರಿರಬಹುದು. ಕುಟುಂಬ ವ್ಯವಹಾರಗಳಲ್ಲಿ ಗಡಸು ನಿರ್ಧಾರ ಕೈಗೊಳ್ಳುವುದರಿಂದ ಕುಟುಂಬ ವರ್ಗದ ಮೇಲೆ ಬಲವಾದ ಹಿಡಿತ ಹೊಂದುವಿರಿ. ಔತಣ ಕೂಟಗಳಿಗೆ ಆಮಂತ್ರಣ, ವಾಹನ ವಹಿವಾಟುಗಳಲ್ಲಿ ಹಿರಿಯರ ಪ್ರಶಂಸೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಎಚ್‌ಡಿಕೆ, ವಿಶ್ವನಾಥ್, ಜೆ.ಶಾಂತ ಜಯಭೇರಿ
ರಾಜ್ಯ ಲೋಕಸಭಾ ಮತಸಮರದಲ್ಲಿ ಕುತೂಹಲ ಕೆರಳಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ...
ತಲೆಕೆಳಗಾದ ನಿರೀಕ್ಷೆ: ಅನಂತಕುಮಾರ್ ಮುನ್ನಡೆ
ರಾಜ್ಯಾದ್ಯಂತ ಬಿಜೆಪಿ ಗೆಲುವಿನ ಸಂಭ್ರಮಾಚರಣೆ
ಮನರಂಜನೆ
ಚಿತ್ರ ಸುದ್ದಿ - ಪ್ರತಿ ಬಾರಿ ದೆಹಲಿಯಲ್ಲಿ ನಡೆಯುವ ಹ್ಯಾಬಿಟ್ಯಾಟ್ ಚಲನಚಿತ್ರೋತ್ಸವದಲ್ಲಿ ಬಿ ಸುರೇಶ್ ಹಾಗೂ ಶೈಲಜ ನಿರ್ಮಿಸಿ, ಅಭಯಸಿಂಹ ನಿರ್ದೇಶನ ಮಾಡಿರುವ 'ಗುಬ್ಬಚ್ಚಿಗಳು' ಚಿತ್ರ ಪ್ರದರ್ಶಗೊಳ್ಳಲಿದೆ. ಚಿತ್ರ ಬೆಂಗಳೂರಿನಲ್ಲಿ
ಮುಂದೆ ಓದಿ|ಮತ್ತಷ್ಟು...