ಯಾಹೂ! | ನನ್ನ ಯಾಹೂ! | ಮೇಲ್
ಶೋಧ
 
   ಮುಖ ಪುಟ ಸಮಾಚಾರ ರಾಜ್ಯ
ಕಾಂಗ್ರೆಸ್ ಕೈಬಿಡೆನು, ಹೊಸ ಪಕ್ಷ ಕಟ್ಟೆನು: ಸಿದ್ದು
ಗುರುವಾರ, 8 ಜನವರಿ 2009   ( 17:56 IST )
ನಾನು ಕಾಂಗ್ರೆಸ್ ಪಕ್ಷವನ್ನು ಬಿಡೋದು ಇಲ್ಲ, ಹೊಸ ಪಕ್ಷ ಕಟ್ಟುವುದು ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ರಾಜ್ಯದ ಎಂಟು ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಪ್ರಚಾರ ಕಾರ್ಯಕ್ಕೆ ಗೈರುಹಾಜರಾಗಿದ್ದು, ಇದರಿಂದ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದರು. ಏತನ್ಮಧ್ಯೆಯೇ ಸೋಲಿನ ನಂತರ ಕೆಪಿಸಿಸಿ ಕರೆದಿದ್ದ ಆತ್ಮಾವಲೋಕನ ಸಭೆಗೂ ಸಿದ್ದರಾಮಯ್ಯ ಕೈ ಕೊಡುವ ಮೂಲಕ ಹೊಸ ಪಕ್ಷ ಕಟ್ಟುವ ಊಹಾಪೋಹಕ್ಕೆ ಜೀವ ತುಂಬಿದ್ದರು.

ಆದರೆ ಹೊಸ ಪಕ್ಷ ಕಟ್ಟುವ ವದಂತಿಗಳನ್ನು ತಳ್ಳಿಹಾಕುತ್ತಿರುವ ಸಿದ್ದರಾಮಯ್ಯನವರು, ಮತ್ತೊಂದೆಡೆ ಕಾಂಗ್ರೆಸ್‌ನಿಂದ ದೂರ ಸರಿಯುತ್ತಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಬೆಂಬಲಿಗರು ಹೊಸ ಪಕ್ಷ ಕಟ್ಟುವ ವಿಚಾರದ ಬಗ್ಗೆ ಪ್ರಸ್ತಾಪಿಸುತ್ತಲೇ ಇದ್ದಾರೆ.

ಒಟ್ಟಿನಲ್ಲಿ ಹೊಸ ಪಕ್ಷ ಕಟ್ಟುವ ಹಾಗೂ ಮುಂದಿನ ರಾಜಕೀಯ ನಡೆ ಕುರಿತು ಜನವರಿ 5ರ ಬಳಿಕ ಬಹಿರಂಗಪಡಿಸುವುದಾಗಿ ಸಿದ್ದರಾಮಯ್ಯನವರು ಭರವಸೆ ನೀಡಿದ್ದರಾದರೂ ಕೂಡ, ಈವರೆಗೂ ಯಾವುದೇ ಗುಟ್ಟನ್ನು ರಟ್ಟು ಮಾಡಿಲ್ಲ.
(ಮೂಲ - ವೆಬ್‌ದುನಿಯಾ)
 
ಮತ್ತಷ್ಟು...
ಜಿಲ್ಲಾಧಿಕಾರಿ ಗೈರು: ಕೋರ್ಟ್‌ನಿಂದ ತರಾಟೆ
ಶ್ವೇತಭವನ ಸಮಾರಂಭಕ್ಕೆ ಬೆಂಗಳೂರಿನ ಯುವಕ
ಒಗ್ಗಟ್ಟಿನ ಕೊರತೆಯೇ ಪಕ್ಷದ ಸೋಲಿಗೆ ಕಾರಣ
ಸತ್ಯಂ ಹಗರಣ ಐಟಿ ಕಂಪೆನಿಗಳಿಗೆ ಎಚ್ಚರಿಕೆ: ಮ‌ೂರ್ತಿ
ಸಚಿವರ ವಸತಿ ಭತ್ಯೆಯಲ್ಲಿ ಏರಿಕೆ
ಮುಷ್ಕರ ಎದುರಿಸಲು ಕೇಂದ್ರದಿಂದ ಸೂಚನೆ
ಗ್ರಹ ಗತಿ
ದೈನಿಕ - ಕಾರ್ಯವೊಂದನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಸಂಗಾತಿಯ ಮಹತ್ವದ ಬೆಂಬಲ ಪಡೆಯುತ್ತೀರಿ. ಸೇವಾ ವರ್ಗದ ಜನರು ಇಂದು ದಿಢೀರ್ ಲಾಭ ಗಳಿಸುವ ಸಾಧ್ಯತೆ ಇದೆ. ನೀವಿಂದು ಮಾನಸಿಕವಾಗಿ ನಿರಾಳರಾಗಿರುತ್ತೀರಿ.
ಮುಂದೆ ಓದಿ|ಮತ್ತಷ್ಟು...
ಸಮಾಚಾರ
nrb
 
ಲಾರಿ ಮುಷ್ಕರ ಕೈಬಿಡದಿದ್ದರೆ ಎಸ್ಮಾ ಜಾರಿ: ಅಶೋಕ್
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ನಡೆಸುತ್ತಿರುವ ಲಾರಿ ಮುಷ್ಕರ ಬುಧವಾರ...
ಗುಲ್ಬರ್ಗಾ: ಬುದ್ಧ ವಿಹಾರ ಲೋಕಾರ್ಪಣೆ
ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣ: ಕತ್ತಿ
ಮನರಂಜನೆ
ಚಿತ್ರ ಸುದ್ದಿ - ಸುದೀಪ್ ನಿರ್ದೇಶಿಸಿ ನಟಿಸಿದ 'ವೀರಮದಕರಿ' ಚಿತ್ರದ ಬಗ್ಗೆ ಹೆಚ್ಚು ವಿಶ್ವಾಸವಿಟ್ಟಿದ್ದಾರೆ. ದಿನೇಶ್ ಗಾಂಧಿ ನಿರ್ಮಾಣದ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ಕೊನೆಗೆ ಸ್ವತಃ ಸುದೀಪ್ ವಹಿಸಿಕೊಂಡರು. ಚಿತ್ರದ
ಮುಂದೆ ಓದಿ|ಮತ್ತಷ್ಟು...