ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಪ್ರಯಾಣ ದರ ಇಳಿಕೆ ಜನಸಾಮಾನ್ಯ ತತ್ತರ
ಬೆಂಗಳೂರು, 6 ಫೆಬ್ರವರಿ 2009   ( 11:21 IST )
ನಗರದ ಪ್ರಯಾಣಿಕರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಗುರುವಾರದಿಂದ ಇಳಿಕೆಯಾದ ಬಸ್ ಪ್ರಯಾಣ ದರದ ಅನುಕೂಲ ಜನಸಾಮಾನ್ಯರಿಗೆ ದಕ್ಕಲಿಲ್ಲ. ಪುಷ್ಪಕ್ ಬಸ್ ಪಾಸ್ ಹಿಡಿದು ಸುವರ್ಣ ಸುವರ್ಣ ಬಸ್ ಹತ್ತಿದವರು ಟಿಕೆಟ್ ಪಡೆದು ಪ್ರಯಾಣಿಸಬೇಕಾಯಿತು.

'ಇಂದಿನಿಂದ ಬಸ್ ಪ್ರಯಾಣ ದರದಲ್ಲಿ ಕಡಿತ. ಜೇಬಿಗೆ ಸ್ವಲ್ಪ ಹಗುರು' ಎಂದು ಬಸ್ ಹತ್ತಿದವರಿಗೆ ಅಲ್ಲೂ ನಿರಾಶೆ. ಸಾಮಾನ್ಯ ಸಾರಿಗೆಯಲ್ಲಿ ಕೇವಲ 23 ಮಾರ್ಗಗಳಿಗೆ ಮಾತ್ರ ಒಂದು ರೂ. ಕಡಿತ ಆದ ಕಾರಣ ಅನುಕೂಲ ಪಡೆದವರು ಸ್ವಲ್ಪ ಜನ ಮಾತ್ರ.

ಈ ಬಗ್ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಮುಖ್ಯ ಸಂಚಾರ ಅಧಿಕಾರಿ ವಿಶ್ವನಾಥ್, ಸಂಪರ್ಕ ಕೊರತೆಯಿಂದಾಗಿ ಈ ಘಟನೆ ನಡೆದಿರಬಹುದು. ಎಲ್ಲಾ ಸುವರ್ಣ ಬಸ್‌ಗಳಲ್ಲೂ ಪುಷ್ಪಕ್ ಪಾಸ್‌ಗಳಿಗೆ ಅವಕಾಶ ನೀಡಲಾಗಿದೆ. ಎಲ್ಲಾ ಡಿಪೋ ಕಚೇರಿಗಳಿಗೆ ಈ ಬಗ್ಗೆ ಸುತ್ತೋಲೆ ತಲುಪಿಸಲಾಗಿದೆ.

ಕೆಲವೊಂದು ಕಡೆ ಇಂತಹ ಘಟನೆ ನಡೆದಿರಬಹುದು. ಇನ್ನೂ ಒಂದೆರಡು ದಿನ ಇಂತಹ ಪ್ರಕರಣ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಮತ್ತೊಮ್ಮೆ ಡಿಪೋಗಳಿಗೆ ಮಾಹಿತಿ ನೀಡಲಾಗುವುದು ಎಂದು ಅವರು ಹೇಳಿದರು.

ವಾಯುವಜ್ರ, ಸುವರ್ಣ ಬಸ್‌ಗಳ ಜನಪ್ರಿಯತೆಗೆ ಕಸರತ್ತು ನಡೆಸಿರುವ ಸರ್ಕಾರ ಅತಿ ಹೆಚ್ಚು 4,508 ಬಸ್‌ಗಳನ್ನು ನಂಬಿಕೊಂಡಿರುವ ಶೇ 85 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಕಣ್ಣಿಗೆ ಮಣ್ಣೆರಚಿದೆ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಮುಂದುವರಿಯಲಿದೆ ಆಪರೇಷನ್ ಕಮಲ
ಮ‌ೂವರ ಮೇಲೆ ಚಿರತೆ ದಾಳಿ
ಮುತಾಲಿಕ್ ಭಯೋತ್ಪಾದಕ: ಅನಂತಮ‌ೂರ್ತಿ
ಗೋಕರ್ಣ ದೇವಾಲಯ ವಿವಾದ: ಸರ್ಕಾರಕ್ಕೆ ನೋಟಿಸ್
ಪ್ರತಿಭಟನೆ: ಡಿಕೆಶಿ - ಕೃಷ್ಣಭೈರೇಗೌಡ ಬಂಧನ
ಭಯೋತ್ಪಾದನೆ ನಿಗ್ರಹಕ್ಕೆ ವಿದ್ಯಾರ್ಥಿಗಳಿಗೆ ಅರಿವು
ಗ್ರಹ ಗತಿ
ದೈನಿಕ - ಹಿಡಿದ ಕಾರ್ಯದಲ್ಲಿ ಜಯಗಳಿಸುವಿರಿ. ಎಲ್ಲಾ ಕೆಲಸಗಳಲ್ಲಿ ತುರಾತುರಿ ಬೇಡ. ಅಪಾಯವಿದೆ. ಸಮಾಧಾನ ಚಿತ್ತರಾಗಿರಿ. ನಿದ್ರಾ ಹೀನತೆ ಬರಲಿದೆ. ಅಪಾಯಕಾರಿ ಕೆಲಸಗಳನ್ನು ಮಾಡಲು ಹೋಗಬೇಡಿ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಕನ್ನಡಿಗರನ್ನು ಕೆಣಕಿದರೆ ತಕ್ಕ ಪಾಠ: ಯಡಿಯ‌ೂರಪ್ಪ
ಕನ್ನಡ ನೆಲ, ಜಲ, ಭಾಷೆ ರಕ್ಷಣೆಗೆ ಸರ್ಕಾರ ಬದ್ದವಾಗಿದೆ, ಈ ವಿಷಯದಲ್ಲಿ ಯಾವುದೇ...
ಪ್ರತಿಭಟನೆ: ಡಿಕೆಶಿ - ಕೃಷ್ಣಭೈರೇಗೌಡ ಬಂಧನ
ಗೋಕರ್ಣ ದೇವಾಲಯ ವಿವಾದ: ಸರ್ಕಾರಕ್ಕೆ ನೋಟಿಸ್
ಮನರಂಜನೆ
ಚಿತ್ರ ಸುದ್ದಿ - 'ಇನಿಯ'ನಿಗೆ ಗಾಯವಾಗಿದೆ. ಆದರೆ ಬೇಜಾರಿಲ್ಲದೇ ನಟಿಸುತ್ತಿದ್ದಾರೆ. 'ಮುಸ್ಸಂಜೆ ಮಾತು' ಮಹೇಶ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಬಾಲಾಜಿ ನಾಯಕನಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ನಗರದ ಬಿನ್ನಿಮಿಲ್‌ನಲ್ಲಿ...
ಮುಂದೆ ಓದಿ|ಮತ್ತಷ್ಟು...