ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಟಿಕೆಟ್ ಹಂಚಿಕೆ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
ಬೆಂಗಳೂರು, 5 ಮಾರ್ಚ್ 2009   ( 10:41 IST )
ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆಯ ಕುರಿತು ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮುಖ್ಯಮಂತ್ರಿ ಅವರ ಏಕಪಕ್ಷೀಯ ತೀರ್ಮಾನ, ಕುಟುಂಬ ರಾಜಕಾರಣ, ನಿಷ್ಠಾವಂತ ಕಾರ್ಯಕರ್ತರ ಕಡೆಗಣನೆ ಇತ್ಯಾದಿ ಕಾರಣಕ್ಕೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ.

ಅಭ್ಯರ್ಥಿಗಳ ಆಯ್ಕೆ ಕುರಿತು ಹಿರಿಯ ನಾಯಕರ ಹಾಗೂ ಪಕ್ಷದ ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡದ ಮುಖ್ಯಮಂತ್ರಿಗಳು ತಮ್ಮ ಪುತ್ರನಿಗೆ ಟಿಕೆಟ್ ನೀಡುವ ಮೂಲಕ ವ್ಯಾಪಕ ಟೀಕೆಗೆ ಕಾರಣರಾಗಿದ್ದಾರೆ.

ರಾಜ್ಯದಲ್ಲಿ ಹೆಚ್ಚುವರಿ ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ಸಂಸದ ಅನಂತ್‌ಕುಮಾರ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದರಿಂದ ಅವರು ತೀವ್ರ ಬೇಸರಗೊಂಡಿದ್ದಾರೆ ಎನ್ನಲಾಗಿದೆ. ಸಿಎಂ ಪುತ್ರ ಎಂಬ ಕಾರಣಕ್ಕೆ ಹಿರಿಯ ಕಾರ್ಯಕರ್ತರನ್ನು ಕಡೆಗೆಣೆಸಿ ರಾಘವೇಂದ್ರ ಅವರಿಗೆ ಟಿಕೆಟ್ ನೀಡಬಾರದೆಂದು ಶಿವಮೊಗ್ಗ ಕ್ಷೇತ್ರದ ಜಿಲ್ಲಾ ಘಟಕ ಸ್ಪಷ್ಟವಾಗಿ ಒತ್ತಾಯಿಸಿತ್ತು. ಪಕ್ಷದ ದಿಲ್ಲಿ ವರಿಷ್ಠರಿಗೂ ದೂರು ರವಾನೆಯಾಗಿತ್ತು ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಧ್ಯಸ್ಥಿಕೆ ವಹಿಸಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು, ರಾಘವೇಂದ್ರ ಅವರಿಗೆ ಟಿಕೆಟ್ ನೀಡುವ ಪ್ರಯತ್ನವನ್ನು ಕೈಬಿಡುವಂತೆಯೂ ಕಿವಿಮಾತು ಹೇಳಿದ್ದರು. ಆದರೆ ಇದ್ಯಾವುದಕ್ಕೂ ಜಗ್ಗದ ಯಡಿಯೂರಪ್ಪನವರು ತಾವು ಹಿಡಿದ ಹಠ ಸಾಧಿಸಿದ್ದಾರೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ತೇಜಸ್ವಿನಿ-ಡಿಕೆಶಿ ಭಿನ್ನಾಭಿಪ್ರಾಯ ಇತ್ಯರ್ಥಕ್ಕೆ ಯತ್ನ: ಖರ್ಗೆ
ವಿದ್ಯುತ್ ಅಭಾವಕ್ಕೆ ಕಾಂಗ್ರೆಸ್ ಕಾರಣ: ಸಿಎಂ
ಅಧಿಕಾರಕ್ಕಾಗಿ ಕೆಲಸ ಮಾಡ್ತಿಲ್ಲ: ಸಿದ್ದರಾಮಯ್ಯ
ಗಣಿ ವಿವಾದ ಸೃಷ್ಟಿಗೆ ಗೌಡರು ಕಾರಣ: ಸಿಎಂ
ರಾಜ್ಯದಲ್ಲಿ ಒಕ್ಕಲಿಗರಿಗೆ ಅನ್ಯಾಯ: ಆರೋಪ
ಪೊಲೀಸರಿಗೆ ನೀತಿ ಸಂಹಿತೆಯ ತರಬೇತಿ
ಗ್ರಹ ಗತಿ
ದೈನಿಕ - ಕೃಷಿಕರಿಗೆ ನೂತನ ಆಲೋಚನೆಗಳು ಎದುರಾಗುತ್ತವೆ. ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತವೆ.ವ್ಯಾಪಾರಿಗಳಿಗೆ ಉತ್ತಮ ಧನಲಾಭ.ಸ್ತ್ರೀಯರಿಂದ ದೂರವಿರಿ. ಇಲ್ಲವಾದಲ್ಲಿ ಹಾನಿ ಸಂಭವ. ವಿದ್ಯಾರ್ಥಿಗಳು ಪ್ರೇಮ ಪ್ರಣಯದಿಂದ ದೂರವಿರುವುದು ಉಚಿತ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ತೇಜಸ್ವಿನಿ ವರ್ತನೆಯಿಂದ ಟಿಕೆಟ್ ತಪ್ಪಿತು: ಡಿಕೆಶಿ
ಸಂಸದೆ ತೇಜಸ್ವಿನಿ ಗೌಡ ತಾವಾಗಿಯೇ ಟಿಕೆಟ್ ತಪ್ಪಿಸಿಕೊಂಡಿದ್ದಾರೆಯೇ ವಿನಃ ಅವರಿಗೆ ಟಿಕೆಟ್ ....
ಪ್ರಧಾನಿಯಾಗುವ ಅರ್ಹತೆ ಆಡ್ವಾಣಿಗಿಲ್ಲ: ದೇಶಪಾಂಡೆ
ಬಿಜೆಪಿ ಮಡಿಲಿಗೆ ಸೇರಲಿರುವ ನಿರ್ಮಲಾ ವೆಂಕಟೇಶ್
ಮನರಂಜನೆ
ಚಿತ್ರ ಸುದ್ದಿ - ಹಾಡೊಂದರ ಸಾಲನ್ನೇ ಟೈಟಲ್ಲಾಗಿಸಿ ಬರುತ್ತಿರುವ ಚಿತ್ರ 'ಈ ಸಂಜೆ'. ಚಿತ್ರದ ಹೆಚ್ಚಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಡಬ್ಬಿಂಗ್ ಕಾರ್ಯವನ್ನು ಮುಗಿಸಿ ಈಗ ಹಿನ್ನೆಲೆ ಸಂಗೀತ ಕಾರ್ಯಕ್ಕೆ ಸಿದ್ಧತೆ
ಮುಂದೆ ಓದಿ|ಮತ್ತಷ್ಟು...