ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ನಾಲಗೆಯಲ್ಲಿ ಹಿಡಿತವಿರಲಿ: ಖರ್ಗೆ ತಿರುಗೇಟು
ಬೆಂಗಳೂರು, 13 ಜನವರಿ 2009   ( 15:50 IST )
ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಪಕ್ಷ ಶರಣಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ರಾಜಕೀಯ ಜೀವನದುದ್ದಕ್ಕೂ ಯಾವುದೇ ಮುಖ್ಯಮಂತ್ರಿಗಳ ಜತೆ ಹೊಂದಾಣಿಕೆಯ ರಾಜಕಾರಣ ಮಾಡಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಕುಮಾರಸ್ವಾಮಿ ಅವರ ಇಂತಹ ಬಾಲಿಶ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ. ಇನ್ನಾದರೂ ಇಂತಹ ಹೇಳಿಕೆಗಳನ್ನು ಕೈ ಬಿಡಬೇಕು ಎಂದು ತಾಕೀತು ಮಾಡಿದರು. ಮುಖ್ಯಮಂತ್ರಿ ಅವರನ್ನು ಕಾಂಗ್ರೆಸ್ ಮುಖಂಡರು ಭೇಟಿ ಮಾಡಿದ್ದು ಗುಲ್ಬರ್ಗಾದಲ್ಲಿ ಜ.19 ರಂದು ನಡೆಯಲಿರುವ ಸರ್ವಧರ್ಮ ಸಮ್ಮೇಳನಕ್ಕೆ ಮುಖ್ಯಮಂತ್ರಿ ಅವರನ್ನು ಆಹ್ವಾನಿಸಲು ಹೋಗಿದ್ದೆವು. ಬದಲಾಗಿ ಸೇಡಿನ ರಾಜಕಾರಣ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳಲು ಅಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಪ್ರತಿಪಕ್ಷದಲ್ಲಿ ಕೆಲಸ ಮಾಡಿದಾಗ ಮುಖ್ಯಮಂತ್ರಿಗಳಾಗಿರುವ ಅನೇಕರ ಬಳಿ ಕೆಲಸ ಮಾಡಿದ್ದೇನೆ. ಯಾರ ಮನೆ ಬಾಗಿಲಿಗೂ ಹೋಗಿಲ್ಲ. ಕುಮಾರಸ್ವಾಮಿ ಇಂತಹ ಹೇಳಿಕೆಗಳ ಮೂಲಕ ಕಾಂಗ್ರೆಸ್ ನೈತಿಕ ಬಲ ಕುಗ್ಗಿಸಲು ಸಾಧ್ಯವಿಲ್ಲ ಎಂದರು.

ಗಣಿ ಹಗರಣ ಒತ್ತುವರಿಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬುದು ಕಾಂಗ್ರೆಸ್ ಪಕ್ಷದಿಂದ ಮೊದಲಿನಿಂದಲೂ ಬೇಡಿಕೆ ಇದೆ. ಈಗಲೂ ನಾವು ಅದೇ ಬೇಡಿಕೆಗೆ ಬದ್ಧರಾಗಿದ್ದೇವೆ. ಈ ವಿಚಾರದಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ಆಗ್ರಹಿಸಿದರು.

ಭದ್ರಾವತಿ ಶಾಸಕ ಸಂಗಮೇಶ್ ಅವರ ಮೇಲೆ ಜೆಡಿಎಸ್ ಗೂಂಡಾಗಳು ದಾಳಿ ಮಾಡಿದ್ದಾರೆ. ಆದರೆ ಅವರ ಮೇಲೆ ಕ್ರಮ ಕೈಗೊಳ್ಳುವ ಬದಲು ಸಂಗಮೇಶ್ ಅವರ ಮೇಲೆ ಪ್ರಕರಣ ದಾಖಲಿಸುವ ಪ್ರಯತ್ನ ನಡೆದಿದೆ ಎಂದು ಖರ್ಗೆ ಕಿಡಿ ಕಾರಿದರು.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಅನೈತಿಕ ಸಂಬಂಧ ತಂದ ಕುತ್ತು
ಶಾಸಕರಿಗೆ ಕೊಲೆ ಬೆದರಿಕೆಯ ಕರೆ
ಒಂದೇ ದಿನದಲ್ಲಿ 3 ವಿದ್ಯುತ್ ಒಡಂಬಡಿಕೆಗಳಿಗೆ ಸಹಿ
ಲಾರಿ ಮುಷ್ಕರ ಅಂತ್ಯ: ಸಂಕ್ರಾಂತಿಗೆ ಸಿಹಿ
ದೇವೇಗೌಡರ ಪತ್ರ: ಹೈಕೋರ್ಟ್ ನ್ಯಾಯಾಧೀಶರ ಆಕ್ರೋಶ
ಬಾಗಲಕೋಟೆ: ಬೋರ್‌ವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ
ಗ್ರಹ ಗತಿ
ದೈನಿಕ - ವಿದ್ಯಾರ್ಥಿಗಳು ಸ್ವ ಉದ್ಯೋಗದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾರೆ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಭಯಪಡಬೇಡಿ ನಿಮ್ಮೊಂದಿಗೆ ನಾವಿದ್ದೇವೆ: ಬಿದರಿ
ನಾವಿರೋದು ನಿಮ್ಮ ರಕ್ಷಣೆಗಾಗಿ. ನಡೆದ ಘಟನೆಯಿಂದ ನಿಮಗೆಷ್ಟು ಆತಂಕವಾಗಿದೆಯೋ ಅಷ್ಟೇ ಆತಂಕ...
ಜೆಡಿಎಸ್ ಕಾರ್ಯಾಧ್ಯಕ್ಷರಾಗಿ ಇಕ್ಬಾಲ್ ಅನ್ಸಾರಿ ಆಯ್ಕೆ
ಕೈದಿಗಳ ಬಿಡುಗಡೆ-ವಿವರಣೆಗೆ ಕೋರ್ಟ್ ಸೂಚನೆ
ಮನರಂಜನೆ
ಚಿತ್ರ ಸುದ್ದಿ - ಮೊಗ್ಗಿನ ಮನಸು ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿಕೊಟ್ಟ ಯಶ್ ಪೂರ್ಣ ಪ್ರಮಾಣದ ನಾಯಕರಾಗಿ ನಟಿಸಿದ 'ರಾಕಿ' ಚಿತ್ರ ಹಿಟ್ ಆಗಿದೆ. ಥಿಯೇಟರ್ ಸಮಸ್ಯೆ
ಮುಂದೆ ಓದಿ|ಮತ್ತಷ್ಟು...