ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಶೃಂಗೇರಿ: ಐವರು ನಕ್ಸಲ್ ಬೆಂಬಲಿಗರ ಬಂಧನ
ಶೃಂಗೇರಿ, ಬುಧವಾರ, 6 ಮೇ 2009   ( 16:55 IST )
ಕಳೆದ 2 ವರ್ಷಗಳಲ್ಲಿ ಈ ಭಾಗದಲ್ಲಿ ನಕ್ಸಲೀಯರು ನಡೆಸಿದ ವಿವಿಧ ವಿಧ್ವಂಸಕ ಕೃತ್ಯಗಳಲ್ಲಿ ನಕ್ಸಲರೊಂದಿಗೆ ಶಾಮೀಲಾಗಿ ನೆರವು ನೀಡಿದ್ದ ಆರೋಪ ಹೊತ್ತ 5 ಮಂದಿ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.

ಇವರು ಮಾಣಿಕ್ಯ ಬೆಟ್ಟದ ನಿರೀಕ್ಷಣಾ ಗೋಪುರ, ತನಿಕೋಡು ಗೇಟ್ ಕಚೇರಿ ಸ್ಫೋಟ, ಬಿದರಗೋಡಿನ ಅರುಣ್ ಅವರ ಮನೆ ಮೇಲೆನ ದಾಳಿ, ಕಿಗ್ಗದ ಕಿರಣ್ ಶೆಟ್ಟಿ ಅವರ ಬೈಕಿಗೆ ಬೆಂಕಿ ಇಟ್ಟ ಪ್ರಕರಣಗಳಲ್ಲಿ ಇವರೆಲ್ಲ ಪಾಲ್ಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ ಇಲಾಖೆಯ ಮಾಹಿತಿಯನ್ನು ನಕ್ಸಲರಿಗೆ ತಲುಪಿಸಿ ನಕ್ಸಲರ ಕಾರ್ಯಾಚರಣೆಗೆ ನೆರವು ನೀಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ. ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ಮಾಡುತ್ತಿದ್ದ ಅಣ್ಣಪ್ಪ, ಬೆಜ್ಜವಳ್ಳಿಯ ಅನಂತ, ತಾರೊಳ್ಳಿ ಕೂಡಿಗೆಯ ಗುರುಮೂರ್ತಿ, ಮೇಗೂರಿನ ಕಾಡೇಗೌಡ್ಲು ಹಾಗೂ ಕಲ್ಲುಗಡ್ಡೆಯ ಸತೀಶ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಹಾವೇರಿ ಗೋಲಿಬಾರ್ ಪ್ರಕರಣ: ಎಚ್.ಕೆ.ಪಾಟೀಲ್‌ಗೆ ಸಮನ್ಸ್
ರಾಜ್ಯದ ಆದಾಯದಲ್ಲಿ ಕೊರತೆ: ಸಿಎಂ
ಶಾಸಕಿ ಅನಿತಾ ರೈತರ ನಡುವೆ ಬಿರುಸಿನ ವಾಗ್ವಾದ
ಅರ್ಕಾವತಿ ವಿವಾದ: ರೈತರಿಬ್ಬರು ಆತ್ಮಹತ್ಯೆಗೆ ಪ್ರಯತ್ನ
ಆಯುಷ್ ನಿರ್ದೇಶಕರ ವಿರುದ್ಧದ ಪ್ರಕರಣಕ್ಕೆ ತಿರುವು
ವೈದ್ಯರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಇಲ್ಲ: ಹೈಕೋರ್ಟ್
ಗ್ರಹ ಗತಿ
ದೈನಿಕ - ಮೇಧಾವಿಗಳು ನಿಮ್ಮ ಸುಪ್ತ ಪ್ರತಿಭೆಯನ್ನು ಗುರುತಿಸಿ ನಿಮ್ಮಲ್ಲಿ ಆತ್ಮಸ್ಥೈರ್ಯ ತುಂಬುವರು. ವಾಹನ ವಹಿವಾಟುಗಳಲ್ಲಿ ಹಿತ ಚಿಂತಕರ ಸಲಹೆಗಳು, ಸಹೋದರರಿಗೆ ಸತ್ವ ಪರೀಕ್ಷೆ, ವಿದ್ಯಾರ್ಥಿಗಳಿಗೆ ಅಧ್ಯಯನಾಸಕ್ತಿ. ಏನೇ ಆಗಲಿ ಸಂಬಂಧಿಕರಿಗೆ ನಿಮ್ಮಿಂದ ಎಷ್ಟಾಗುತ್ತದೋ ಅಷ್ಟು ಬೆಂಬಲ ನೀಡಿ. ಮುಂದಿನ ವಾರಾಂತ್ಯದಲ್ಲಿ ಭರ್ಜರಿ ಬೆಳವಣಿಗೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಡಾ.ವೀರೇಂದ್ರ ಹೆಗ್ಗಡೆಗೆ 'ಬಸವಶ್ರೀ' ಪ್ರಶಸ್ತಿ
ಬಸವವೇದಿಕೆ ವರ್ಷಂಪ್ರತಿ ನೀಡುವ ಬಸವಶ್ರೀ ಮತ್ತು ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಈ ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ...
ನೀತಿ ಸಂಹಿತೆ: ಡಿಕೆಶಿ ವಿರುದ್ಧ ಪ್ರಕರಣ ದಾಖಲು
ಗ್ರಾಮಸ್ಥರಿಗೆ ನೋಟಿಸ್: ಅಧಿಕಾರಿಗಳಿಗೆ ಥಳಿತ
ಮನರಂಜನೆ
ಚಿತ್ರ ಸುದ್ದಿ - ನಿರ್ಮಾಪಕ ಕೆ.ಮಂಜು ಡಾನ್ ಆಗಲು ಹೊರಟಿದ್ದಾರೆ. ಇದೇನಪ್ಪ! ಚಿತ್ರ ನಿರ್ಮಾಪಕರಾಗಿದವರು ಈಗ ರೌಡಿಸಂಗೆ ಕೈ ಹಾಕಲು ಹೊರಟಿದ್ದಾರಾ? ಅಂತ ಗಾಬರಿಯಾಗಬೇಡಿ. ಹಾಗೇನು ಇಲ್ಲ. ಇವರು ಚಿತ್ರವೊಂದರಲ್ಲಿ ಡಾನ್ ಪಾತ್ರ ಮಾಡುತ್ತಿದ್ದಾರೆ.
ಮುಂದೆ ಓದಿ|ಮತ್ತಷ್ಟು...