|
| ಆಡ್ವಾಣಿ ಪ್ರಧಾನಿಯಾದರೆ ಕೈಗಳು ಉಳಿಯಲ್ಲ: ಬಂಗಾರಪ್ಪ |
| ಶನಿವಾರ, 18 ಏಪ್ರಿಲ್ 2009 ( 13:17 IST ) | |
ಭಟ್ಕಳ: ಬಿಜೆಪಿ ಅಭ್ಯರ್ಥಿ ಅಡ್ವಾಣಿ ಸಂಘ ಪರಿವಾರದವರು. ಅವರು ಅಧಿಕಾರಕ್ಕೆ ಬಂದರೆ ವರುಣ್ ಗಾಂಧಿ ನುಡಿದಂತೆ ಯಾರ ಕೈಗಳೂ ಉಳಿಯಲಾರವು ಎಂದು ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಹೇಳಿದರು.
ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ದೇಶದಲ್ಲಿ ಅಧಿಕಾರಕ್ಕೆ ಬಂದರೆ ಒಂದೂ ಚರ್ಚು, ಮಸೀದಿಗಳು ಉಳಿಯಲಾರವು. ಜತೆಗೆ ದೇವಸ್ಥಾನಗಳೂ ಉಳಿಯುವುದಿಲ್ಲ ಎಂದರು.
ದೇಶವನ್ನು ಯಾರ ಕೈಯಲ್ಲಿ ಕೊಡಬೇಕು ಎಂದು ಚಿಂತಿಸಿ . ಕೋಮು ದಳ್ಳುರಿ ಹರಡುವ ಪಕ್ಷಕ್ಕೆ, ವಿಧ್ವಂಸಕ ಕೃತ್ಯ ಹರಡುವವರಿಗೆ ಮತ ಹಾಕಬೇಡಿ ಎಂದೂ ಹೇಳಿದರು. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮದಿದ್ದರೂ ಜಾತ್ಯತೀತ ಶಕ್ತಿಗಳು ಒಂದಾಗಲಿವೆ. ಭಾಷೆ, ಪಂಗಡ, ನಂಬಿಕೆಗಳಲ್ಲಿ ಏಕತೆ ಸಾಧಿಸುವವರು ಹಸ್ತಕ್ಕೆ ಮತ ನೀಡಿ ಎಂದು ಕರೆ ನೀಡಿದರು.
ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 71 ಸಾವಿರ ಕೋಟಿ ರೂಪಾಯಿ ರೈತರ ಸಾಲ ಮನ್ನಾಕ್ಕೆ ಪ್ರಯತ್ನಿಸಲಾಗುವುದು ಎಂದು ಹೇಳಿದರು.
| | (ಮೂಲ - ವೆಬ್‌ದುನಿಯಾ) |
| |
| | | |
|
|
|
|
|
| ದೈನಿಕ - ಕುಟುಂಬ ವ್ಯವಹಾರಗಳಲ್ಲಿ ಗಡಸು ನಿರ್ಧಾರ, ಕುಟುಂಬದ ಮೇಲೆ ಬಲವಾದ ಹಿಡಿತ ಹೊಂದುವಿರಿ. ನಿರೀಕ್ಷೆ ಮೀರಿದ ಲಾಭ, ಸಂತರ ಸಮಾಗಮದಿಂದ ಆಧ್ಯಾತ್ಮಿಕ ಪ್ರಗತಿ ಸಾಧಿಸಲು ನಿರ್ಧಾರ, ವೈಯಕ್ತಿಕ ವ್ಯವಹಾರಗಳ ಇತ್ಯರ್ಥಕ್ಕೆ ಸಾಲ ಲಭ್ಯ. ಭವಿಷ್ಯದ ಬಗ್ಗೆ ಭರವಸೆಯನ್ನಿಟ್ಟುಕೊಂಡು ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದು. ಯಾವ ಕಾರಣಕ್ಕೂ ನಿನ್ನೆಗಳ ಕಡೆ ಹಿಂದಿರುಗಿ ನೋಡಿದಿರಿ. |
| |
|
|
|
|
 | | nrb |
| | |
| |
|
|
|
|
|
| ಚಿತ್ರ ಸುದ್ದಿ - ಉಪೇಂದ್ರ ಅಭಿನಯದ ರಜನಿ ಚಿತ್ರಕ್ಕೆ ಭರದಿಂದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಒಂದು ಸುತ್ತಿನ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿದ್ದು, ಈಗ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಭರದ ಸಿದ್ಧತೆ ನಡೆಯುತ್ತಿದೆ. |
| |
|
|
|
|
|
|