ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಸಿದ್ದರಾಮಯ್ಯರನ್ನು ಲೇವಡಿ ಮಾಡಿದ ಕುಮಾರಸ್ವಾಮಿ
ಬೆಂಗಳೂರು, ಭಾನುವಾರ, 22 ಮಾರ್ಚ್ 2009   ( 13:49 IST )
ಪುಟಗೋಸಿ ವಿರೋಧ ಪಕ್ಷ ನಾಯಕ ಸ್ಥಾನಕ್ಕಾಗಿ ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ 9 ತಿಂಗಳ ಕಾಲ ಕಾಂಗ್ರೆಸ್ ಮುಖಂಡರನ್ನು ಬ್ಲಾಕ್ಮೇಲ್ ಮಾಡಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ದಲಿತ ನಾಯಕರಾಗಿರಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಲಾಗಿರುವ ವಿರೋಧ ಪಕ್ಷ ನಾಯಕನ ಸ್ಥಾನವನ್ನು ಕಸಿದುಕೊಳ್ಳಲು 9 ತಿಂಗಳುಗಳ ಕಾಲ ಕಾಂಗ್ರೆಸ್ ಮುಖಂಡರನ್ನು ಬ್ಲಾಕ್ಮೇಲ್ ಮಾಡಿದ್ದಾರೆ ಎಂದು ಟೀಕಿಸಿದರು.

"ತೃತೀಯ ರಂಗದ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ ಸಿದ್ದರಾಮಯ್ಯ, ಪ್ರಧಾನಿ ಸ್ಥಾನದ ಆಸೆಯಿಂದ ತೃತೀಯ ರಂಗ ಕಟ್ಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಆದರೆ ದೇವೇಗೌಡರಿಗೆ ಅದರ ಅಗತ್ಯವಿಲ್ಲ. ಪುಟಗೋಸಿ ವಿರೋಧ ಪಕ್ಷದ ನಾಯಕನ ಸ್ಥಾನ ಪಡೆಯಲು ಹೆಣಗಾಡುತ್ತಿರುವ ಸಿದ್ದರಾಮಯ್ಯಗೆ ದೇವೇಗೌಡರ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ" ಎಂದರು.

ಪಕ್ಷ ಸಂಘಟಿಸಲು ದೇವೇಗೌಡರು ಪಕ್ಷದ ಕಾರ್ಯಕರ್ತರ ಕಾಲು ಹಿಡಿಯುತ್ತಾರೆಯೇ ಹೊರತು ರಾಷ್ಟ್ರೀಯ ಮುಖಂಡರ ಮನೆ ಬಾಗಿಲಿಗೆ ಹೋಗುವುದಿಲ್ಲ ಎಂದರು. ಪ್ರಧಾನಿ ಹುದ್ದೆ ಆಸೆ ತನಗೆ ಅಥವಾ ದೇವೇಗೌಡರಿಗೆ ಇಲ್ಲ ಎಂದ ಕುಮಾರಸ್ವಾಮಿ, ನಾವು ರಾಜ್ಯದ ಉದ್ದಾರಕ್ಕಾಗಿ ಶ್ರಮಿಸುತ್ತೇವೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ ಎಂದರು.

(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅಂತಾರಾಜ್ಯ ಕಳ್ಳರ ಬಂಧನ
ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಜೆಡಿಎಸ್‌ಗೆ?
ಬಂಗಾರಪ್ಪ ನಾಲಿಗೆಗೆ ಬ್ರೇಕ್ ಹಾಕಲಿ: ಈಶ್ವರಪ್ಪ
ಬಿಜೆಪಿಯಿಂದ 'ಹ್ಯಾಂಡ್‌ಲೋನ್': ಖರ್ಗೆ
ತಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ: ಪೇಜಾವರಶ್ರೀ
ಸಿಇಟಿ ರದ್ದು ಆದೇಶ ವಾಪಸ್: ರಾಮಚಂದ್ರ ಗೌಡ
ಗ್ರಹ ಗತಿ
ದೈನಿಕ - ಖಾಸಗಿ ಸಂಸ್ಥೆಗಳ ನೌಕರರಿಗೆ ಪರೀಕ್ಷಾ ಸಮಯ. ಹೆಚ್ಚಿನ ಶ್ರಮವಹಿಸಿ ದುಡಿದರು ತಕ್ಕ ಪ್ರತಿಫಲ ದೊರೆಯುವುದಿಲ್ಲ. ಕೃಷಿಕರಿಗೆ ತೋಟಗಾರಿಕೆಯಲ್ಲಿ ನಿರತರಾದವರಿಗೆ ಹೆಚ್ಚಿನ ಲಾಭ. ನೀವು ಅಂದುಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲಲಿವೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ವೈಯಕ್ತಿಕ ಆಸಕ್ತಿಯಿಂದ ಭಾಗವಹಿಸಿದೆ: ಆಚಾರ್ಯ
ಹಿಂದೂ ಸಮಾಜೋತ್ಸವ ಬಿಜೆಪಿ ಕಾರ್ಯಕ್ರಮ ....
ಯಡಿಯ‌ೂರಪ್ಪ-ಅನಂತ್ ಕಳ್ಳ-ಮಳ್ಳರು: ಎಚ್‌ಡಿಕೆ
ತಾವು ಯಾವುದೇ ಪಕ್ಷಕ್ಕೆ ಸೇರಿದವರಲ್ಲ: ಪೇಜಾವರಶ್ರೀ
ಮನರಂಜನೆ
ಚಿತ್ರ ಸುದ್ದಿ - ದೇವರಾಜ್ ಅಭಿನಯದ ಮೇಷ್ಟ್ರು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರವನ್ನು ಮಹದೇವ್ ನಿರ್ದೇಶಿಸುತ್ತಿದ್ದಾರೆ. ಇವರು ಸ್ವಮೇಕ್ ಚಿತ್ರಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಮೇಷ್ಟ್ರು ಕೂಡಾ ಸ್ವಮೇಕ್
ಮುಂದೆ ಓದಿ|ಮತ್ತಷ್ಟು...